ವಿಳಾಸ:
ನಿ.ಪ್ರ.ಸ್ವ. ಶ್ರೀ ಮಲ್ಲೇಶಸ್ವಾಮಿಗಳು, ವಿರಕ್ತಮಠ, ಎಲೆಮುದ್ದನಹಳ್ಳಿ, ಅಂಕನಹಳ್ಳಿ ಅಂಚೆ, ಮಿರ್ಲೆ ಹೋಬಳಿ, ಕೆ.ಆರ್. ನಗರ ತಾಲ್ಲೂಕು, ಮೈಸೂರು ಜಿಲ್ಲೆ. ಮೊ. 9449202089
ಮಠದ ವಿವರ:
ಎಲೆಮುದ್ದನಹಳ್ಳಿಯು ಕೆ.ಆರ್.ನಗರದ ಪಶ್ಚಿಮಕ್ಕೆ ಸುಮಾರು 25 ಕಿ.ಮೀ. ದೂರದಲ್ಲಿರುವ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರರು ಕೆಲ ಕಾಲ ಅನುಷ್ಠಾನ ನಡೆಸಿದ ನೆನೆಪಿಗೆ ಶ್ರೀ ವಿರಕ್ತಮಠವನ್ನು ಸ್ಥಾಪಿಸಲಾಗಿದೆ. ಈ ಮಠವು ಹತ್ತೊಂಬತ್ತನೆಯ ಶತಮಾನದಲ್ಲಿ ಸ್ಥಾಪನೆಯಾಗಿ, ಧಾರ್ಮಿಕ ಚಟುವಟಿಕೆಗಳಿಗೆ ಕೇಂದ್ರವಾಗಿದೆ.
ಪರಂಪರೆ:
- ನಿ.ಪ್ರ.ಸ್ವ. ಶ್ರೀ ಮಲ್ಲೇಶಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಕಾರ್ತಿಕ ಹಾಗೂ ಶ್ರಾವಣ ಮಾಸಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಮಠದ ಆವರಣದಲ್ಲಿ ಶ್ರೀ ಸಿದ್ದಲಿಂಗೇಶ್ವರರ ತೋರುಗದ್ದುಗೆ ಹಾಗೂ ಸ್ಥಾಪಕ ಗದ್ದುಗೆಗಳನ್ನು ನವೀಕರಿಸಲಾಗಿದೆ. ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.
ಸಾಮಾಜಿಕ ಕಾರ್ಯಗಳು:
ಗ್ರಾಮಸ್ಥರ ಸಹಕಾರದೊಂದಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತಿದೆ. ಮುಕ್ತವಾಗಿ ಭಕ್ತರಿಗೆ ಮಾರ್ಗದರ್ಶನ ನೀಡುವ ಕಾರ್ಯಗಳು ನಡೆದು ಬರುತ್ತಿವೆ.