ವಿಳಾಸ:
ಷ.ಬ್ರ.ಸ್ವ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳವರು, ಶ್ರೀ ಪಟ್ಟದ ಮಠ, ಕಳ್ಳಿಪುರ, ಚಿದರವಳ್ಳಿ ಅಂಚೆ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ ಮೊ. +919900664019
ಮಠದ ವಿವರ:
ಪಟ್ಟದಮಠ: ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿಪೀಠದ ಶಾಖಾಮಠವಾದ ಶ್ರೀ ಪಟ್ಟದ ಮಠವು ಕಳ್ಳೀಪುರ ಗ್ರಾಮದ ಮಧ್ಯದಲ್ಲಿ ಸ್ಥಾಪಿತವಾಗಿ ಧಾರ್ಮಿಕ ಕ್ರಿಯೆಗಳ ಕೇಂದ್ರಬಿಂದುವಾಗಿ ಬೆಳೆದಿದೆ. ಲೋಕಸಂಚಾರಕ್ಕೆಂದು ಬಂದ ಶರಣರೊಬ್ಬರು ಈ ಗ್ರಾಮದಲ್ಲಿ ನೆಲೆನಿಂತು ಮಠ ಸ್ಥಾಪನೆ ಮಾಡಿದ್ದರು. ೧೯೭೨ರಲ್ಲಿ ಲಿಂಗೈಕ್ಕರಾದ ಶ್ರೀ ಗುರುಪಾದ ಶಿವಾಚಾರ್ಯ ಸ್ವಾಮಿಗಳ ಗದ್ದುಗೆ ಹಾಗೂ ೧೯೮೦ರಲ್ಲಿ ಲಿಂಗೈಕ್ಕರಾದ ಶ್ರೀ ಬಸವರಾಜ ಶಿವಾಚಾರ್ಯ ಸ್ವಾಮಿಗಳ ಗದ್ದುಗೆಗಳು ಮಠದ ಹೊರ ಆವರಣದಲ್ಲಿ ನೋಡಸಿಗುತ್ತವೆ. ಮಠದ ಕಟ್ಟಡವನ್ನು ೧೯೫೦ರಲ್ಲಿ ಹೊಸದಾಗಿ ಕಟ್ಟಲಾಗಿದೆ.
ಪರಂಪರೆ:
- ಷ.ಬ್ರ. ಶ್ರೀ ಚನ್ನಬಸಪ್ಪ ಶಿವಾಚಾರ್ಯಸ್ವಾಮಿಗಳು
- ಷ.ಬ್ರ. ಶ್ರೀ ಗುರುಪಾದ ಶಿವಾಚಾರ್ಯಸ್ವಾಮಿಗಳು
- ಷ.ಬ್ರ. ಶ್ರೀ ಬಸವರಾಜ ಶಿವಾಚಾರ್ಯಸ್ವಾಮಿಗಳು
- ಷ.ಬ್ರ. ಶ್ರೀ ಗುರುಪಾದ ಶಿವಾಚಾರ್ಯಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಮಠದಲ್ಲಿ ಪ್ರತಿನಿತ್ಯ ಪೂಜಾಕಾರ್ಯಗಳ ಜೊತೆಗೆ ಶಿವರಾತ್ರಿ, ಶ್ರಾವಣ, ಕಾರ್ತಿಕಮಾಸ ಹಾಗೂ ಧನುರ್ಮಾಸಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಭಕ್ತರ ಮನೆಯಲ್ಲಿ ಧಾರ್ಮಿಕ ಕ್ರಿಯಾದಿಗಳಲ್ಲಿ ಪಾಲ್ಗೊಂಡು ಸಂಸ್ಕಾರ ನೀಡಲಾಗುತ್ತಿದೆ.
ಸಾಮಾಜಿಕ ಕಾರ್ಯಗಳು: