ವಿಳಾಸ:
ಷ.ಬ್ರ.ಸ್ವ. ಶ್ರೀ ಶಿವಪ್ರಭುಸ್ವಾಮಿಗಳು, ಶ್ರೀ ಪಟ್ಟದ ಮಠ, ಕುಂತೂರು, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ.ಮೊ. +919481532019
ಮಠದ ವಿವರ:
ಶ್ರೀ ಪಟ್ಟದ ಮಠವು ಕುಂತೂರು ಗ್ರಾಮದಲ್ಲಿ ನೆಲೆಸಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಪ್ರಸಿದ್ಧಿ ಪಡೆದಿದೆ. ಕುಂತೂರು ಬೆಟ್ಟ (ಶ್ರೀ ಪ್ರಭುದೇವರ ಬೆಟ್ಟ) ಈಶಾನ್ಯ ದಿಕ್ಕಿನಲ್ಲಿ ಸ್ಥಿತವಿದ್ದು, ಶ್ರೀ ಮಲೆಮಹದೇಶ್ವರರು ಇಲ್ಲಿ ವಾಸಿಸಿದ್ದರೆಂದು ನಂಬಲಾಗುತ್ತದೆ. ವಿಜಯನಗರ ಕಾಲದಲ್ಲಿ ಉಮ್ಮತ್ತೂರಿನ ರಾಜ ನಂಜರಾಜ ಒಡೆಯರು ಇಲ್ಲಿ ನಡೆದ ಪವಾಡದಿಂದ ಪ್ರಭಾವಿತನಾಗಿ ಮಠವನ್ನು ಸ್ಥಾಪಿಸಿದರು. ಇಂದು ಈ ಮಠವು ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಸಾಲೂರು ನಂಜದೇವಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಪಟ್ಟದ ಕೆಂಪನಂಜಸ್ವಾಮಿ
- ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಕೆಂಪನಂಜಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಮುದ್ದುವೀರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಗುಂಡಪ್ಪಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಾಂತಲಿಂಗಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವಪ್ಪಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವಪ್ರಭುಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಪ್ರತಿವರ್ಷ ದೀಪಾವಳಿಯ ಹಿಂದಿನ ದಿನ ನಡೆಯುವ ಪ್ರಭುದೇವರ ಹಾಲ್ಹರವಿ ಉತ್ಸವ, ಶಿವರಾತ್ರಿ ಪೂಜೆ, ಕಾರ್ತಿಕ ಮಾಸದ ಪೂಜೆ, ಲಿಂಗ ದೀಕ್ಷೆ, ಧನುರ್ಮಾಸದ ಪೂಜೆ, ಬಸವ ಜಯಂತಿ, ಮಹದೇಶ್ವರ ಜಯಂತಿ, ವಚನ ಮಾಂಗಲ್ಯ ಮುಂತಾದ ಧಾರ್ಮಿಕ ಆಚರಣೆಗಳು ಶ್ರೀಗಳ ನೇತೃತ್ವದಲ್ಲಿ ವಿಜೃಂಭಣೆಯೊಂದಿಗೆ ನಡೆಯುತ್ತವೆ. ಪ್ರಭುದೇವರಿಗೆ ಹಾಲ್ಹರವಿ ಎರೆದು, ತೀರ್ಥವನ್ನು ಮಹದೇಶ್ವರ ಬೆಟ್ಟಕ್ಕೆ ಕಳುಹಿಸುವ ಸಂಪ್ರದಾಯ ಇಂದಿಗೂ ಉಳಿದಿದೆ. ಭಕ್ತರಿಗೆ ಪ್ರತಿ ಸೋಮವಾರ, ಶುಕ್ರವಾರ, ಅಮಾವಾಸ್ಯೆ ದೀಕ್ಷೆ ದೊರೆಯುತ್ತದೆ. ಮಠದಲ್ಲಿ ಉಚಿತ ದಾಸೋಹ ವ್ಯವಸ್ಥೆ ಇರುತ್ತದೆ.
ಸಾಮಾಜಿಕ ಕಾರ್ಯಗಳು:
ಶ್ರೀಮಠವು ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲೆ, ಹಾಸ್ಟೆಲ್, ಉಚಿತ ವಿವಾಹ ಹಾಗೂ ಗೃಹಪ್ರವೇಶ ಕಾರ್ಯಗಳನ್ನು ನೆರವೇರಿಸುತ್ತಿದೆ. ಮಠಾಧ್ಯಕ್ಷರಾದ ಶ್ರೀ ಶಿವಪ್ರಭುಸ್ವಾಮಿಗಳು ಅನೇಕ ಭಾಗಗಳಲ್ಲಿ ಉಪನ್ಯಾಸಗಳನ್ನು ನೀಡಿ ಮಠದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕಲ್ಯಾಣ ಮಂಟಪ, ಮಹದೇಶ್ವರರ ಪ್ರಾರ್ಥನಾ ಮಂದಿರ ನಿರ್ಮಾಣದ ಯೋಜನೆ ಜಾರಿಯಲ್ಲಿದೆ. ಅಲ್ಲಮಪ್ರಭು ಉತ್ಸವವನ್ನು ದೀಪಾವಳಿ ಸಂದರ್ಭಗಳಲ್ಲಿ ಆಚರಿಸುತ್ತಾರೆ. ಸಮಾಜಮುಖಿ ಧ್ಯೇಯವನ್ನು ಧಾರ್ಮಿಕ ಆಚರಣೆಗಳೊಂದಿಗೆ ಮುನ್ನಡೆಸುತ್ತಿದ್ದಾರೆ.