ಶ್ರೀ ಅನ್ನದಾನೇಶ್ವರ ಮಠ

ವಿಳಾಸ:

ನಿ.ಪ್ರ.ಸ್ವ. ಶ್ರೀ ಶಿವಾನಂದ ಸ್ವಾಮಿಗಳವರು, ಶ್ರೀ ಅನ್ನದಾನೇಶ್ವರ ಮಠ, ಟಿ ನರಸೀಪುರ ರಸ್ತೆ, ಸಿದ್ದಾರ್ಥನಗರ, ಮೈಸೂರು – 570004
ಮೊ. +91 9980615109

ಮಠದ ವಿವರ:

ಅನ್ನದಾನೇಶ್ವರಮಠ ಮೈಸೂರಿನ ಸಿದ್ದಾರ್ಥನಗರ ಬಡಾವಣೆಯಲ್ಲಿದೆ.ಮಠದ ಮೂಲ ಕತೃಗಳಾದ ಶ್ರೀ ಅನ್ನದಾನೇಶ್ವರಸ್ವಾಮಿಗಳು ಮಂಡ್ಯ ಜಿಲ್ಲೆಯ ಅವ್ವೆರಹಳ್ಳಿಯ ಮಠದ ಮಠಾಧೀಶರಾಗಿದ್ದರು. ಇವರು ಲೋಕಸಂಚಾರಮಾಡಿ, ಮೈಸೂರಿನಲ್ಲಿಅನುಷ್ಠಾನ ಕೈಗೊಂಡು ಮಠವನ್ನು ಸ್ಥಾಪಿಸಿದರು. ಶ್ರೀ ಅನ್ನದಾನೇಶ್ವರರು ಮಠದ ಸ್ಥಾಪಕರಾಗಿದ್ದರಿಂದ ಶ್ರೀ ಅನ್ನದಾನೇಶ್ವರಮಠ ಎಂಬ ಹೆಸರು ಬಂದಿದೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ಅನ್ನದಾನೇಶ್ವರಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ ಶಿವಾನಂದಸ್ವಾಮಿಗಳು
  3. ನಿ.ಪ್ರ.ಸ್ವ. ಶ್ರೀ ಅನ್ನದಾನಸ್ವಾಮಿಗಳು
  4. ನಿ.ಪ್ರ.ಸ್ವ. ಶ್ರೀ ಶಿವನಂಜದೇಶಿಕೇಂದ್ರಸ್ವಾಮಿಗಳು
  5. ನಿ.ಪ್ರ.ಸ್ವ. ಶ್ರೀ ಶಿವಲಿಂಗಶಿವಯೋಗಿಸ್ವಾಮಿಗಳು
  6. ನಿ.ಪ್ರ.ಸ್ವ. ಶ್ರೀ ಮಹಾಂತಪ್ಪಸ್ವಾಮಿಗಳು
  7. ನಿ.ಪ್ರ.ಸ್ವ. ಶ್ರೀ ಶಿವಾನಂದಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು:

ವಿದ್ವಾನ್ ಶ್ರೀ ಶಿವಾನಂದಸ್ವಾಮಿಗಳು ಕಳೆದ ಮೂವತ್ತೈದು ವರ್ಷಗಳಿಂದ ಸಂಗ್ರಹಿಸಿದ ಪುಸ್ತಕಗಳು ಇಂದು ಮಠದಲ್ಲಿವೆ. ಈ ಗ್ರಂಥಾಲಯದಲ್ಲಿ ವಿವಿಧ ಪ್ರಕಾರದ ಪುಸ್ತಕಗಳು ಲಭ್ಯವಿವೆ. ಗುರುಗಳು ಮಠದ ಆಚರಣೆ ಮತ್ತು ಭಕ್ತರ ಉದ್ಧಾರಕ್ಕಾಗಿ ಶ್ರಮವಹಿಸಿದ್ದಾರೆ. ಈ ರೀತಿಯಾಗಿ ಭಕ್ತರಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು, ಮಠವನ್ನು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸಿದ್ದಾರೆ.ಪರಂಪರೆಯ ಗುರುಗಳ ಗದ್ದುಗೆಗಳಿದ್ದು, ನಿತ್ಯ ಪೂಜೆ ಮತ್ತು ಹಿರಿಯ ಗುರುಗಳ ಪುಣ್ಯಾರಾಧನೆ ಕಾರ್ಯಕ್ರಮಗಳು ನಡೆಯುತ್ತಿವೆ.