ವಿಳಾಸ:
ಷ.ಬ್ರ.ಸ್ವ ಶ್ರೀ ಷಡಕ್ಷರದೇಶಿಕೇಂದ್ರಸ್ವಾಮಿಗಳವರು, ಶ್ರೀ ಸುತ್ತೂರು ಶಾಖಾ ಮಠ, ಹಲವಾರ – ಮುಡುಕನಪುರ, ಟಿ.ನರಸೀಪುರ ತಾಲ್ಲೂಕು ,ಮೈಸೂರು ಜಿಲ್ಲೆ – 571120 ಮೊ. +919481817799
ಮಠದ ವಿವರ:
ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕು, ಮುಡುಕನಪುರದ ಶ್ರೀ ಹಲವಾರ ಮಠವು 650 ವರ್ಷಗಳ ಹಿಂದಿನದಾಗಿದ್ದು, ಶ್ರೀ ಮುನೇಶ್ವರರು ಹಾಗೂ ಶ್ರೀ ಮಹದೇಶ್ವರರು ತಪಸ್ಸು ಮಾಡಿದ ಪುಣ್ಯ ಸ್ಥಳವಾಗಿದ್ದು, ಸುಮಾರು 250 ವರ್ಷಗಳ ಹಿಂದೆ ಶ್ರೀ ಸಂಗಮೇಶ್ವರ ಸ್ವಾಮಿಗಳು ಪಟ್ಟಾಧಿಕಾರಿಗಳಾಗಿ ಈ ಭಾಗದ ಜನರಿಗೆ ಗುರುವರ್ಯರಾಗಿ ತಮ್ಮ ಸೇವಾ ಕಂಕೈರ್ಯಗಳನ್ನು ಮಾಡುತ್ತಾ, ಪೂಜಾನಿಷ್ಠರು ಹಾಗೂ ಜ್ಞಾನಿಗಳಾಗಿ ಸೇವೆ ಗೈದಿರುತ್ತಾರೆ ನಂತರ ಶ್ರೀ ಸುತ್ತೂರು ಖಾಸ ಶಾಖ ಮಠವಾಗಿದ್ದು, ಮೇ 14 – 1985ರಲ್ಲಿ ಲಿಂಗೈಕ್ಯ ಜಗದ್ಗುರು ಶ್ರೀ ಶಿವರಾತ್ರಿ ಮಹಾಸ್ವಾಮಿಗಳವರು ಶ್ರೀ ಹಲವಾರ ಮಠಕ್ಕೆ ಷಡ್ಸ್ಥಲ ಬ್ರಹ್ಮೋಪದೇಶವನ್ನು ಷ.ಬ್ರ. ಶ್ರೀ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮಿಗಳು ಎಂಬ ಅಭಿದಾನವನ್ನಿಟ್ಟು ಆಶೀರ್ವದಿಸಿ ಶ್ರೀ ಮಠಕ್ಕೆ ಅಧ್ಯಕ್ಷರನ್ನಾಗಿ ನಿಯೋಜಿಸಿರುತ್ತಾರೆ ಅಂದಿನಿಂದ ಶ್ರೀಗಳು ಶ್ರೀಮಠದ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಶ್ರೀ ಮಹದೇಶ್ವರರ ತಪೋಭೂಮಿಯಾಗಿರುವುದರಿಂದ ಶ್ರೀ ಮಹದೇಶ್ವರರ ದೇವಸ್ಥಾನವನ್ನು ಹಾಗೂ ಬ್ರಹ್ಮೋಪದೇಶವನ್ನು ನೀಡಿದ ಶ್ರೀಗಳ ಹೆಸರಿನಲ್ಲಿ ಪ್ರಾರ್ಥನ ಮಂದಿರವನ್ನು ನಿರ್ಮಿಸಲು ಮುಂದಾಗಿ ಕಟ್ಟಡವು ಪೂರ್ಣಾಂತದಲ್ಲಿವೆ ಇಂತಹ ಮಹಾತ್ಕಾರ್ಯಗಳನ್ನು ಮಾಡುತ್ತಾ ಹಿಂದಿನ ಗುರುಗಳ ಆಶಯದಂತೆ ಈ ಭಾಗದಲ್ಲಿ ಅಪಾರ ಭಕ್ತ ಸಮೂದಾಯವನ್ನು ಹೊಂದಿರುತ್ತಾರೆ.ಪರಂಪರೆ:
- ಷ.ಬ್ರ.ಸ್ವ ಶ್ರೀ ಷಡಕ್ಷರದೇಶಿಕೇಂದ್ರಸ್ವಾಮಿಗಳು