ಮೋರಂಬಾಳು ಗಂಗಾಧರೇಶ್ವರ ಪಟ್ಟದ ಮಠ

ವಿಳಾಸ:

ಷ.ಬ್ರ.ಸ್ವ. ಶ್ರೀ ಶಿವಕುಮಾರಸ್ವಾಮಿಗಳವರು, ಮೋರ೦ಬಾಳು ಗ೦ಗಾಧರೇಶ್ವರ ಪಟ್ಟದ ಮಠ, ಕಸುವಿನ ಹಳ್ಳಿ ಅಂಚೆ, ಕಸಬಾ ಹೋಬಳಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
ಮೊ: +918150851590

ಮಠದ ವಿವರ:

ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಾಖಾ ಮಠವಾದ ಕಸುವಿನಹಳ್ಳಿ ಗ್ರಾಮದ ಶ್ರೀ ಮೊರಂಬಾಳು ಗಂಗಾಧರೇಶ್ವರ ಪಟ್ಟದ ಮಠವು ಬಹು ಪ್ರಾಚೀನ ಇತಿಹಾಸವನ್ನು ಹೊಂದಿರುವ ಮಠವಾಗಿದೆ.ಭಕ್ತಜನರ ಭಾಗ್ಯೋದಯ ದಂತೆ ಉತ್ತರದಿಂದ ಈ ಭಾಗಕ್ಕೆ ಆಗಮಿಸಿದ ಶ್ರೀ ಗಂಗಾಧರೇಶ್ವರರು ಕಸುವಿನಹಳ್ಳಿ ಪಕ್ಕದಲ್ಲಿದ್ದ ಮೊರಂಬಾಳು ಎಂಬ ಗ್ರಾಮದಲ್ಲಿ ನೆಲೆಗೊಂಡರು. ಕಾಲ ನಂತರ ಪಂಜಿನ ಕಳ್ಳರ ಹಾವಳಿಯಿಂದ ಆ ಗ್ರಾಮವು ನಾಶವಾದಾಗ ಕಸುವಿನಹಳ್ಳಿಗೆ ಬಂದು ನೆಲೆಸಿದರು. ಸಮಾಜದಲ್ಲಿ ಭಕ್ತಿ ಮತ್ತು ನೈತಿಕತೆಯನ್ನು ಬೆಳೆಸಿ ಪೋಷಿಸುವ ಸಲುವಾಗಿ ಧರ್ಮ ಪ್ರಚಾರದಲ್ಲಿ ಮತ್ತು ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗಿದ್ದ ಶ್ರೀಗಳು ಮೊರಂಬಾಳು ವಿನಲ್ಲಿಯೇ ಸಜೀವ ಸಮಾಧಿಯನ್ನು ಹೊಂದಿದರು. ಇತಿಹಾಸ ಪ್ರಸಿದ್ಧವಾದ ಈ ಮೊರಂಬಾಳು ಗ್ರಾಮದಲ್ಲಿ ಅನೇಕ ಶಾಸನಗಳು ವೀರಗಲ್ಲುಗಳು ದೊರೆತಿವೆ.

ಶ್ರೀ ಗಂಗಾಧರೇಶ್ವರ ಶ್ರೀಗಳಿಂದ ಶ್ರೀಮಠದ ಗುರುಪರಂಪರೆಯು ಆರಂಭವಾಯಿತು. ಶ್ರೀಮಠದ ಎಲ್ಲಾ ಶ್ರೀಗಳು ಈ ಭಾಗದ ಜನರ ಧಾರ್ಮಿಕ, ಸಾಮಾಜಿಕ, ನೈತಿಕ ಉನ್ನತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಹಿಂದಿನ ಮಠಾಧಿಪತಿಗಳಾದ ಷ.ಬ್ರ.ಸ್ವ. ಶ್ರೀ ಚಂದ್ರಶೇಖರ ಸ್ವಾಮಿಗಳವರಿಗೆ 1953 ರಲ್ಲಿ ಶ್ರೀಮತ್ಸುತ್ತೂರು ವೀರಸಿಂಹಾಸನಧೀಶ್ವರ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ ಪ್ರಪ್ರಥಮವಾಗಿ ಆಶ್ರಮಾಧಿಕಾರವಾಗಿತ್ತು. ಷ.ಬ್ರ.ಸ್ವ. ಶ್ರೀ ಚಂದ್ರಶೇಖರ ಸ್ವಾಮಿಗಳು 12.11.2021 ರಲ್ಲಿ ಲಿಂಗೈಕ್ಯರಾದರು ತದನಂತರ ಶ್ರೀಗಳವರ ಪೂರ್ವಾಶ್ರಮದ ತಮ್ಮನ ಮಗನಾದ ಶ್ರೀ ಶಿವಕುಮಾರ ಸ್ವಾಮಿಗಳವರಿಗೆ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರಿಂದ 7 ಡಿಸೆಂಬರ್ 2023 ಆಶ್ರಮಾಧಿಕಾರವನ್ನು ನೀಡಲಾಗಿದೆ.

ಶ್ರೀ ಮಠಕ್ಕೆ ಸೇರಿದಂತೆ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಮಹಾಲಿಂಗೇಶ್ವರ ದೇವಸ್ಥಾನಗಳಿದ್ದು, ಷ.ಬ್ರ.ಸ್ವ. ಶ್ರೀ ಶಿವಕುಮಾರ ಸ್ವಾಮಿಗಳು ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಮಠದ ಗುರು ಪರಂಪರೆಯು ಅನೂಚಾನವಾಗಿ ಮುಂದುವರೆಯಲೆಂಬ ಸದುದ್ದೇಶದಿಂದ ಮತ್ತು ಶ್ರೀಮಠವು ಇತೋಪ್ಯತಿಶಯವಾಗಿ ಬೆಳೆಯಲಿ ಎಂಬ ಸದಾಶಯದೊಂದಿಗೆ ಇಂದಿನ ಶ್ರೀಗಳು ಶ್ರೀಮಠವನ್ನು ನಡೆಸಿಕೊಂಡು ಬರುತಿದ್ದಾರೆ.

ಪರಂಪರೆ:

  1. ಶ್ರೀ ಗಂಗಾಧರೇಶ್ವರರು
  2. ಷ.ಬ್ರ.ಸ್ವ. ಶ್ರೀ ಚಂದ್ರಶೇಖರ ಸ್ವಾಮಿಗಳು
  3. ಷ.ಬ್ರ.ಸ್ವ. ಶ್ರೀ ಶಿವಕುಮಾರ ಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

ಸಾಮಾಜಿಕ ಕಾರ್ಯಗಳು: