ವಿಳಾಸ:
ಷ.ಬ್ರ.ಸ್ವ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರು, ಶ್ರೀ ತೋಪಿನ ಮಠ, ಮುಡುಕುತೊರೆ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ ಮೊ. +919972268153, +919448345188
ಮಠದ ವಿವರ:
ಟಿ.ನರಸೀಪುರ ತಾಲ್ಲೂಕಿನಲ್ಲಿ, ತಾಲ್ಲೂಕು ಕೇಂದ್ರದಿಂದ ಈಶಾನ್ಯಕ್ಕೆ 26 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರ ಪುರಾಣ ಪ್ರಸಿದ್ಧ ತಲಕಾಡಿನ ಪಂಚಲಿಂಗ ಕ್ಷೇತ್ರದ ಭಾಗವಾಗಿ ಶ್ರೀ ಮಲ್ಲಿಕಾರ್ಜುನ ದೇವರು ಸ್ಥಾಪಿತವಾಗಿದೆ. ಮಠದ ಮುಖ್ಯ ಗುರುಗಳು ಪ್ರಾಚೀನ ಕಾಲದಿಂದಲೂ ಮಠವನ್ನು ಶಾಖಾಮಠವಾಗಿ ಬೆಳೆಸಿದ್ದು, ರಂಭಾಪುರಿ ಪೀಠದ ಶಾಖೆಯಾಗಿದೆ. ತೋಪಿನಲ್ಲಿ ಸ್ಥಾಪಿತವಾದ ಈ ಮಠವು ಈಗ ಕಾಂಕ್ರಿಟ್ ಸಂಕೀರ್ಣವಾಗಿ ಮಾರ್ಪಟ್ಟಿದೆ. ವೀರಶೈವ ಧರ್ಮದ ಆಚರಣೆಗಳು ಬಹಳ ವಿಧಿವತ್ತಾಗಿ ನಡೆಸಲಾಗುತ್ತಿವೆ.
ಪರಂಪರೆ:
- ಷ.ಬ್ರ.ಸ್ವ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಎರಡನೆಯ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಮಹಾಲಿಂಗ ಶಿವಾಚಾರ್ಯ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಶ್ರೀ ತೋಪಿನ ಮಠದಲ್ಲಿ ದಾಸೋಹ ನಿಲಯ, ಕಲ್ಯಾಣ ಮಂಟಪ, ಪ್ರಾರ್ಥನಾ ಮಂದಿರ, ಭ್ರಮರಾಂಬ ನಿಕೇತನದಂತಹ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಭಕ್ತರಿಗೆ ಆಶ್ರಯ ಹಾಗೂ ಊಟದ ವ್ಯವಸ್ಥೆ, ಜಾತ್ರಾ ಸಂದರ್ಭಗಳಲ್ಲಿ ಭಕ್ತರಿಗೆ ಆತಿಥ್ಯ ಸೇವೆಗಳು, ರೇಣುಕಾಚಾರ್ಯರ ಗುಡಿಯ ನಿರ್ಮಾಣ (1990) ಮತ್ತು ಗೋಡೆಗಳ ಮೇಲೆ ಶ್ಲೋಕಗಳನ್ನು ಬರೆದು ವೀರಶೈವ ಸಿದ್ಧಾಂತದ ಪ್ರಚಾರ ನಡೆಯುತ್ತಿದೆ.
ಸಾಮಾಜಿಕ ಕಾರ್ಯಗಳು:
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲಾಶ್ರಮದ ಸ್ಥಾಪನೆಯೂ ಆಗಿದ್ದು, ಇಲ್ಲಿ 30-40 ವಿದ್ಯಾರ್ಥಿಗಳು ವೀರಶೈವ ಧರ್ಮದ ಅಧ್ಯಯನ, ಶಿವಪೂಜಾ ನಿಧಿ ಪೂರ್ವಪ್ರಯೋಗ, ಜ್ಯೋತಿಷ್ಯಶಾಸ್ತ್ರ ಕಲಿತಿದ್ದಾರೆ.