ವಿಳಾಸ:
ನಿ.ಪ್ರ.ಸ್ವ. ಶ್ರೀ ಮಹಾದೇವಸ್ವಾಮಿಗಳವರು, ಶ್ರೀ ಪಡುವಲು ಮಠ, ಬಿಡಗಲು, ಸರಗೂರು ತಾಲ್ಲೂಕು, ಮೈಸೂರು ಜಿಲ್ಲೆ. ಮೊ. +919481528665
ಮಠದ ವಿವರ:
ಪಡುವಲು ಶ್ರೀ ವಿರಕ್ತಮಠವು ಸರಗೂರು ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಬಿಡಗಲು ಗ್ರಾಮದ ಹೊರವಲಯದಲ್ಲಿ ಪಶ್ಚಿಮ ವಾಹಿನಿಯಾದ ಕಪಿಲಾ ನದಿ ದಡದಲ್ಲಿದೆ. ಸುಮಾರು 350 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀಮಠದಲ್ಲಿ ಇಲ್ಲಿಯವರೆಗೆ ಪಂಚಪೀಠಾಧ್ಯಕ್ಷರು ತಮ್ಮ ತಪ:ಶಕ್ತಿಯಿಂದ ಶ್ರೀಮಠದ ಪರಂಪರೆಯನ್ನು ಬೆಳೆಸಿದ್ದಾರೆ ಶ್ರೀಮಠವನ್ನು ಶ್ರೀ ವೀರ ಸ್ವಾಮಿಗಳು ಸ್ಥಾಪಿಸಿದರು ನಂತರ ಇವರು ಕಾಳಿಂಗ ಸರ್ಪವನ್ನು ಜಯಿಸಿದ ಪವಾಡದಿಂದ ಶ್ರೀ ಕಾಳಒಡೆಯಗುರುಗಳು ಎಂದು ಖ್ಯಾತಿಯಾದರು. ಪ್ರಸ್ತುತ ಇರುವ ಶ್ರೀ ಮಹಾದೇವಸ್ವಾಮಿಗಳಿಗೆ 02/ 11/ 1981 ರಲ್ಲಿ ಪಟಾಧಿಕಾರ ಆಯಿತು 28.11.2007ರಲ್ಲಿ ಹಿಂದಿನ ಎಲ್ಲಾ ಗುರುಗಳ ಗದ್ದುಗೆಯನ್ನು ಉದ್ಘಾಟಿಸಲಾಯಿತು.ಇದೇ ದಿನದಂದು ಶ್ರೀಕ್ಷೇತ್ರದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯ ವನ್ನು ನಿರ್ಮಾಣ ಮಾಡಲಾಯಿತು
ಪರಂಪರೆ:
- ನಿ.ಪ್ರ.ಸ್ವ. ಶ್ರೀ ವೀರ ಸ್ವಾಮಿಗಳು (ಸ್ಥಾಪಕರು)
- ನಿ.ಪ್ರ.ಸ್ವ. ಶ್ರೀ ಕಾಳಒಡೆಯಗುರುಗಳು (ಕಾಳಿಂಗ ಸರ್ಪ ಜಯಿಸಿದ ಪವಾಡದಿಂದ ಖ್ಯಾತಿ)
- ನಿ.ಪ್ರ.ಸ್ವ. ಶ್ರೀ ಶಿವನಂಜೇ ಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಗುರುಪಾದ ಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಪುಟ್ಟಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಶಿವಪ್ಪ ಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಮಹಾದೇವಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಕಳೆದ 25 ವರ್ಷಗಳಿಂದ ಪ್ರತಿ ತಿಂಗಳು ಹುಣ್ಣಿಮೆ ದಿನಗಳಲ್ಲಿ ಶಿವಾನುಭವ ಸಮ್ಮೇಳನ, ವಿಶೇಷ ಪೂಜೆಗಳು, ಮತ್ತು ಭಕ್ತರಿಗೆ ಪ್ರಸಾದ ವ್ಯವಸ್ಥೆ ನಡೆಯುತ್ತಿದೆ. ಕಾರ್ತಿಕ ಮಾಸ ಮತ್ತು ಧನುರ್ಮಾಸಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
ಸಾಮಾಜಿಕ ಕಾರ್ಯಗಳು:
ಕಳೆದ 10 ವರ್ಷಗಳಿಂದ ಶ್ರೀಮಠವು ವೀರಶೈವ ಲಿಂಗಾಯತ ವಧು-ವರರ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿದೆ. 2019–20ನೇ ಸಾಲಿನಲ್ಲಿ ಎಸ್.ಕೆ.ಜಿ. ಗುರುಕುಲ ಶಾಲೆಯನ್ನು ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಲಾಗಿದೆ.
