ಚಾಮರಾಜನಗರ: ಮೈಸೂರು- ಚಾಮರಾಜನಗರ ಜಿಲ್ಲಾ ವೀರಶೈವ- ಲಿಂಗಾಯತ ಮಠಾಧಿಪತಿಗಳ ವತಿಯಿಂದ ಯಳಂದೂರಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಆಯೋಜಿಸಲಾಗಿದ್ದ ಪರಮಪೂಜ್ಯ ರಾಜಗುರು ತಿಲಕ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 107ನೇ ಜಯಂತಿ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಶಿವದೀಕ್ಷೆ- ಲಿಂಗದೀಕ್ಷೆ ಕಾರ್ಯಕ್ರಮವನ್ನು ಮಾನ್ಯ ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.
ಕಾಯ೯ಕ್ರಮದಲ್ಲಿ ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳು, ಕುಂದೂರು ಮಠದ ಶ್ರೀ ಶರತ್ಚಂದ್ರ ಸ್ವಾಮಿಗಳು, ಹರವೆ ಶ್ರೀಗಳು, ಮುಡಿಗುಂಡ ಶ್ರೀಗಳು ಹಾಗೂ ಮೈಸೂರು – ಚಾಮರಾಜನಗರ ಜಿಲ್ಲೆಯ ಹರ ಗುರುಚರಮೂತಿ೯ಗಳು, ಜಿಲ್ಲಾಧಿಕಾರಿ ಶ್ರೀ ರಮೇಶ್, ಪೋಲೀಸ್ ವರಿಷ್ಠಾಧಿಕಾರಿ ಮತ್ತು ಅಪಾರ ಸಂಖ್ಯೆಯ ಮಠದ ಭಕ್ತರಿದ್ದರು.
https://mcvmgoshti.org/wp-content/uploads/2023/06/5.mp4