ಶ್ರೀ ವಿರಕ್ತ ಮಠ, ಸೂರಹಳ್ಳಿ

ವಿಳಾಸ:

ನಿ.ಪ್ರ.ಸ್ವ. ಶ್ರೀ ನಾಗಭೂಷಣಸ್ವಾಮಿಗಳವರು, ಶ್ರೀ ವಿರಕ್ತ ಮಠ, ಸೂರಹಳ್ಳಿ, ಕಸುವಿನ ಹಳ್ಳಿ ಅಂಚೆ , ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ- 571118
ಮೊ: +919900744693 / +919740301226

ಮಠದ ವಿವರ:

ಸೂರಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಶ್ರೀ ವಿರಕ್ತಮಠವು ಮುರುಘಾ ಸಮಯದ ಮಠವಾಗಿದ್ದು, ಈ ಗ್ರಾಮದ ಧಾರ್ಮಿಕ ಜಾಗೃತ ಸ್ಥಾನವಾಗಿ ರೂಪುಗೊಂಡಿದೆ. ಹಿಂದೆ ಶ್ರೀ ಸಿದ್ಧಲಿಂಗೇಶ್ವರ ಜತೆ ಬಂದಿದ್ದ ನೂರೊಂದು ವಿರಕ್ತರಲ್ಲಿ ಒಬ್ಬರು ಈ ಸ್ಥಳದಲ್ಲಿ ನೆಲೆನಿಂತು ಸ್ಥಾಪನೆಗೊಂಡು ಲಿಂಗೈಕ್ಯರಾದರು. ಇವರ ಗದ್ದುಗೆ ಸೂರಹಳ್ಳಿಯಲ್ಲಿ ನಿರ್ಮಾಣಗೊಂಡಿದೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ಗದ್ದುಗೆಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ ಗಂಗಾಧರೇಶ್ವರ ಸ್ವಾಮಿಗಳು
  3. ನಿ.ಪ್ರ.ಸ್ವ. ಶ್ರೀ ನಾಗಭೂಷಣ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದೊಳಗಿನ ಗದ್ದುಗೆಸ್ವಾಮಿಗಳ ಗದ್ದುಗೆ, ಹೊರಗಿರುವ ಶ್ರೀ ಗಂಗಾಧರೇಶ್ವರ ಸ್ವಾಮಿಗಳ ಗದ್ದುಗೆ, ಹಾಗೂ ಶ್ರೀ ಮಹಾದೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ಎರಡು ವೇಳೆ ಪೂಜೆ ನಡೆಯುತ್ತಿದೆ. ದೀಪಾವಳಿ, ಕಾರ್ತಿಕೋತ್ಸವ, ಶ್ರಾವಣ ಮಾಸ ಹಾಗೂ ಶಿವರಾತ್ರಿಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಸಾಮಾಜಿಕ ಕಾರ್ಯಗಳು: