ವಿಳಾಸ:
ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು, ಶ್ರೀ ಸುತ್ತೂರು ಮಠ, ಚಾಮುಂಡಿ ಬೆಟ್ಟದ ತಪ್ಪಲು, ಮೈಸೂರು – 570004
ಮಠದ ವಿವರ:
ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳವರು ಕಪಿಲಾ ನದಿಯ ಮಧ್ಯದಲ್ಲಿ ಒಂದು ಬಂಡೆಯ ಮೇಲೆ ಧ್ಯಾನಸ್ಥರಾಗಿದ್ದರು. ಚೋಳರ ಸಾಮ್ರಾಜ್ಯದ ಅರಸ ರಾಜರಾಜಚೋಳ, ತಲಕಾಡಿನ ಗಂಗರ ಸಾಮ್ರಾಜ್ಯದ ಅರಸ ನಾಲ್ಕನೇ ರಾಚಮಲ್ಲನ ವಿರುದ್ಧ ಯುದ್ಧಕ್ಕೆ ಸನ್ನದನಾಗಿ ದಂಡೆತ್ತಿ ಹೊರಟಿದ್ದ. ಆಗ ಇದ್ದಕ್ಕಿದ್ದಂತೆ ರಾಜರಾಜನ ಕುದುರೆ ತಾನು ಸಾಗುತ್ತಿದ್ದಂತಹ ಹಾದಿಯನ್ನು ಬದಲಿಸಿ ಧ್ಯಾನನಿರತರಾಗಿದ್ದಂತಹ ಆದಿ ಜಗದ್ಗುರು ಶ್ರೀ ಶಿವಯೋಗಿ ಮಹಾಸ್ವಾಮಿಗಳು ಇದ್ದಂತಹ ಸ್ಥಳಕ್ಕೆ ಬಂದು ನಿಂತಿತು. ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳವರು ರಾಜರಾಜಚೋಳನಿಗೆ ಯುದ್ಧದಿಂದ ಆಗುವಂತಹ ಅನಾಹುತ, ಸಾವುನೋವುಗಳ ಬಗ್ಗೆ ತಿಳಿಸಿದರು. ಆಗ ಅರಸನಿಗೆ ಜ್ಞಾನೋದಯವಾಗಿ, ತಲಕಾಡಿನ ಗಂಗರು ಹಾಗೂ ಚೋಳರ ನಡುವಿನ ಹಗೆತನವನ್ನು ಕೊನೆಗೊಳಿಸಿದ. ಎರಡೂ ಸಾಮ್ರಾಜ್ಯಗಳ ನಡುವೆ ಮಹಾಯುದ್ಧ ನಿಂತು ಶಾಂತಿ ನೆಲೆಸಿತು. ಇಬ್ಬರೂ ರಾಜರು ಸ್ನೇಹಿತರಾದರು. ನಂತರ ರಾಜರಾಜನ ಕೋರಿಕೆಯ ಮೇರೆಗೆ ಶ್ರೀ ಶಿವರಾತ್ರಿ ಶಿವಯೋಗಿ ಮಹಾಸ್ವಾಮಿಗಳವರು ಸುತ್ತೂರು ಬಳಿಯ ಕಪಿಲಾ ನದಿಯ ದಂಡೆಯ ಮೇಲೆ ಮಠವನ್ನು ಸ್ಥಾಪಿಸಿದರು.
ಪರಂಪರೆ:
- ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಈಶಾನೇಶ್ವರ ಒಡೆಯರ್ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ನಿಜಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಸಿದ್ದನಂಜ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಕಪಿನಿ ನಂಜುಂಡ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಚನ್ನವೀರ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಸಿದ್ಧಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಪರ್ವತೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಭಂಡಾರಿ ಬಸಪ್ಪ ಒಡೆಯರ್ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಕೂಗಲೂರು ನಂಜುಂಡ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಘನಲಿಂಗ ಶಿವಯೋಗಿ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಇಮ್ಮಡಿ ಶಿವರಾತ್ರೀಶ್ವರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಗುರುನಂಜ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಗುರುಚನ್ನಬಸಪ್ಪ ಶಿವಾಚಾರ್ಯ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಗುರುಪಂಚಾಕ್ಷರ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಚಿದ್ಘನ ಶಿವಾಚಾರ್ಯ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಚನ್ನವೀರ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಮಹಾಂತ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಸಿದ್ಧಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಮಂತ್ರ ಮಹರ್ಷಿ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳವರು
- ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು
- ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
- ಪರಂಪರೆಯ ಗುರುಗಳ ಗದ್ದುಗೆಗಳು ಇದ್ದು, ನಿತ್ಯಪೂಜೆ ಹಾಗೂ ಹಿರಿಯ ಗುರುಗಳ ಪುಣ್ಯಾರಾಧನೆ ಕಾರ್ಯಕ್ರಮಗಳು ನಡೆಯುತ್ತಿವೆ.
- ದೈನಂದಿನ ಪೂಜೆ ಮತ್ತು ದಾಸೋಹ
- ಅಮಾವಾಸ್ಯೆ ವಿಶೇಷ ಪೂಜೆ
- ಪೂಜ್ಯರ ಸ್ಮರಣೋತ್ಸವ
- ಕಾರ್ತಿಕ ಮಾಸ ಪೂಜೆ
- ಶಿವರಾತ್ರಿ ಪೂಜೆ
- ಬಸವ ಜಯಂತ್ಯೋತ್ಸವ
- ಶ್ರಾವಣ ಮಾಸದಲ್ಲಿ ಮೈಸೂರು ಹಾಗೂ ಸುತ್ತೂರಿನಲ್ಲಿರುವ ಶ್ರೀಮಠಗಳಲ್ಲಿ ವಿಶೇಷ ಪೂಜೆಗಳು, ಪ್ರವಚನಗಳು ಹಾಗೂ ಪ್ರವಚನಗಳಲ್ಲಿ ಆಸಕ್ತಿಯುಳ್ಳವರಿಗಾಗಿ ಪ್ರಬಂಧ ಬರೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
- ಪ್ರತಿ ವರ್ಷ ಮಾರ್ಗಶಿರ ಬಹುಳ ಚತುರ್ದಷಿಯಿಂದ (ಮಹಾಶಿವರಾತ್ರಿ) ಆರಂಭವಾಗುವಂತೆ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವದ ಆಚರಣೆಗಳನ್ನು ನಡೆಸಲಾಗುತ್ತಿದೆ.
- ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವದ ಆಚರಣೆಗಳನ್ನು ನಡೆಸಲಾಗುತ್ತಿದೆ.
- ಪ್ರತಿ ಬೆಳದಿಂಗಳ ದಿನದಂದು ಆಯೋಜಿಸುವಂತಹ ಬೆಳದಿಂಗಳ ಸಂಗೀತ ಕಾರ್ಯಕ್ರಮ
- ಶರಣ ಪಥ : ಇದು ೧೯೮೮ನೇ ಇಸವಿಯಲ್ಲಿ ಆರಂಭಿಸಲಾದಂತಹ ಅರ್ಧವಾರ್ಷಿಕ ಇಂಗ್ಲೀಷ್ ನಿಯತಕಾಲಿಕೆಯಾಗಿದ್ದು, ಶರಣ ಸಿದ್ಧಾಂತ, ಸಾಹಿತ್ಯ, ಭಾರತೀಯ ಕಲೆ ಹಾಗೂ ಸಂಸ್ಕೃತಿಗೆ ಸಮರ್ಪಿತವಾಗಿದೆ.
- “ಪ್ರಸಾದ”, ಕನ್ನಡದಲ್ಲಿ ಪ್ರಕಟವಾಗುತ್ತಿರುವಂತಹ ಪತ್ರಿಕೆ.ಧರ್ಮ, ಸಾಹಿತ್ಯ, ಸಂಸ್ಕೃತಿ ಹಾಗೂ ಸಿದ್ಧಾಂತಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ವಿಶೇಷವಾಗಿ ವೀರಶೈವ ಸಾಹಿತ್ಯ ಹಾಗೂ ಸಂಸ್ಕೃತಿಯ ಕುರಿತಾದ ಜ್ಞಾನವನ್ನು ಒದಗಿಸುವ ವಿಶೇಷ ವೇದಿಕೆಯಾಗಿದೆ.
- ಆಧ್ಯಾತ್ಮಿಕ ಪ್ರವಚನಗಳನ್ನು ಕ್ರಮಬದ್ಧ ಅವಧಿಯಲ್ಲಿ ಆಯೋಜಿಸುವ ಸಲುವಾಗಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಡಿಯಲ್ಲಿ ‘ಶಿವಾನುಭವ ದಾಸೋಹ’ ಕಾರ್ಯಕ್ರಮವನ್ನು ೧೯೯೬ರಲ್ಲಿ ಆರಂಭಿಸಲಾಯಿತು. ಈ ಕಾರ್ಯಕ್ರಮವು ಸಾಕಷ್ಟು ಪ್ರಶಂಸೆಯನ್ನು ಪಡೆದುಕೊಂಡಿದೆ. ಪ್ರತಿ ತಿಂಗಳ ಕೊನೆಯ ಶನಿವಾರದಂದು ನಡೆಯುವ ಈ ಕಾರ್ಯಕ್ರಮದಲ್ಲಿ ಧರ್ಮ, ಜೀವನ, ಇತ್ಯಾದಿಯಂತಹ ವಿಷಯಗಳ ಕುರಿತಾದ ಪ್ರವಚನಗಳನ್ನು ಏರ್ಪಡಿಸಲಾಗುತ್ತದೆ.
- ಜೆಎಸ್ಎಸ್ ವಾರ್ತಾ ಪತ್ರ: ಈ ಪತ್ರಿಕೆಯಲ್ಲಿ ಶ್ರೀ ಸುತ್ತೂರು ಮಠದಲ್ಲಿ ನಡೆಯುವ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತಂತೆ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.
- ದಾಸೋಹ:ಸಂಪತ್ತು ಹಾಗೂ ಜ್ಞಾನದ ಹಂಚಿಕೆ ಉತ್ತಮ ಸತ್ಕಾರ ಸುತ್ತೂರು ಮಠದ ಪ್ರಾಚೀನ ಸಂಪ್ರದಾಯವಾಗಿದೆ. ಸುತ್ತೂರಿನಲ್ಲಿರುವ ವಸತಿ ಶಾಲೆಯಲ್ಲಿ ಅನ್ನದಾಸೋಹ ಕಾರ್ಯಕ್ರಮದಡಿ ಸುಮಾರು ೪,೦೦೦ ಮಕ್ಕಳಿಗೆ ಉಚಿತವಾಗಿ ಆಹಾರವನ್ನು ಒದಗಿಸಲಾಗುತ್ತಿದೆ. ಯಳಂದೂರು ತಾಲ್ಲೂಕಿನಲ್ಲಿ, ಅಕ್ಷಯ ದಾಸೋಹ ಯೋಜನೆಯಡಿ ಸುಮಾರು ೧೦,೦೦೦ ಮಕ್ಕಳಿಗೆ ಉಚಿತವಾಗಿ ಊಟವನ್ನು ಒದಗಿಸಲಾಗುತ್ತಿದೆ. ಇದರ ಜೊತೆಗೆ, ಶ್ರೀಮಠದ ಆಶ್ರಯದಡಿಯಲ್ಲಿ ವಿವಿಧ ಸ್ಥಳದಲ್ಲಿ ನಡೆಯುತ್ತಿರುವಂತಹ ೨೦ ಉಚಿತ ವಸತಿನಿಲಯಗಳಲ್ಲಿ ೨,೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಅನ್ನದಾಸೋಹವನ್ನು ಒದಗಿಸಲಾಗುತ್ತಿದೆ.
ಸಾಮಾಜಿಕ ಹಾಗು ಶೈಕ್ಷಣಿಕ ಕಾರ್ಯಗಳು:
ಜೆಎಸ್ಎಸ್ ಆಸ್ಪತ್ರೆ, ಮೈಸೂರು
ಪರಮಪೂಜ್ಯ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ ೧೯೬೩ರಲ್ಲಿ ಆರಂಭವಾದಂತಹ ಜೆಎಸ್ಎಸ್ ಆರೋಗ್ಯ ಕೇಂದ್ರ ಇಂದು, ಶ್ರೀ ಸುತ್ತೂರು ಮಠ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ ಮಹತ್ತರವಾದ ಆರೋಗ್ಯಸೇವೆ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಯಾಗಿ ವಿಕಾಸಗೊಂಡಿದೆ. ಒಂದೇ ಸೂರಿನಡಿ ೧,೮೦೦ ಹಾಸಿಗೆಗಳಿರುವ ಈಗಿನ ಹೊಸ ಜೆಎಸ್ಎಸ್ ಆಸ್ಪತ್ರೆ ಭಾರತದ ಅತಿ ದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಯು ೨೬೦ ಹಾಸಿಗೆಗಳುಳ್ಳ ಅತಿ ದೊಡ್ಡ ನಿರ್ಣಾಯಕ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳಿರುವ ಹೆಗ್ಗಳಿಕೆಯನ್ನು ಹೊಂದಿದೆ. ಜೀವನದ ಮೌಲ್ಯಗಳನ್ನು ಎತ್ತಿಹಿಡಿಯುವುದು ಹಾಗೂ ಸಮಾಜದ ಎಲ್ಲ ವರ್ಗಗಳ ಜನರಿಗೂ ಕೈಗೆಟಕುವ ದರಗಳಲ್ಲಿ ಆರೋಗ್ಯಸೇವೆಗಳನ್ನು ಒದಗಿಸುವುದು ಈ ಆಸ್ಪತ್ರೆಯ ಪರಮೋದ್ದೇಶವಾಗಿದೆ.
ಜೆಎಸ್ಎಸ್ ಆಸ್ಪತ್ರೆ, ಚಾಮರಾಜನಗರ
ಸುತ್ತೂರು ಮಠದ ಆಶ್ರಯದಲ್ಲಿ ಸ್ಥಾಪಿಸಲಾಗಿರುವ ವಿಶಾಲಶ್ರೇಣಿಯ ಆರೋಗ್ಯರಕ್ಷಣಾ ಸೇವಾ ಕೇಂದ್ರಗಳಿಗೆ ಚಾಮರಾಜನಗರದ ಜೆಎಸ್ಎಸ್ ಆಸ್ಪತ್ರೆ ಮತ್ತೊಂದು ಸೇರ್ಪಡೆಯಾಗಿದೆ. ಇದು ೧೦೦ ಹಾಸಿಗೆಗಳಿರುವ ಆಸ್ಪತ್ರೆಯಾಗಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅತ್ಯಾಧುನಿಕ ಹಾಗೂ ವ್ಯಕ್ತಿಗತ ಆರೋಗ್ಯರಕ್ಷಣಾ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ, ಮೈಸೂರು
ಮೈಸೂರು ನಗರದ ಲಲಿತಾದ್ರಿಪುರದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸ್ಥಾಪಿಸಲಾಗಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ, ಎಲ್ಲಾ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಆಸ್ಪತ್ರೆಯಾಗಿದ್ದು, ರೋಗಿಗಳಿಗೆ ಪ್ರಾಮಾಣಿಕ ಆಯುರ್ವೇದ ಚಿಕಿತ್ಸೆ ಹಾಗೂ ಸರ್ವಾಂಗೀಣ ಅವಲೋಕನಗಳನ್ನು ಆಧರಿಸಿದ ಪರಿಹಾರಗಳನ್ನು ಒದಗಿಸುವ ಆಶಯವನ್ನು ಹೊಂದಿದೆ. ಆಸ್ಪತ್ರೆ ಸ್ಥಾಪನೆಯಾದ ಆರಂಭದಲ್ಲಿ, ಮೈಸೂರು, ಚಾಮರಾಜನಗರ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳ ಬಡ ಹಾಗೂ ಗ್ರಾಮೀಣ ಜನರ ಆರೋಗ್ಯ ಸೇವೆಗಳ ಅಗತ್ಯವನ್ನು ಪೂರೈಸುತಿತ್ತು. ಆದರೆ ಇಂದು ಈ ಆಸ್ಪತ್ರೆ ಎಷ್ಟು ಜನಪ್ರಿಯತೆಯನ್ನು ಗಳಿಸಿದೆ ಎಂದರೆ ವಿವಿಧ ಖಾಯಿಲೆಗಳು, ಅನಾರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ಕೋರಿ ಜಗತ್ತಿನಾದ್ಯಂತ ಜನರು ಇಲ್ಲಿಗೆ ಅರಸಿ ಬರುತ್ತಾರೆ.
ಜೆಎಸ್ಎಸ್ ಶಾಲೆ, ಸುತ್ತೂರು
ಶ್ರೀಮಠದ ವಿಶೇಷ ಆಕರ್ಷಣೆಯಾದ ಸುತ್ತೂರಿನ ಜೆಎಸ್ಎಸ್ ಶಾಲೆಯನ್ನು ಗ್ರಾಮೀಣ ಪ್ರದೇಶಗಳ ಕುಟುಂಬಗಳಿಂದ ಬಂದಂತಹ ಬಡ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಆ ಮೂಲಕ ಸವಲತ್ತುವಂಚಿತರನ್ನು ಸಬಲರನ್ನಾಗಿಸುವ ಉದ್ದೇಶದೊಂದಿಗೆ ಸ್ಥಾಪಿಸಲಾಯಿತು. ಈ ಶಾಲೆ ೬೦ ಎಕರೆಗಳ ವಿಶಾಲವಾದ, ಅದ್ಭುತ ಹಾಗೂ ಪ್ರಶಾಂತವಾದ ಪ್ರದೇಶವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. ಇಲ್ಲಿ ಯಾವುದೇ ಧರ್ಮ, ಜಾತಿ, ವರ್ಣ ಭೇದಗಳಿಲ್ಲದೆ, ರಾಷ್ಟ್ರಾದ್ಯಂತ ವಿವಿಧ ಭಾಗಗಳಿಂದ ಬಂದಂತಹ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಮಕ್ಕಳು ಬಡ ಪ್ರಾಂತ್ಯಗಳಿಂದ, ವಿಶೇಷವಾಗಿ ಕರ್ನಾಟಕದ ಬರಪೀಡಿತ ಹಾಗೂ ಅತ್ಯಂತ ಹಿಂದುಳಿದ ಪ್ರದೇಶಗಳಿಂದ ಬಂದಂತಹವರಾಗಿದ್ದಾರೆ. ಮಣಿಪುರ, ಮೇಘಾಲಯ, ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯಗಳಿಂದ ಬಂದಂತಹ ನಿರಾಶ್ರಿತ ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಈ ಶಾಲೆಯು ಕನ್ನಡ ಹಾಗೂ ಆಂಗ್ಲ ಎರಡು ಮಾಧ್ಯಮಗಳಲ್ಲಿ ಶಿಕ್ಷಣವನ್ನು ಒದಗಿಸುತ್ತಿದ್ದು, ೪,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ೩,೦೦೦ ಮಕ್ಕಳು ವಸತಿಸಹಿತ ಶಿಕ್ಷಣವನ್ನು ಪಡೆಯುತ್ತಿದ್ದು, ಉಳಿದವರು ವಸತಿರಹಿತ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ರಾಜ್ಯ ಪಠ್ಯಕ್ರಮದಡಿ ನರ್ಸರಿಯಿಂದ ೧೦ನೇ ತರಗತಿಯವರೆಗೂ ಶಿಕ್ಷಣವನ್ನು ಕಲ್ಪಿಸಲಾಗುತ್ತಿದೆ. ಅರ್ಹ ಹಾಗೂ ಸಮರ್ಪಿತ ಬೋಧಕರ ತಂಡವಿದೆ.
ಆರೋಗ್ಯಸೇವೆ – ಮಾದರಿ ಆರೋಗ್ಯ ಗ್ರಾಮ
ಸುತ್ತೂರು ಶ್ರೀಕ್ಷೇತ್ರದಲ್ಲಿ ಆರೋಗ್ಯಸೇವೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಗ್ರಾಮದ ಕುಟುಂಬಗಳನ್ನು ಉಚಿತವಾಗಿ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸುವ ‘ಮಾದರಿ ಆರೋಗ್ಯ ಗ್ರಾಮ’ ಯೋಜನೆ ವ್ಯಾಪ್ತಿಯಡಿ ತರಲಾಗಿದೆ.ಕುಡಿಯುವ ನೀರು ಹಾಗೂ ನೈರ್ಮಲ್ಯ
ರಾಜೀವ್ ಗಾಂಧಿ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ಸುತ್ತೂರು ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸಲಾಗಿದೆ. ಈ ಮೂಲಕ ಗ್ರಾಮಸ್ಥರಿಗೆ ಪ್ರತಿ ದಿನಕ್ಕೆ ೭೦ ಎಲ್ಪಿಸಿಡಿ (ದಿನವೊಂದಕ್ಕೆ ಪ್ರತಿ ವ್ಯಕ್ತಿಗೆ ನೀಡುವ ಲೀಟರ್ ನೀರಿನ ಪ್ರಮಾಣ) ನೀರನ್ನು ಒದಗಿಸಲಾಗುತ್ತಿದೆ.ಗೋಶಾಲೆ
ಶ್ರೀಮಠವು ಸುತ್ತೂರಿನಲ್ಲಿ ಗೋಶಾಲೆಯೊಂದನ್ನು ಸ್ಥಾಪಿಸಿದೆ. ಈ ಗೋಶಾಲೆಯಲ್ಲಿ ಗೋವುಗಳ ಆರೈಕೆಗಾಗಿ ಉತ್ಕೃಷ್ಟ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜೊತೆಗೆ, ಭಾರತೀಯ ವಿಶೇಷ ತಳಿಗಳ ಗೋವುಗಳನ್ನು ಸಂರಕ್ಷಿಸುವ ಪ್ರಯತ್ನಗಳೂ ಇಲ್ಲಿ ನಡೆಯುತ್ತಿದೆ.ಸಂತ್ರಸ್ತರಿಗೆ ಸಹಾಯಹಸ್ತ
ಶ್ರೀ ಸುತ್ತೂರು ಮಠ, ಮೈಸೂರು ನಾಗರಿಕರ ವೇದಿಕೆ ಸಹಯೋಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಹಲವಾರು ಸಮಾಜ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ನೈಸರ್ಗಿಕ ವಿಕೋಪಗಳಿಗೆ ಸಿಲುಕಿದಂತಹ ಸಾವಿರಾರು ಸಂತ್ರಸ್ತರಿಗೆ ಸಂದರ್ಭಕ್ಕನುಸಾರವಾಗಿ ಅಗತ್ಯ ನೆರವನ್ನು ಈ ಮೂಲಕ ಕಲ್ಪಿಸಲಾಗಿದೆ. ಪುದುಚೆರಿಯಲ್ಲಿ ನಡೆದಂತಹ ಸುನಾಮಿ ಸಂತ್ರಸ್ತರಾಗಲಿ, ಕರ್ನಾಟಕದ ಕೊಡಗು ಹಾಗೂ ಕೇರಳದಲ್ಲಿ ನಡೆದಂತಹ ನೆರೆ ಹಾವಳಿಯಾಗಲಿ, ಸಂತ್ರಸ್ತರಿಗೆ ಅಗತ್ಯ ಸಮಯೋಚಿತ ಸಹಾಯವನ್ನು ಕಲ್ಪಿಸಲಾಗಿದೆ.ವಿಶೇಷಚೇತನರ ಸಬಲೀಕರಣ
ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳಿಸಲು ಜೆಎಸ್ಎಸ್ ಮಹಾವಿದ್ಯಾಪೀಠವು ವಿಶೇಷಚೇನತರಿಗಾಗಿಯೇ ಪ್ರತ್ಯೇಕವಾಗಿ ಸಹನಾ ಶಾಲೆಗಳು ಹಾಗೂ ಪಾಲಿಟೆಕ್ನಿಕ್ (ಕಾಲೇಜು) ಅನ್ನು ನಡೆಸುತ್ತಿದೆ. ವಿಶೇಷಚೇತನ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಹಾಗೂ ಅವರ ಹಕ್ಕುಗಳು ಹಾಗೂ ಜವಾಬ್ದಾರಿಗಳ ಕುರಿತಂತೆ ಅರಿವು ಮೂಡಿಸುವುದು, ಅವರಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಬಹಿರಂಗಪಡಿಸುವುದು ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಏಕೀಕರಣಗೊಳಿಸುವುದು ಈ ಸಂಸ್ಥೆಗಳ ಉದ್ದೇಶವಾಗಿದೆ. ಸಹನಾ ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷ ತರಬೇತಿ ಪಡೆದಿರುವ ಬೋಧಕರಿಂದ ಬೋಧನೆಯನ್ನು ಒದಗಿಸಿ ಆ ಮೂಲಕ ಅವರನ್ನು ಇತರೆ ಮಕ್ಕಳೊಂದಿಗೆ ಸಮೀಕರಣಗೊಳಿಸಲಾಗುತ್ತದೆ. ಜೆಎಸ್ಎಸ್ ವಿಶೇಷಚೇನತರ ಪಾಲಿಟೆಕ್ನಿಕ್ ಅನ್ನು ೧೯೯೧ರಲ್ಲಿ ಆರಂಭಿಸಲಾಯಿತು ಹಾಗೂ ಹೊಸ ಕಟ್ಟಡವನ್ನು ೧೯೯೯ರ ಜನವರಿಯಲ್ಲಿ ರಾಷ್ಟ್ರದ ಅಂದಿನ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಉದ್ಘಾಟಿಸಿದರು. ಈ ಪಾಲಿಟೆಕ್ನಿಕ್ ಆರು ಡಿಪ್ಲೊಮಾ ಕೋರ್ಸ್ಗಳನ್ನು ಒದಗಿಸುವಂತಹ ಈ ರೀತಿಯ ಭಾರತದ ಏಕೈಕ ಪಾಲಿಟೆಕ್ನಿಕ್ ಆಗಿದೆ. ಭಾರತ ಸರ್ಕಾರದ ಮಾನವ ಸಂಪನ್ಮೂಲಗಳ ಇಲಾಖೆಯು ಈ ಪಾಲಿಟೆಕ್ನಿಕ್ ಅನ್ನು ವಿಶೇಷಚೇತನರಿಗೆ ಸುಧಾರಿತ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ಒದಗಿಸುವಂತಹ ಸಂಪನ್ಮೂಲ ಕೇಂದ್ರವೆಂದು ಪರಿಗಣಿಸಿದೆ.ಮಹಿಳಾ ಸಬಲೀಕರಣ
ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿ, ಮಹಿಳಾ ಸಬಲೀಕರಣ, ಅದರಲ್ಲಿಯೂ ಗ್ರಾಮೀಣ ಮಹಿಳೆಯರ ಸಬಲೀಕರಣವನ್ನು ಅವಲಂಬಿಸಿದೆ. ಜೆಎಸ್ಎಸ್ ಮಹಾವಿದ್ಯಾಪೀಠ ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಂಕಲ್ಪದೊAದಿಗೆ ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಕಾಲೇಜುಗಳನ್ನು ಸ್ಥಾಪಿಸಿದೆ. ಮಹಿಳೆಯರ ಕಾಲೇಜು: ಮೈಸೂರು, ಕೊಳ್ಳೇಗಾಲ ಹಾಗೂ ಚಾಮರಾಜನಗರಗಳಲ್ಲಿ ಮೂರು ಮಹಿಳಾ ಕಾಲೇಜುಗಳುಮಹಿಳೆಯರ ಸ್ವಉದ್ಯೋಗ ಸಲಹಾ ಕೇಂದ್ರ:
- ಮಹಿಳೆಯರಿಗೆ ಹಲವು ಅಲ್ಪಾವಧಿ ಕೋರ್ಸ್ಗಳನ್ನು ನಡೆಸಲಾಗುತ್ತಿದೆ.
- ಮಹಿಳೆಯರಿಗೆ ಸ್ವಂತ ವ್ಯಾಪಾರ ಕೈಗೊಳ್ಳಲು ಸಲಹಾ ಸೇವೆಗಳನ್ನು ಒದಗಿಸಲಾಗುತ್ತಿದೆ.
- ವೈದ್ಯಕೀಯ ಕಾಲೇಜು – ೧
- ಫಾರ್ಮಸಿ ಕಾಲೇಜು – ೨
- ದಂತ ವೈದ್ಯಕೀಯ ಕಾಲೇಜು – ೧
- ಆಯುರ್ವೇದ ಕಾಲೇಜು – ೧
- ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ – ೧
- ವಾಕ್ ಮತ್ತು ಶ್ರವಣ ಸಂಸ್ಥೆಗಳು – ೨
- ಫಿಸಿಯೋಥೆರಪಿ ಕಾಲೇಜು – ೧
- ನರ್ಸಿಂಗ್ ಶಾಲೆಗಳು – ೩
- ಆಸ್ಪತ್ರೆಗಳು – ೬
- ಆರೋಗ್ಯ ಕೇಂದ್ರಗಳು – ೨
- ಔಷಧ ಕೇಂದ್ರಗಳು – ೬
- ಜೆಎಸ್ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯ
- ಎಸ್ಜೆಸಿಇ, ಮೈಸೂರು – ೧
- ಇಂಜಿನಿಯರಿಂಗ್ ಕಾಲೇಜುಗಳು – ೩
- ಪಾಲಿಟೆಕ್ನಿಕ್ಗಳು – ೪
- ಕೈಗಾರಿಕಾ ತರಬೇತಿ ಸಂಸ್ಥೆಗಳು – ೩
- ಎಸ್ಜೆಸಿಇ, ಮೈಸೂರು – ೧
- ಇಂಜಿನಿಯರಿಂಗ್ ಕಾಲೇಜುಗಳು – ೩
- ಪಾಲಿಟೆಕ್ನಿಕ್ಗಳು – ೪
- ಕೈಗಾರಿಕಾ ತರಬೇತಿ ಕೇಂದ್ರಗಳು – ೩
- ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಪಾರ್ಕ್ಗಳು – ೩
- ವ್ಯವಹಾರ ನಿರ್ವಹಣೆ ಶಿಕ್ಷಣ ಸಂಸ್ಥೆ – ೧
- ತಾಂತ್ರಿಕ ಶಿಕ್ಷಣದ ಇತರೆ ಸಂಸ್ಥೆಗಳ ವಿಭಾಗ – ೪
- ರಾಷ್ಟ್ರೀಯ/ಅಂತರರಾಷ್ಟ್ರೀಯ ಕಂಪನಿಗಳು – ೪
- ತರಬೇತಿ ಸಂಸ್ಥೆಗಳು – ೨
- ಪೋಷಕ ಸಂಸ್ಥೆಗಳು – ೨
- ಸಹಕಾರ ಸಂಘಗಳು – ೨
- ಇತರೆ ಸಂಸ್ಥೆಗಳು – ೨
- ಸಾಹಿತ್ಯ, ಸಂಸ್ಕೃತಿ ಹಾಗೂ ಲಲಿತ ಕಲೆಗಳು – ೪
- ಪ್ರಕಾಶನಗಳು – ೪
- ಶಿಶು ವಿಹಾರಗಳು – ೭
- ನರ್ಸರಿ ಶಾಲೆಗಳು – ೨೩
- ಪ್ರೌಢಶಾಲೆಗಳು – ೬೨
- ವಿಶೇಷ (ಸಹನಾ) ಶಾಲೆಗಳು – ೨
- ಸಂಸ್ಕೃತ ಪಾಠಶಾಲೆಗಳು – ೧೦
- ಪದವಿಪೂರ್ವ ಕಾಲೇಜುಗಳು – ೨೩
- ಪದವಿ ಕಾಲೇಜುಗಳು – ೬
- ಕಾನೂನು ಕಾಲೇಜು – ೧
- ಪಬ್ಲಿಕ್ ಶಾಲೆಗಳು – ೧೭
- ಡಿ.ಇಡಿ. ಕಾಲೇಜುಗಳು – ೨
- ಬಿ.ಇಡಿ. ಕಾಲೇಜುಗಳು – ೪
- ಸಂಸ್ಕೃತ ಪದವಿ ಕಾಲೇಜು – ೧
- ಲಲಿತ ಕಲೆಗಳ ಸಂಸ್ಥೆ – ೧
- ಜನಶಿಕ್ಷಣ ಸಂಸ್ಥೆ – ೨
- ಜೆಎಸ್ಎಸ್ ಕರ್ನಾಟಕ ಮುಕ್ತ ಶಾಲೆ – ೧
- ವಸತಿಗೃಹಗಳು – ೯
- ಸಾಮಾನ್ಯ ವಿದ್ಯಾರ್ಥಿನಿಲಯಗಳು – ೭
- ಶಿಕ್ಷಣ ಸಂಸ್ಥೆಗಳಿಗೆ ಹೊಂದಿಕೊಡಲಾದ ವಿದ್ಯಾರ್ಥಿನಿಲಯಗಳು – ೪೨
- ಮಂಗಳ ಮಂಪಟಗಳು – ೮
- ಸಭಾಂಗಣಗಳು – ೫
- ಹಿರಿಯ ನಾಗರಿಕರ ಸೇವಾ ಕೇಂದ್ರಗಳು – ೪
- ಗುರುಕುಲಗಳು – ೨
- ಕುಠೀರಗಳು – ೨
- ಕೃಷಿ ಉತ್ತೇಜನಾ ಸಂಸ್ಥೆಗಳು – ೨
- ದತ್ತಿಗಳು – ೧೫
- ಕೆಎಸ್ಎಸ್ ಅನಾಥಾಲಯ, ವಾಣಿವಲಾಸ ರಸ್ತೆ, ಮೈಸೂರು
- ಜೆಎಸ್ಎಸ್ ವಿದ್ಯಾರ್ಥಿನಿಲಯ (ಮುಖ್ಯ ಕಟ್ಟಡ), ವಾಣಿವಿಲಾಸ ರಸ್ತೆ, ಮೈಸೂರು
- ಜೆಎಸ್ಎಸ್ ವಿದ್ಯಾರ್ಥಿನಿಲಯ, ಸುತ್ತೂರು
- ಜೆಎಸ್ಎಸ್ ನಿರ್ಗತಿಕ ಮಕ್ಕಳ ಗೃಹ, ಸುತ್ತೂರು
- ಜೆಎಸ್ಎಸ್ ಅನಾಥಾಲಯ, ಜೋಡಿ ರಸ್ತೆ, ಚಾಮರಾಜನಗರ
- ಜಗದ್ಗುರು ಶ್ರೀ ಶಿವರಾತ್ರೀಶ್ವರ ಪ್ರಸಾದನಿಲಯ, ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ರಾಮಾನುಜ ರಸ್ತೆ, ಮೈಸೂರು
- ಜಗದ್ಗುರು ಶ್ರೀ ಶಿವರಾತ್ರೀಶ್ವರ ಮೆಟ್ರಿಕ್ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ರಾಮಾಪುರ, ಹನೂರು
- ಜಗದ್ಗುರು ಶ್ರೀ ಶಿವರಾತ್ರೀಶ್ವರ ಅನಥಾಲಯ, ತೆರಕಣಾಂಬಿ, ಗುಂಡ್ಲುಪೇಟೆ
- ಜೆಎಸ್ಎಸ್ ನಿರ್ಗತಿಕ ಮಕ್ಕಳ ಗೃಹ, ಹುಲ್ಲಹಳ್ಳಿ, ನಂಜನಗೂಡು
- ಜಗದ್ಗುರು ಶ್ರೀ ಶಿವರಾತ್ರೀಶ್ವರ ಅನಾಥಾಲಯ, ದೊಡ್ಡಕಾಡನೂರು, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ
- ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿದ್ಯಾರ್ಥಿನಿಲಯ, ಕೆ.ಆರ್.ನಗರ
- ಉದ್ಯೋಗಸ್ಥ ವಿಶೇಷಚೇತನ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗಾಗಿ ಜೆಎಸ್ಎಸ್ ವಿದ್ಯಾರ್ಥಿನಿಲಯ, ಮೈಸೂರು
- ಶ್ರೀ ಬಸವೇಶ್ವರ ಅನಾಥಾಲಯ, ಬಾಚಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು
- ಶ್ರೀ ಬಸವೇಶ್ವರ ಅನಾಥಾಲಯ, ಶಿವಪುರ, ಗುಂಡ್ಲುಪೇಟೆ ತಾಲ್ಲೂಕು
- ಶ್ರೀ ಬಸವೇಶ್ವರ ಅನಾಥಾಲಯ, ವಡ್ಡಗೆರೆ, ಗುಂಡ್ಲುಪೇಟೆ ತಾಲ್ಲೂಕು
- ಜೆಎಸ್ಎಸ್ ಸ್ಪಿರಿಚ್ಯೂವಲ್ ಮಿಷನ್ (ಯುಎಸ್ಎ)
- ಜೆಎಸ್ಎಸ್ ಅಧ್ಯಾತ್ಮ ಹಾಗೂ ಸಾಂಸ್ಕೃತಿಕ ಕೇಂದ್ರ, ಸಾಕೇತ್, ನವದೆಹಲಿ
ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು
ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವನ್ನು (ಕೃಷಿ ವಿಜ್ಞಾನ ಕೇಂದ್ರ) ೧೯೯೪ರಲ್ಲಿ ಸ್ಥಾಪಿಸಲಾಯಿತು. ಭಾರತ ಸರ್ಕಾರದ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ವತಿಯಿಂದ ಮಂಜೂರಾದಂತಹ ಈ ಕೇಂದ್ರವು ರೈತರಿಗೆ ಆಧುನಿಕ ಕೃಷಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅಗತ್ಯ ತಾಂತ್ರಿಕ ಮಾಹಿತಿಯನ್ನು ಒದಗಿಸುವ ಕೆಲಸದಲ್ಲಿ ತೊಡಗಿದೆ. ಶ್ರೀಮಠವು ಈ ಕೇಂದ್ರದ ವತಿಯಿಂದ ಆಧುನಿಕ ಅಭ್ಯಾಸಗಳ ಪ್ರಕಾರ ನಡೆಸುವಂತಹ ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆಗಳು ಹಾಗೂ ಸಾಗುವಳಿಗಾಗಿ ೫೨ ಎಕರೆಗಳ ಜಾಗವನ್ನು ನೀಡಿದೆ. ಇದರ ಜೊತೆಗೆ ಕೃಷಿ ತಜ್ಞರು ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ, ಹೆಚ್ಚಿನ ಇಳುವರಿಗಾಗಿ ರೈತರು ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡಿರುವುದನ್ನು ಖಾತ್ರಿಪಡಿಸುತ್ತಾರೆ. ರೈತರು, ಮಹಿಳೆಯರು ಹಾಗೂ ಯುವಜನತೆಗಾಗಿ ಕಾಲಕಾಲಕ್ಕೆ ಕೃಷಿ ಅಭ್ಯಾಸಗಳು ಹಾಗೂ ತಂತ್ರಗಳ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಜ್ಞಾನ ಹಾಗೂ ತಂತ್ರಜ್ಞಾನಕ್ಕಾಗಿ ಜ್ಞಾನ ಸಂಪನ್ಮೂಲ ಕೇಂದ್ರ (ಕೆಆರ್ಸಿಎಸ್ಟಿ) ಸಂಕೀರ್ಣ ಸವಾಲುಗಳನ್ನು ಬಗೆಹರಿಸಲು ಹಾಗೂ ಸಾಮಾಜಿಕ ಪರಿವರ್ತನೆಗಾಗಿ ಹಾಗೂ ಅನೌಪಚಾರಿಕ ಕಲಿಕಾ ಪ್ರಕ್ರಿಯೆಯ ಮೂಲಕ ವಿಜ್ಞಾನ ಹಾಗೂ ತಂತ್ರಜ್ಞಾನದ ಕುರಿತು ಕುತೂಹಲವನ್ನು ಮೂಡಿಸುವುದು ಹಾಗೂ ಆ ಮೂಲಕ ಕಲಿಕೆ ಹಾಗೂ ಕ್ರಿಯಾಶೀಲತೆಯನ್ನು ಬೆಳೆಸಲು ವೈಜ್ಞಾನಿಕ ಹಾಗೂ ತಂತ್ರಜ್ಞಾನ ಸುಧಾರಣೆಗಳ ಆಧಾರಿತ ಬುದ್ಧಿವಂತ ಸಮಾಜವನ್ನು ಅಭಿವೃದ್ಧಿಪಡಿಸುವುದು ಈ ಕೇಂದ್ರದ ಗುರಿಯಾಗಿದೆ. ಉನ್ನತ ವಿಜ್ಞಾನ ಅನುಭವಗಳನ್ನು ಸೃಷ್ಟಿಸುವುದು, ರೋಮಾಂಚಕಾರಿ ಒಳಾಂಗಣ ಹಾಗೂ ಹೊರಾಂಗಣ ಪ್ರದರ್ಶಿಕೆಗಳು/ಪ್ರದರ್ಶನಗಳ ಆಯೋಜನೆಗಾಗಿ ಸುತ್ತೂರಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಇದು, ಭಾಗವಹಿಸುವ ಕಲಿಕಾ ಅನುಭವ ಹಾಗೂ ವಿಸ್ಮಯಕಾರಿ ಶ್ರವಣ-ದೃಶ್ಯ ಚಲನಚಿತ್ರಗಳೊಂದಿಗೆ ಪರಸ್ಪರ ಸಂವಾದವಿರು ವಂತಹ ಹಾಗೂ ತೊಡಗಿಸಿಕೊಳ್ಳುವ ಕಾರ್ಯಕ್ರಮಗಳ ಜೊತೆಗೆ ಹೊಸ ಹಾಗೂ ನವೀನ ಪ್ರದರ್ಶಿಕೆಗಳು ಹಾಗೂ ವಿಷಯಗಳ ತಯಾರಿಕೆಯನ್ನು ಆಧರಿಸಿರುತ್ತದೆ. ಈ ವಿಶೇಷ ಕೇಂದ್ರವು, ಭೇಟಿ ನೀಡುವವರಿಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತದ ವೈಜ್ಞಾನಿಕ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಒಂದು ಅವಕಾಶವನ್ನು ಒದಗಿಸುತ್ತದೆ. ಈ ಕೇಂದ್ರವನ್ನು ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಭಾರತ ಸರ್ಕಾರದ ಜೊತೆಗೆ ಕರ್ನಾಟಕ ಸರ್ಕಾರದ ಜಂಟಿ ಸಂಯೋಜನೆಯ ಪ್ರಯತ್ನದೊಂದಿಗೆ ರೂ.೧೭೫ ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನ ಹಾಗೂ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ.ಜೆಎಸ್ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯ
ಈ ವಿಶ್ವವಿದ್ಯಾಲಯವು ಜೆಎಸ್ಎಸ್ ಮಹಾವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಗಮನಕೇಂದ್ರಿತ, ಕಲಿಕಾ-ಕೇಂದ್ರಿತ ಪರಿಸರ ವ್ಯವಸ್ಥೆಯೊಂದಿಗೆ ಭವಿಷ್ಯದ ಜಾಗತಿಕ ವಿಶ್ವವಿದ್ಯಾಲಯವನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಜೆಎಸ್ಎಸ್ ಎಸ್&ಟಿ ವಿಶ್ವವಿದ್ಯಾಲಯವು ಯುವಜನರಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಅವಕಾಶಗಳನ್ನು ಒದಗಿಸಲು ಹಾಗೂ ಕೇವಲ ತನ್ನ ನೆರೆಯನ್ನು ಪರಿವರ್ತಿಸುವುದಷ್ಟೇ ಅಲ್ಲದೆ ಪ್ರತಿ ಕ್ಷೇತ್ರದಲ್ಲಿಯೂ ಕೈಗಾರಿಕೆ/ಉದ್ಯಮಗಳ ಜಾಗತಿಕ ಅಗತ್ಯಗಳನ್ನು ಪೂರೈಸಲು ಉತ್ಸಾಹವುಳ್ಳ ಯುವಜನರಿಗೆ ಸೂಕ್ತ ಕೋರ್ಸ್ ಗಳನ್ನು ಒದಗಿಸಲು ಬದ್ಧವಾಗಿದೆ. ವಿಸ್ತಾರವಾದ, ಸುಸ್ಥಿರ, ಮೌಲ್ಯ ಚಾಲಿತ ಹಾಗೂ ಸಂಶೋಧನಾ ತೀವ್ರತೆಯುಳ್ಳ ಹಾಗೂ ರಾಷ್ಟç ನಿರ್ಮಾಣವನ್ನು ಏಕೀಕರಣಗೊಳಿಸುವಂತಹ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಇದರ ಧ್ಯೇಯವಾಗಿದೆ.ಜೆಎಸ್ಎಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ
ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯನ್ನು (ಈ ಹಿಂದೆ ಜೆಎಸ್ಎಸ್ ಯೂನಿವರ್ಸಿಟಿ ಎಂದು ಕರೆಯಲ್ಪಡುತ್ತಿದ್ದ) ೨೦೦೮ನೇ ಇಸವಿಯಲ್ಲಿ, ಜೆಎಸ್ಎಸ್ ವೈದ್ಯಕೀಯ ಕಾಲೇಜು, ಮೈಸೂರು, ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಮೈಸೂರು, ಜಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ, ಮೈಸೂರು ಹಾಗೂ ಜೆಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ, ಊಟಿ (ಆವರಣದ ಹೊರಗೆ), ಈ ನಾಲ್ಕು ಅಂಗ ಕಾಲೇಜುಗಳನ್ನು ಒಳಗೊಂಡಂತಹ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯವಾಗಿ (ಡೀಮ್ಡ್ ಟು ಬಿ ಯೂನಿವರ್ಸಿಟಿಯಾಗಿ) ಸ್ಥಾಪಿಸಲಾಯಿತು. ಇಂದು ಈ ವಿಶ್ವವಿದ್ಯಾಲಯವು ಅತ್ಯಂತ ಶಕ್ತಿಶಾಲಿಯಾಗಿ ಬೆಳೆದಿದ್ದು, ಟೈಮ್ಸ್ ಹೈಯರ್ ಎಜುಕೇಷನ್ ವರ್ಲ್ಡ್ ಯೂನಿವರ್ಸಿಟಿ ರಾಂಕಿಂಗ್ ನಿಂದ ವಿಶ್ವದ ಅತ್ಯುತ್ತಮ ೫೦೦ ವಿಶ್ವವಿದ್ಯಾಲಯಗಳ ಪೈಕಿ ಗುರುತಿಸಿಕೊಂಡಿದೆ. ಈ ಡೀಮ್ಡ್ ಟು ಬಿ ಯೂನಿವರ್ಸಿಟಿಯು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರಾಷ್ಟ್ರ ಮಟ್ಟದಲ್ಲಿ ೫೦ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪೈಕಿ ತನ್ನ ಸ್ಥಾನವನ್ನು ಸ್ಥಿರವಾಗಿ ಉಳಿಸಿಕೊಂಡಿದೆ. ಜಲ & ಆರೋಗ್ಯ, ಆರೋಗ್ಯ ವ್ಯವಸ್ಥೆ ನಿರ್ವಹಣಾ ಅಧ್ಯಯನಗಳು, ಪೌಷ್ಠಿಕತೆ ಹಾಗೂ ಪಥ್ಯ ಮತ್ತು ಯೋಗ ಇಲಾಖೆಗಳನ್ನು ಸ್ಥಾಪಿಸಿದೆ. ಜೊತೆಗೆ, ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ವತಿಯಿಂದ ಎ+ ಶ್ರೇಣಿಯನ್ನು ಪಡೆದುಕೊಂಡಿದೆ.ಜೆಎಸ್ಎಸ್ ರುಡ್ಸೆಟ್
ಜೆಎಸ್ಎಸ್ ಗ್ರಾಮೀಣಾಭಿವೃದ್ಧಿ ಹಾಗೂ ಸ್ವಉದ್ಯೋಗ ತರಬೇತಿ ಸಂಸ್ಥೆ ನಿರುದ್ಯೋಗಿ ಯುವಸಮೂಹವನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವ ಉಪಕ್ರಮ/ ಯುವ ನಿರುದ್ಯೋಗಿಗಳ ಬಾಳಲ್ಲಿ ಹೊಂಗಿರಣ, ನಿರುದ್ಯೋಗಿ ಯುವಕರನ್ನು, ಉಪಯುಕ್ತ, ಉತ್ಪಾದಕ ಹಾಗೂ ಸ್ವಾವಲಂಬಿ ಉದ್ಯಮಿಗಳನ್ನಾಗಿ ರೂಪಿಸಲು ಜೆಎಸ್ಎಸ್ ಮಹಾವಿದ್ಯಾಪೀಠವು ಮೈಸೂರು ಬ್ಯಾಂಕ್ & ಕರ್ನಾಟಕ ಸರ್ಕಾರದ ಕೈಗಾರಿಕೆಗಳು ಹಾಗೂ ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ೨೦೦೧-೦೨ನೇ ಇಸವಿಯಲ್ಲಿ ಜೆಎಸ್ಎಸ್ ಗ್ರಾಮೀಣಾಭಿವೃದ್ಧಿ ಹಾಗೂ ಸ್ವಉದ್ಯೋಗ ತರಬೇತಿ ಸಂಸ್ಥೆಯನ್ನು (ರುಡ್ಸೆಟ್) ಸ್ಥಾಪಿಸಿತು. ಸ್ಥಾಪನೆಯಾದಾಗಿನಿಂದ ಈ ಸಂಸ್ಥೆಯು ಕರ್ನಾಟಕ ರಾಜ್ಯದ ಹಿಂದುಳಿದ ಜಿಲ್ಲೆ ಎನಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ನಿಶ್ಯಬ್ದವಾಗಿ ಹೊಸ ಕ್ರಾಂತಿಯನ್ನು ಮಾಡುತ್ತಿದೆ. ಸುಮಾರು ೯.೫ ಎಕರೆಯಷ್ಟು ವಿಶಾಲವಾದ ಆವರಣದಲ್ಲಿ ಸ್ಥಾಪನೆಯಾಗಿರುವ ರುಡ್ಸೆಟ್ ನಾಲ್ಕು ಉತ್ಪಾದನಾ ಹಾಗೂ ತರಬೇತಿ ಕೇಂದ್ರಗಳು ಹಾಗೂ ಒಂದು ಬಾರಿಗೆ ೮೦-೧೦೦ ಜನರಿಗೆ ಉಳಿದುಕೊಳ್ಳಲು ವಸತಿಸೌಕರ್ಯವನ್ನು ಒಳಗೊಂಡಿದೆ. ಈ ಕೇಂದ್ರವು, ಉತ್ಪಾದನಾ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ಸಂಭವನೀಯ ಉದ್ಯೋಗಾವಕಾಶಗಳ ಕ್ಷೇತ್ರಗಳನ್ನು ಹಾಗೂ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕ್ಷಮತೆಯನ್ನು ಹೊಂದಿದೆ.
ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು
ವೃತ್ತಿಪರ ಸಂಸ್ಥೆಗಳು
ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಕೇಂದ್ರಗಳು
ಜಾಗತೀಕರಣದೆಡೆಗೆ
ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ವಿಸ್ತರಣೆ
ಸಾಮಾನ್ಯ ಶಿಕ್ಷಣ
ವಿದ್ಯಾರ್ಥಿನಿಲಯಗಳು
ಪೂರಕ ಸಾಮಾಜಿಕ ಸಂಸ್ಥೆಗಳು
ಇತರೆ
ಶ್ರೀಮಠದ ಆಶ್ರಯದಲ್ಲಿ ಹಲವಾರು ಅನಾಥಾಲಯಗಳು, ನಿರ್ಗತಿಕ ಮಕ್ಕಳ ಗೃಹಗಳು ಹಾಗೂ ಉಚಿತ ವಿದ್ಯಾರ್ಥಿನಿಲಯಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ನಡೆಸಲಾಗುತ್ತಿದೆ:
ಪಾರಂಪರಿಕ ಹಾಗೂ ಅಧ್ಯಾತ್ಮಿಕ ಜಾಗೃತಿಗೆ ಕೊಡುಗೆ
ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ೧೯೮೬ರಲ್ಲಿ ಅಮೇರಿಕಾಕ್ಕೆ ಭೇಟಿ ನೀಡಿದ್ದರು. ಅಮೇರಿಕಾದಲ್ಲಿ ಆಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸಿ, ಭಾರತದ ಆಧ್ಯಾತ್ಮಿಕತೆಯನ್ನು ಅಲ್ಲಿ ನೆಲೆಸಿರುವ ಭಾರತೀಯರಿಗೆ ಹಾಗೂ ಇತರರಿಗೆ ಪರಚಯಿಸುವುದು ಅವರ ಬಹಳ ದೀರ್ಘ ಕಾಲದ ಕನಸಾಗಿತ್ತು. ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತಂತಹ ಹಳೆಯ ಹಾಗೂ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವಂತಹ ವಿದ್ಯಾರ್ಥಿಗಳು, ಅವರ ಕುಟುಂಬದ ಸದಸ್ಯರು ಹಾಗೂ ಜೆಎಸ್ಎಸ್ ಸಂಸ್ಥೆಗಳ ಭಕ್ತಾದಿಗಳ ತೀವ್ರಾಪೇಕ್ಷೆಯ ಮೇರೆಗೆ, ಶ್ರೀಮಠದ ಈಗಿನ ಮಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಅಮೇರಿಕಾದ ಮೇರಿಲ್ಯಾಂಡ್ನಲ್ಲಿ ೧೯೯೯ರಲ್ಲಿ ಜೆಎಸ್ಎಸ್ ಸ್ಪಿರಿಚ್ಯೂವಲ್ ಮಿಷನ್ ಅನ್ನು ಸ್ಥಾಪಿಸಿದರು.
ಈಗ ಜೆಎಸ್ಎಸ್ ಸ್ಪಿರಿಚ್ಯೂವಲ್ ಮಿಷನ್, ಇತರೆ ಸಮಾನಮನಸ್ಕ ಸಂಸ್ಥೆಗಳ ಸಹಯೋಗದೊಂದಿಗೆ ಭಾರತದ ಶ್ರೀಮಂತ ಸಾಮಾಜಿಕ-ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವದ ಎಲ್ಲ ಮೂಲೆಗಳಿಗೂ ತಲುಪಿಸುವ ಮಹತ್ಕಾರ್ಯದಲ್ಲಿ ತೊಡಗಿದೆ. ಧಾರ್ಮಿಕ ಪ್ರವಚನಗಳು, ಯೋಗಾಭ್ಯಾಸ ಹಾಗೂ ಪುಸ್ತಕಗಳ ಪ್ರಕಟಣೆ/ ಕ್ಯಾಸೆಟ್ಗಳು ಹಾಗೂ ಸಿಡಿಗಳ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಜನರಿಗೆ ತಲುಪಿಸುವಂತಹ ಚಟುವಟಿಕೆಗಳನ್ನು ಕೈಗೊಂಡಿದೆ. ನಮ್ಮ ಪ್ರಾಚೀನ ಮೌಲ್ಯಗಳನ್ನು ಈ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುತ್ತಿದೆ. ಯಾವುದೇ ಜಾತಿ, ಮತ, ಧರ್ಮ, ಸಮುದಾಯ, ವರ್ಣ, ಇತ್ಯಾದಿ ಭೇದಗಳಿಲ್ಲದೆ ಸುರಕ್ಷಿತ ಹಾಗೂ ನೆಮ್ಮದಿಯ ಜೀವನವನ್ನು ಅಪೇಕ್ಷಿಸುವ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುವ ಉದ್ದೇಶವನ್ನು ಹೊಂದಿದೆ.
ನೆಮ್ಮದಿ, ಸೌಹಾರ್ದತೆಯನ್ನು ಸ್ಥಾಪಿಸಲು ಹಾಗೂ ಭಾರತದ ಶ್ರೀಮಂತ ಕಲೆಗಳು ಹಾಗೂ ಸಂಸ್ಕೃತಿಯ ಪರಂಪರೆಯನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ನವದೆಹಲಿಯ ಸಾಕೇತ್ನಲ್ಲಿ ಜೆಎಸ್ಎಸ್ ಅಧ್ಯಾತ್ಮ ಹಾಗೂ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವು ಜನರಿಗೆ ಅಧ್ಯಾತ್ಮಿಕತೆಯ ನಿಜವಾದ ಸಾರವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಮಾರ್ಗದರ್ಶಕ ಶಕ್ತಿಯಂತೆ ಸೇವೆ ಸಲ್ಲಿಸುತ್ತಿದೆ.