ವಿಳಾಸ:
ಷ.ಬ್ರ.ಸ್ವ. ಶ್ರೀ ನಾಗೇಂದ್ರ ಸ್ವಾಮಿಗಳು , ಪಟ್ಟದ ಮಠ, ಬೀಚನಹಳ್ಳಿ ಪುರ, ಹೆಗ್ಗಡದೇವನ ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ. ಮೊ. 9741057158 / 9902531916
ಮಠದ ವಿವರ:
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿಪುರ ಗ್ರಾಮವು ತಾಲ್ಲೂಕು ಕೇಂದ್ರದಿಂದ 12 ಕಿಲೋಮೀಟರ್ ದೂರದಲ್ಲಿದ್ದು ಹಾಗೂ ಕಪಿಲಾ ನದಿಯ ಪಕ್ಕದಲ್ಲಿರುವ ಈ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಹೆಸರಾಗಿದೆ. ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠವು ಶ್ರೀ ಸೋಮಹಳ್ಳಿ ಮಠದ ಶಾಖಾ ಮಠವಾಗಿದೆ. ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿರಬಹುದಾದ ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠದ ಕರ್ತೃಗಳಾದ ಪೂಜ್ಯ ಸಿದ್ದಮಲ್ಲಿಕಾರ್ಜುನ ಮಹಾ ಸ್ವಾಮಿಗಳನ್ನು ಗುರುತಿಸಲಾಗಿದ್ದು ಇವರ ಕಾಲ ಮಾಸದ ಬಗ್ಗೆ ಸ್ಪಷ್ಟತೆ ಇಲ್ಲ. ಕರ್ತೃಗುರುಗಳ ನಂತರ ಅನೇಕ ಗುರುಗಳು ಶ್ರೀ ಮಠದ ಅಧಿಕಾರ ನಡೆಸಿರಬಹುದಾದರು ಅವುಗಳ ಬಗ್ಗೆ ತಿಳಿದು ಬಂದಿರುವುದಿಲ್ಲ. ಅಂದಿನ ಸಂದರ್ಭದಲ್ಲಿ ಶ್ರೀಮಠದ ಸೇವೆಯಲ್ಲಿ ತೊಡಗಿದ್ದ ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು 2001ರಲ್ಲಿ ಫೆಬ್ರವರಿ 7 ರಂದು ಶ್ರೀ ಮಠದ ಅಧಿಕಾರ ಸ್ವೀಕರಿಸಿ ಬಂದಿದ್ದು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ಧಿಗೊಳಿಸಿದ್ದಾರೆ. ಶ್ರೀ ಸೋಮಹಳ್ಳಿ ಮಠದ ಶಾಖ ಮಠವಾಗಿದ್ದು ಅಲ್ಲಿಯ ಗುರುಗಳು ಶ್ರೀ ಮಠಕ್ಕೆ ಗುರುಗಳನ್ನು ನೇಮಿಸಿ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ತದನಂತರ ಹಿರಿಯ ಪೂಜ್ಯರಿಗೆ ವಯಸ್ಸಾದ ಕಾರಣದಿಂದ ಶ್ರೀ ಮಠಕ್ಕೆ 27.4.2018 ನೇ ತಾರೀಖಿನಂದು ಸೋಮಹಳ್ಳಿ ಪೂಜ್ಯರ ಸನ್ನಿಧಿಯಲ್ಲಿ ಹಾಗೂ ಸುಮಾರು ಮಠಾಧೀಶರ ಸಮ್ಮುಖದಲ್ಲಿ ಮಲ್ಲಿನ ಗಳ್ಳಿ ಗ್ರಾಮದ ನಾಗಮಲ್ಲಮ್ಮ ಲೇಟ್ ಮಲ್ಲಪ್ಪ ದಂಪತಿಗಳ ಮಗನಾದ ನಾಗೇಂದ್ರ ಸ್ವಾಮಿಗಳನ್ನು ನೇಮಕ ಮಾಡಿಕೊಂಡಿರುತ್ತಾರೆ. ವಯೋಸಹಜ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಅಕ್ಟೋಬರ್ 24.10.2020 ರಲ್ಲಿ ಲಿಂಗೈಕ್ಯರಾಗಿದ್ದು, ಅಂದಿನ ದಿನದ ಅಂದಿನ ದಿನದಿಂದಲೂ ಕೂಡ ಕಿರಿಯ ಪೂಜ್ಯರಾದ ಶ್ರೀ ನಾಗೇಂದ್ರ ಸ್ವಾಮಿಗಳು ಶ್ರೀ ಮಠವನ್ನು ಮುನ್ನಡೆಸಿಕೊಂಡು ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹಿರಿಯ ಗುರುಗಳ ಆರಾಧನೆ ಆಯೋಜಿಸಿಕೊಂಡು ಬರುತ್ತಿದ್ದು, ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಗದ್ದಿಗೆ ಪೂಜೆ ನಡೆಸುತ್ತಿದ್ದಾರೆ ಹಾಗೆಯೇ ಬಸವ ಜಯಂತಿ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದಾರೆ.ಪರಂಪರೆ:
- ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕರ್ಜುನ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ನಾಗೇಂದ್ರ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
- ಹಿರಿಯ ಗುರುಗಳ ಆರಾಧನೆ
- ಪ್ರತಿನಿತ್ಯ ಗದ್ದಿಗೆ ಪೂಜೆ
- ಬಸವ ಜಯಂತಿ
- ಕಾರ್ತಿಕ ಮಾಸ ವಿಶೇಷ ಪೂಜೆ