ವಿಳಾಸ:
ವಿ.ಪ್ರ.ಸ್ವ ಶ್ರೀ ಗೌರಿಶಂಕರ ಸ್ವಾಮಿಗಳವರು, ಶ್ರೀ ಬೆಟ್ಟದ ಮಠ, ಮದ್ಗಾರ ಲಿಂಗಯ್ಯನ ಹುಂಡಿ (ಉಕ್ಕಲಗೆರೆ), ಟಿ.ನರಸೀಪುರ ತಾಲ್ಲೂಕು , ಮೈಸೂರು ಜಿಲ್ಲೆ – 571120 ಮೊ. +919242111650
ಮಠದ ವಿವರ:
ಟಿ. ನರಸೀಪುರ ತಾಲ್ಲೂಕಿನ ಮದ್ಗಾರಲಿಂಗಯ್ಯನಹಂಡಿಯು ತಾಲ್ಲೂಕು ಕೇಂದ್ರದಿಂದ ಈಶಾನ್ಯಕ್ಕೆ ಹತ್ತು ಕಿ.ಮೀ ದೂರದಲ್ಲಿದೆ. ಇಲ್ಲಿ ಶ್ರೀ ಉಕ್ಕಲಗೆರೆ ಬೆಟ್ಟದ ಮಠ ಅಸ್ತಿತ್ವದಲ್ಲಿದೆ. ಉಕ್ಕಲಗೆರೆ ಸರಹದ್ದಿಗೆ ಒಳಪಡುವ ಮದ್ಗಾರಲಿಂಗಯ್ಯನಹಂಡಿ ಗ್ರಾಮದ ಬೆಟ್ಟದ ಪಕ್ಕದಲ್ಲಿ ಮಠವು ಸ್ಥಾಪಿತವಾಗಿರುವುದರಿಂದ ‘ಶ್ರೀ ಉಕ್ಕಲಗೆರೆ ಬೆಟ್ಟದ ಮಠ’ ಎಂಬ ಹೆಸರು ಬಂದಿದೆ. ಪ್ರಕೃತಿಯ ಸೊಬಗಿನ ಮಧ್ಯದಲ್ಲಿರುವ ಈ ಮಠವು ಹನ್ನೆರಡನೆಯ ಶತಮಾನದಲ್ಲಿ ಸ್ಥಾಪನೆಯಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಜಡೆಚಿಕ್ಕಯ್ಯ ಮತ್ತು ಶ್ರೀ ನೆರೆಚಿಕ್ಕಯ್ಯ ಎಂಬ ಶರಣರು ದಕ್ಷಿಣಾಭಿಮುಖವಾಗಿ ಬಂದು ಈ ಬೆಟ್ಟದಲ್ಲಿ ಅನುಷ್ಠಾನಗೊಂಡು, ಈ ಕ್ಷೇತ್ರವನ್ನು ಜಾಗೃತ ಸ್ಥಳವಾಗಿ ಮಾಡಿ ಮಠವನ್ನು ಸ್ಥಾಪಿಸಿದ್ದಾರೆ ಎಂಬ ನಂಬಿಕೆ ಇದೆ.
ಪರಂಪರೆ:
- ಶ್ರೀ ಮ.ನಿ.ಪ್ರ. ಜಡೆಚಿಕ್ಕಯ್ಯ ಸ್ವಾಮಿಗಳು
- ಶ್ರೀ ಮ.ನಿ.ಪ್ರ. ನೆರೆಚಿಕ್ಕಯ್ಯ ಸ್ವಾಮಿಗಳು
- ಶ್ರೀ ಮ.ನಿ.ಪ್ರ. ಶಾಂತಒಡೆಯರು
- ಶ್ರೀ ಮ.ನಿ.ಪ್ರ. ಎರಡನೆಯ ಶಾಂತಒಡೆಯರು
- ಶ್ರೀ ಮ.ನಿ.ಪ್ರ. ವಿರೂಪಾಕ್ಷಸ್ವಾಮಿಗಳು
- ಶ್ರೀ ಮ.ನಿ.ಪ್ರ. ನಂಜುಂಡ ಶಿವಯೋಗಿಗಳು
- ಶ್ರೀ ಮ.ನಿ.ಪ್ರ. ವೀರಪ್ಪ ಸ್ವಾಮಿಗಳು
- ಶ್ರೀ ಮ.ನಿ.ಪ್ರ. ಶಿವಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಶ್ರೀ ಶಿವಸ್ವಾಮಿಗಳು ಹಳೆಯ ಎಂಟು ಗದ್ದುಗೆಗಳನ್ನು ನವೀಕರಿಸಿ ಪ್ರತಿದಿನ ನಿತ್ಯಪೂಜೆ ನಡೆಯುವಂತೆ ಮಾಡಿದ್ದಾರೆ.
ಸಾಮಾಜಿಕ ಕಾರ್ಯಗಳು: