ವಿಳಾಸ:
ಷ.ಬ್ರ.ಸ್ವ. ಶ್ರೀ ಇಮ್ಮಡಿ ಶಾಂತಮಲ್ಲಸ್ವಾಮಿಗಳವರು, ಶ್ರೀ ಪಟ್ಟದಮಠ, ಬೊಮ್ಮನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ.ಮೊ.+919448814849
ಮಠದ ವಿವರ:
ಬೊಮ್ಮನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಶೈಲಪೀಠದ ಶಾಖಾಮಠವಾಗಿ ಶ್ರೀ ಪಟ್ಟದಮಠವು ಬೆಳೆಯುತ್ತಿದೆ. ಕಳೆದ ಎರಡು ತಲೆಮಾರುಗಳಿಂದ ಸ್ಥಾಪಿತಗೊಂಡ ಈ ಮಠವು, ಸ್ಥಳೀಯ ಭಕ್ತರ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿದ್ದು ‘ಪಟ್ಟದ ಹಿರೇಮಠ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
ಪರಂಪರೆ:
- ಷ.ಬ್ರ.ಸ್ವ.ಶ್ರೀ ಬಸಪ್ಪದೇವರು
- ಷ.ಬ್ರ.ಸ್ವ. ಶ್ರೀ ಎತ್ತಪ್ಪದೇವರು
- ಷ.ಬ್ರ.ಸ್ವ. ಶ್ರೀ ಗುರುಮಲ್ಲದೇವರು
- ಷ.ಬ್ರ.ಸ್ವ. ಶ್ರೀ ಮಠದಮಲ್ಲಪ್ಪನವರು
- ಷ.ಬ್ರ.ಸ್ವ. ಶ್ರೀ ಪಟ್ಟದ ಶಾಂತಮಲ್ಲ ಶಿವಾಚಾರ್ಯರು
- ಷ.ಬ್ರ.ಸ್ವ.ಶ್ರೀ ಕರಿವೃಷಭರಾಜೇಂದ್ರ ಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಇಮ್ಮಡಿ ಶಾಂತಮಲ್ಲಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ, ಸಾಮಾಜಿಕ ಕಾರ್ಯಗಳು :
- ಕಾರ್ತಿಕ ಮಾಸ, ಅಮಾವಾಸ್ಯೆ, ಶಿವರಾತ್ರಿ, ಬಸವ ಜಯಂತಿ ಮುಂತಾದ ಸಂದರ್ಭಗಳಲ್ಲಿ ಧಾರ್ಮಿಕ ಉತ್ಸವಗಳು.
- ಮಠದ ಪಿತೃಗುರುಗಳ ಕಾಲದಲ್ಲಿ ದೊಡ್ಡ ಕಟ್ಟಡ ನಿರ್ಮಾಣ, ೫೦ ಎಕರೆ ಭೂಮಿಯ ಕೃಷಿ, ನವೀಕರಣ.
- ಊರಿನ ಅಭಿವೃದ್ಧಿಗೆ ಪಡಿತರ ಯೋಜನೆ, ಒಳಚರಂಡಿ, ವಿದ್ಯುತ್, ರಸ್ತೆ, ನೀರಿನ ಸೌಲಭ್ಯ, ಸಹಕಾರ ಸಂಘದ ಸ್ಥಾಪನೆ.
- ಬಡವರಿಗಾಗಿ ನಿವೇಶನಗಳ ವಿತರಣಾ ಯೋಜನೆ.
- ಸಂಸ್ಕೃತ, ವೇದ, ಆಗಮ ಅಧ್ಯಯನ ಮತ್ತು ಶಿಕ್ಷಣ.