ವಿಳಾಸ:
ಷ.ಬ್ರ.ಸ್ವ. ಶ್ರೀ ಶಿವಕುಮಾರಸ್ವಾಮಿಗಳವರು, ಶ್ರೀ ಜಾಲಿಕಂತೆ ಮಠ, ಮಧುವನಹಳ್ಳಿ ಗ್ರಾಮ ಮತ್ತು ಅಂಚೆ , ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ ಮೊ. +919731958313
ಮಠದ ವಿವರ:
ಸುಮಾರು ೧೫೦ ರಿಂದ ೨೫೦ ವರ್ಷಗಳ ಇತಿಹಾಸವಿರುವ ಈ ಮಠವು ಮಧುವನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿದ್ದು, ಶ್ರೀ ಶೈಲಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದಿದೆ. ಪಂಚಪೀಠಗಳ ಪರಂಪರೆಯಲ್ಲಿ ಬರುವ ಜಾಲಿಕಂತೆ, ಮುತ್ತಿನಕಂತೆ, ಉಕ್ಕಿನಕಂತೆ ಸಂಪ್ರದಾಯದಲ್ಲಿ ಬೆಳೆದ ಶ್ರೀ ಜಾಲಿಕಂತೆ ಮಠವು, ಸುಮಾರು ೬ ಪೀಠಾಧಿಪತಿಗಳನ್ನು ಕಂಡು ಇಂದು ಸ್ವಯಾರ್ಜಿತವಾದ, ವಂಶಪರಂಪರೆಯ ಮೇಲೆ ನಿರ್ಮಿತವಾದ ಮಠವಾಗಿದೆ. ಈ ಮಠವು ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳ ಕಾಲದಲ್ಲಿ ವಿಶೇಷ ಪ್ರಬುದ್ಧತೆಗೆ ತಲುಪಿತು.
ಪರಂಪರೆ:
- ಷ.ಬ್ರ.ಸ್ವ. ಶ್ರೀ ತೋಂಟದಾರ್ಯ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಮರಿತೋಂಟದಾರ್ಯ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಚಿಕ್ಕತೋಂಟದಾರ್ಯ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಚನ್ನಮಲ್ಲ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಬಸವಲಿಂಗ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವಕುಮಾರ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಮಠದ ಆವರಣದಲ್ಲಿ ಗುರುಗಳ ಗದ್ದುಗೆಯು ಸೇರಿ ಆರು ಗದ್ದುಗೆಗಳನ್ನು ನಿರ್ಮಿಸಲಾಗಿದೆ. ನಿತ್ಯಪೂಜೆ, ಶಿವರಾತ್ರಿ ಪೂಜೆ, ಕಾರ್ತೀಕ ಪೂಜೆ, ಶ್ರಾವಣ, ಕಾರ್ತೀಕ ಮಾಸಗಳಲ್ಲಿ ವಿಶೇಷ ಪೂಜೆಗಳು ಮತ್ತು ಹಿರಿಯ ಗುರುಗಳ ಪುಣ್ಯಾರಾಧನೆಗಳು ನಡೆಯುತ್ತಿವೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಜಂಗಮ ಜೋಳಿಗೆ, ಒಂಬತ್ತು ಕಣ್ಣುಗಳ ಬಿದಿರುದಂಡು ಹಾಗೂ ಜಾಲಿಕಂತೆಯೊಂದಿಗೆ ಗಣಪತಿ ಪೂಜೆ ನಡೆಯುತ್ತದೆ.
ಸಾಮಾಜಿಕ ಕಾರ್ಯಗಳು:
ಶ್ರೀ ಮಠವು ಉಚಿತ ವಿವಾಹ, ದಾಸೋಹ ಕಾರ್ಯಗಳು ಸೇರಿದಂತೆ ವಿವಿಧ ಸಮಾಜಮುಖಿ ಸೇವೆಗಳನ್ನು ನಿರಂತರವಾಗಿ ನಿರ್ವಹಿಸುತ್ತಿದ್ದು, ಭಕ್ತರಿಗೆ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಬೆಂಬಲವನ್ನು ನೀಡುತ್ತಿದೆ. ಶ್ರೀ ಶಿವಕುಮಾರ ಸ್ವಾಮಿಗಳು ಶಿಕ್ಷಣ, ಸಂಸ್ಕೃತ, ಕಾವ್ಯ, ಜ್ಯೋತಿಷ್ಯದಲ್ಲಿ ಪಂಡಿತತ್ವ ಪಡೆದು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.