ವಿಳಾಸ:
ಷ.ಬ್ರ.ಸ್ವ ಶ್ರೀ ರೇಣುಕಶಿವಾಚಾರ್ಯ ಸ್ವಾಮಿಗಳವರು, ಶ್ರೀ ಪಟ್ಟದ ಮಠ, ವೀರಪ್ಪ ಒಡೆಯರ ಹುಂಡಿ, ಸೋಸಲೆ ಹೋಬಳಿ, ಟೀ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ ಮೊ. +919980315303
ಮಠದ ವಿವರ:
ಶ್ರೀ ಪಟ್ಟದಮಠವು ಟಿ.ನರಸೀಪುರ ಕೇಂದ್ರದಿಂದ ಪೂರ್ವಕ್ಕೆ ನಾಲ್ಕು ಕಿ.ಮೀ. ದೂರದಲ್ಲಿ ಅಸ್ತಿತ್ವದಲ್ಲಿದೆ.ಶ್ರೀ ಪಟ್ಟದಮಠವು ಪುರಾತನ ಕಾಲದಲ್ಲಿ ಸ್ಥಾಪನೆಯಾಗಿದ್ದು, ೧೯೫೨ರಲ್ಲಿ ಮಠವನ್ನು ಪುನಃ ಸ್ಥಾಪನೆಗೊಳಿಸಿ ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಧಾರ್ಮಿಕ ಕಾರ್ಯಗಳನ್ನು ಆರಂಭಿಸಲಾಯಿತು.
ಪರಂಪರೆ:
- ಷ.ಬ್ರ.ಸ್ವ ಶ್ರೀ ತೋಂಟದಾರ್ಯ ಶಿವಾಚಾರ್ಯ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ರೇಣುಕಶಿವಾಚಾರ್ಯ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ವೇದ ಹಾಗೂ ಜ್ಯೋತಿಷ್ಯ ಕಲಿತು ಧಾರ್ಮಿಕ ಆಚರಣೆಗಳನ್ನು ನಿರ್ವಹಿಸುತ್ತಿದ್ದಾರೆ. ಮಠದಲ್ಲಿ ಭಕ್ತರಿಗೆ ಧಾರ್ಮಿಕ ಮಾರ್ಗದರ್ಶನ ನೀಡಲಾಗುತ್ತದೆ.
ಸಾಮಾಜಿಕ ಕಾರ್ಯಗಳು:
ಶಾಲೆಯ ಬಡ ಮಕ್ಕಳಿಗೆ, ಅಸಹಾಯಕರಿಗೆ ಹಾಗೂ ಮಠಕ್ಕೆ ಬರುವ ಭಕ್ತರಿಗೆ ಅನ್ನದಾಸೋಹವನ್ನು ನಡೆಯುತ್ತದೆ.