ವಿಳಾಸ:
ಷ.ಬ್ರ.ಸ್ವ. ಡಾ ಶ್ರೀ ಸಿದ್ಧಲಿಂಗಶಿವಾಚಾರ್ಯ ಸ್ವಾಮಿಗಳವರು, ಸೂರ್ಯಸಿಂಹಾಸನ ಮಠ, ವಾಟಾಳು, ಟಿ.ನರಸೀಪುರ ತಾಲ್ಲೂಕು , ಮೈಸೂರು ಜಿಲ್ಲೆ- 571124 ಮೊ. +919964068565
ಮಠದ ವಿವರ:
ಟಿ.ನರಸೀಪುರ ತಾಲ್ಲೂಕಿನ ವಾಟಾಳು ಗ್ರಾಮವು ತಾಲ್ಲೂಕು ಕೇಂದ್ರ ಸ್ಥಳದಿಂದ ದಕ್ಷಿಣಕ್ಕೆ ಹತ್ತು ಕಿ.ಮೀ. ದೂರದಲ್ಲಿದೆ. ಇಲ್ಲಿ ಶ್ರೀ ಸಂಸ್ಥಾನಮಠವು ಅಸ್ತಿತ್ವದಲ್ಲಿದೆ. ವಾಟಾಳು ಗ್ರಾಮದಲ್ಲಿ ಶ್ರೀಶೈಲ ಪೀಠದ ಪರಂಪರೆಯ ಶ್ರೀ ಸಂಸ್ಥಾನಮಠವು ಸ್ಥಾಪನೆಯಾಗಿದೆ. ಈ ಮಠವು ಸುಮಾರು ಹತ್ತನೆಯ ಶತಮಾನದಲ್ಲಿ ಪ್ರಾರಂಭವಾಗಿ ಭಕ್ತರ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಮಠದ ಒಳ ಆವರಣದಲ್ಲಿ ೮ ಗದ್ದುಗೆಗಳಿವೆ. ಈ ಎಲ್ಲಾ ಗದ್ದುಗೆಗಳಲ್ಲಿ ಲಿಂಗ ಪ್ರತಿಷ್ಠಾಪನೆ ಹಾಗೂ ಪೂಜಾ ವ್ಯವಸ್ಥೆ ಇದೆ. ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು ದಾಸೋಹಮೂರ್ತಿಗಳಾಗಿದ್ದು, ಅವರನ್ನು “ಅನ್ನದಾನ ಮಹಾಪ್ರಭು” ಎಂದು ಕರೆಯಲಾಗುತ್ತಿತ್ತು. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಧಾರ್ಮಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಬಸವಲಿಂಗ ಶಿವಾಚಾರ್ಯಸ್ಥಾಮಿಗಳು
- ಷ.ಬ್ರ.ಸ್ವ. ಶ್ರೀ ಗುರುಸಿದ್ದ ದೇಶಿಕೇಂದ್ರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಬಸವಲಿಂಗ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಪ್ರತಿ ವರ್ಷ, ಕರ್ತೃಗುರುಗಳ ಹಾಗೂ ಗದ್ದುಗೆಗಳ ಹೆಸರಿನಲ್ಲಿ ಆರಾಧನೆ ನಡೆಯುತ್ತದೆ. ನಾಡಿನ ಹೆಸರಾಂತ ವಿದ್ವಾಂಸರು ಹಾಗೂ ಮಠಾಧೀಶರು ಪಾಲ್ಗೊಂಡು ಸಾಧಕರಿಗೆ ಸನ್ಮಾನ ನೀಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಪ್ರವಚನ, ಕಾರ್ತೀಕ ಮಾಸದಲ್ಲಿ ಕಾರ್ತೀಕೋತ್ಸವ, ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಪ್ರವಚನ, ಮಹಾಶಿವರಾತ್ರಿ ಮತ್ತು ಗೌರಿಹಬ್ಬಗಳನ್ನು ಭಕ್ತರೊಂದಿಗೆ ಸಾಮೂಹಿಕವಾಗಿ ಆಚರಿಸಲಾಗುತ್ತದೆ. ನಿತ್ಯ ಅನ್ನದಾಸೋಹವೂ ನಡೆಯುತ್ತದೆ.
ಸಾಮಾಜಿಕ ಕಾರ್ಯಗಳು: