ವಿಳಾಸ:
ಷ.ಬ್ರ.ಸ್ವ ಶ್ರೀ ಚನ್ನಬಸವ ಸ್ವಾಮಿಗಳು, ಶ್ರೀ ಸಿದ್ಧಮಲ್ಲೇಶ್ವರ ಪಟ್ಟದ ಮಠ, ಹಂಚಿಪುರ, ಸರಗೂರು ಅಂಚೆ, ಸರಗೂರು ತಾಲ್ಲೂಕು, ಮೈಸೂರು ಜಿಲ್ಲೆ. ಮೊ. 9880945834
ಮಠದ ವಿವರ:
ಹಂಚೀಪುರ ಗ್ರಾಮದಲ್ಲಿ 75 ವರ್ಷಗಳ ಹಿಂದೆಯೇ ಶ್ರೀಮಠ ಅಸ್ತಿತ್ವದಲ್ಲಿತ್ತು ಎಂಬುದು ತಿಳಿದು ಬರುತ್ತದೆ. ಗುಂಡ್ಲುಪೇಟೆ ತಾಲ್ಲೂಕು ಸೋಮಹಳ್ಳಿ ವೀರಸಿಂಹಾಸನ ಶಿಲಾ ಮಠದ ಪೀಠಾಧಿಪತಿಗಳು ಪವಾಡ ಪುರುಷರಿಂದ ಅಭಿಧಾನ ಹೊಂದಿದ್ದು ಲಿಂಗೈಕ್ಯ ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮಿಗಳಿಂದ ಶ್ರೀ ಸಿದ್ದಮಲ್ಲೇಶ್ವರ ದಾಸೋಹ ಮಠವು ಸ್ಥಾಪಿತವಾಯಿತು. ಶ್ರೀಗಳು ಆಗ ಎತ್ತಿನ ಗಾಡಿಯಲ್ಲಿ ಪ್ರಯಾಣ ಮಾಡಿ ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ಹಾಗೂ ಸರಗೂರು ತಾಲ್ಲೂಕಿನಲ್ಲಿ ದಾಸೋಹ ಮಠಗಳನ್ನು ಸ್ಥಾಪಿಸಿದರು. ಇವರ ಕಾಲದಲ್ಲಿ ಸ್ಥಾಪಿತವಾದ ದಾಸೋಹ ಮಠಗಳು ಕೆಲವು ಇಂದು ಪಟ್ಬದ ಮಠಗಳಾಗಿ ಬದಲಾವಣೆಗೊಂಡಿದೆ, ಅವುಗಳಲ್ಲಿ ಹಂಚೀಪುರ ಮಠವು ಒಂದಾಗಿದೆ.ಸೋಮಹಳ್ಳಿ ವೀರಸಿಂಹಾಸನ ಶಿಲಾ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಪಟ್ಟದ ಸಿದ್ದಮಲ್ಲ ಸ್ವಾಮಿಗಳು ಹಂಚೀಪುರ ಭಕ್ತರೊಡನೆ ಸಮಾಲೋಚಿಸಿ 1980 ರಲ್ಲಿ ಈ ಮಠವನ್ನು ಪಟ್ಟದ ಮಠವನ್ನಾಗಿ ಬದಲಾವಣೆ ಮಾಡಿ ಈ ಮಠಕ್ಕೆ ನಂಜನಗೂಡು ತಾಲ್ಲೂಕು ಕುರಹಟ್ಟಿಯ ಶ್ರೀ ಪುಟ್ಟಸ್ವಾಮಿ ದೇವರಿಗೆ ಶ್ರೀ ಚನ್ನಬಸವ ಸ್ವಾಮಿಗಳೆಂದು ಪುನರ್ ನಾಮಕರಣ ಮಾಡಿ ಹಂಚೀಪುರ ಮಠಕ್ಕೆ ಹರಗುರು ಚರಮೂರ್ತಿಗಳು ಹಾಗೂ ಭಕ್ತಾದಿಗಳ (ಶರಣ, ಶರಣೆಯರ) ಸಮ್ಮುಖದಲ್ಲಿ ಸೋಮಹಳ್ಳಿ ಮಠದ ಶ್ರೀ ಶ್ರೀ ಸಿದ್ದಮಲ್ಲ ಸ್ವಾಮಿಗಳು ಅಧಿಕಾರವನ್ನು ವಹಿಸಿಕೊಟ್ಟರು. ಶ್ರೀ ಚನ್ನಬಸವ ಸ್ವಾಮಿಗಳು ಪೂಜೆಯ ನಿಷ್ಟರಾಗಿ ಶ್ರೀ ಮಠಕ್ಕೆ ಶ್ರೀ ಮಠದ ಏಳಿಗೆಗಾಗಿ ಶ್ರಮಿಸಿದರು. 1982 ಮತ್ತು 83 ರಲ್ಲಿ ಕಾನ್ವೆಂಟ್ ಉಚಿತ ವಿದ್ಯಾರ್ಥಿನಿಲಯವನ್ನು ತೆರೆದಿದ್ದರು ಹಾಗು ಹೆಗ್ಗಡದೇವನಕೋಟೆ ತಾಲ್ಲೂಕಿನ ಹಳ್ಳಿಗಳಲ್ಲಿಯೂ ಪ್ರೀತಿ ಪಾತ್ರರಾಗಿದ್ದರು.ವಯೋಧರ್ಮ ಅನಾರೋಗ್ಯ ನಿಮಿತ್ತ ಮುಂದಿನ ಮಠದ ಏಳಿಗೆಗಾಗಿ ಶ್ರೀ ಮಠಕ್ಕಾಗಿ ಉತ್ತರಾಧಿಕಾರಿಯನ್ನು ನಂಜನಗೂಡು ತಾಲ್ಲೂಕು ನವಿಲೂರು ಗ್ರಾಮದ ಹರೀಶ್ ಎಂಬ ವಟುವನ್ನು ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲು ಶ್ರೀ ತೋಂಟದಾರ್ಯ ಸ್ವಾಮಿಗಳನ್ನು ಶ್ರೀಮಠದ ಪೀಠಾಧಿಕಾರಿಗಳಾಗಿ ಹರಗುರು ಹಾಗೂ ಭಕ್ತರ ಸಮೂಹದಲ್ಲಿ ದಿನಾಂಕ 7-3-2014ರಲ್ಲಿ ಶುಕ್ರವಾರದಂದು ಶ್ರೀ ತೋಂಟದಾರ್ಯ ಸ್ವಾಮಿಗಳೆಂಬ ನಾಮಾಂಕಿತ ದೊಡನೆ ಶ್ರೀಮಠದ ಪರ ಪಟ್ಟಾಭಿಷೇಕ ಹಾಗೂ ಷಡಸ್ಥಲ ಬ್ರಹ್ಮೋಪದೇಶವನ್ನು ಹಂಚೀಪುರ ಗ್ರಾಮದ ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠದ ಶ್ರೀಗಳ ಷ.ಬ್ರ.ಸ್ವ ಶ್ರೀ ಚನ್ನಬಸವ ಸ್ವಾಮಿಗಳವರ ಕರಕಮಲ ಸಂಜಾತ ರಾಗಿ ಶ್ರೀ ಮಠಕ್ಕೆ ಹರಗುರು ಚರ ಮೂರ್ತಿಗಳ ನೇತೃತ್ವದಲ್ಲಿ ಭಕ್ತ ಸಮೂಹದ ಸಮಕ್ಷಮ ಶ್ರೀ ಮಠದ ಉತ್ತರಾಧಿಕಾರವನ್ನು ವಹಿಸಿದ್ದು ಷ.ಬ್ರ.ಸ್ವ ಶ್ರೀ ತೋಂಟದಾರ್ಯ ಸ್ವಾಮಿಗಳು ಈ ಮಠಕ್ಕೆ ಪಟ್ಟಾಧಿಕಾರಿಗಳಾದ ನಂತರ ಮಠದ ಅಭಿವೃದ್ಧಿಯ ಕಡೆ ಶ್ರೀಮಠದ ನವೀಕರಣದ ಪ್ರಯುಕ್ತ 75 ಚದುರ ಅಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಒಂದನೇ ಮಹಡಿ 160 ಅಡಿ ಕಾಮಗಾರಿಯಲ್ಲಿದೆ. 12 ಎಕರೆ ಮಳೆ ಆಶ್ರಯದಲ್ಲಿದ್ದ ಜಮೀನನ್ನು ನೀರಾವರಿ ಭೂಮಿಯನ್ನಾಗಿ ಬದಲಾವಣೆ ಮಾಡಿದ್ದಾರೆ. ಒಂದುವರೆ ಎಕರೆ ಜಮೀನಿನಲ್ಲಿ ಬೋರ್ವೆಲ್ ಬಾವಿ ತೆಗೆಸಿ 1.8 ಕಿಲೋಮೀಟರ್ ದೂರದಲ್ಲಿರುವ 10 ಎಕರೆ ಜಮೀನಿಗೆ ಪೈಪ್ ಲೈನ್ ಮೂಲಕ ನೀರನ್ನು ಸರಬರಾಜು ಮಾಡಿ 400 ತೆಂಗಿನ ಗಿಡಗಳನ್ನು, 200 ತೇಗದ ಗಿಡಗಳನ್ನು, 100 ಸಾಗುವಾನಿ ಗಿಡಗಳನ್ನು ಹಾಕಿದ್ದಾರೆ. ಗ್ರಾಮಸ್ಥರ ನೆರವಿನಿಂದ 10 ಎಕರೆ 22 ಗುಂಟೆ ಜಮೀನಿನ ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸಿದ್ದಾರೆ.
ಪರಂಪರೆ:
- ಷ.ಬ್ರ.ಸ್ವ ಶ್ರೀ ಚಂದ್ರಶೇಖರ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ವೃಷಭೇಂದ್ರ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ರಾಜಶೇಖರ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಚನ್ನಬಸವ ಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ತೋಂಟದಾರ್ಯ ಸ್ವಾಮಿಗಳು
ಧಾರ್ಮಿಕ ಕಾರ್ಯಗಳು:
- ಮಾರ್ಚ್ ತಿಂಗಳಲ್ಲಿ ಆರಾಧನಾ ಮಹೋತ್ಸವ