ವಿಳಾಸ:
ಷ.ಬ್ರ.ಸ್ವ ಶ್ರೀ ಇಮ್ಮಡಿ ಮಡಿವಾಳಸ್ವಾಮಿಗಳವರು, ಷ.ಬ್ರ.ಸ್ವ ಶ್ರೀ ಅಡವೀ ಸ್ವಾಮಿಗಳು, ಶ್ರೀ ಮಡಿವಾಳಸ್ವಾಮಿ ಮಠ, ರಾಮಾನುಜ ರಸ್ತೆ, ಮೈಸೂರು – 570004ಮೊ. +919741519691,+919945637247
ಮಠದ ವಿವರ:
ನಗರದ ರಾಮಾನುಜ ರಸ್ತೆಯಲ್ಲಿ ಸ್ಥಾಪನೆಯಾಗಿರುವ ಶ್ರೀ ಮಡಿವಾಳಸ್ವಾಮಿ ಮಠವು ಶ್ರೀ ಬಸವಲಿಂಗ ಸ್ವಾಮಿಗಳಿಂದ ಪ್ರಾರಂಭಗೊಂಡಿದೆ. ಕಿತ್ತೂರು ಮಠದಲ್ಲಿ ಅನೇಕ ಲೀಲೆಗಳನ್ನು ಮಾಡಿದ ಶ್ರೀ ಮಡಿವಾಳೇಶ್ವರರು ಲೋಕಸಂಚಾರ ಕೈಗೊಂಡು ಅನೇಕ ಸ್ಥಳಗಳನ್ನು ಜಾಗೃತ ಕ್ಷೇತ್ರಗಳನ್ನಾಗಿ ಮಾಡಿ ಇಲ್ಲಿಗೆ ಆಗಮಿಸಿ ಅನುಷ್ಠಾನ ಕೈಗೊಂಡರು.ಇವರು ಇಲ್ಲಿ ನೆಲೆಸಿ ಧರ್ಮೋಪದೇಶದ ಮೂಲಕ ಸಮಾಜವನ್ನು ಬೆಳೆಸಿ ಲಿಂಗೈಕೈರಾದರು. ಶ್ರೀ ಮಡಿವಾಳೆ ಸ್ವಾಮಿಗಳ ಗದ್ದುಗೆಯ ಮೇಲೆ ಮಠವು ನಿರ್ಮಾಣಗೊಂಡಿದೆ.ಶ್ರೀ ಪಟ್ದದ ಬಸವಲಿಂಗ ಸ್ವಾಮಿಗಳು ೧೯೭೦ರಲ್ಲಿ ಮಠದ ಆಡಳಿತವನ್ನು ವಹಿಸಿಕೊಂಡರು.
ಪರಂಪರೆ:
- ಷ.ಬ್ರ.ಸ್ವ ಶ್ರೀ ಬಸವಲಿಂಗ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಇಮ್ಮಡಿ ಮಡಿವಾಳ ಸ್ವಾಮಿಗಳು
ಧಾರ್ಮಿಕ ಕಾರ್ಯಗಳು:
ಮಠದ ಆವರಣದಲ್ಲಿ ಸ್ಥಾಪನೆಯಾಗಿರುವ ಶ್ರೀ ಮಡಿವಾಳ ಸ್ವಾಮಿಗಳ ಗದ್ದುಗೆಗೆ ಎರಡು ವೇಳೆ ಪೂಜೆ ನಡೆಯುತ್ತದೆ. ಆಮಾವಾಸ್ಯೆ, ಹುಣ್ಣಿಮೆ, ಶಿವರಾತ್ರಿ, ಕಾರ್ತೀಕ, ಧನುರ್ಮಾಸಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಭಾದ್ರಪದ ಮಾಸದಲ್ಲಿ ಮಡಿವಾಳೇಶ್ವರ ಪುಣ್ಯಾರಾಧನೆಯನ್ನು ಆಚರಿಸಲಾಗುತ್ತದೆ.
ಸಾಮಾಜಿಕ ಕಾರ್ಯಗಳು:
ಮಠವು ಕಡೆಯಭಿಕ್ಷ ಕಾಯಕದ ಮೂಲಕ ದಾಸೋಹ ಸೇವೆಯನ್ನು ನಡೆಸುತ್ತಿದೆ. ಮಠದ ಆವರಣದಲ್ಲಿ ೧೯೭೩ರಲ್ಲಿ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸಲಾಗಿದೆ.