ಹೊನ್ನಲಗೆರೆ ಮಠ

ವಿಳಾಸ:

ಷ.ಬ್ರ.ಶ್ರೀ ಶಿವಮೂರ್ತಿ ಶಿವಾಚಾರ್ಯಸ್ವಾಮಿಗಳು, ಹೊನ್ನಲಗೆರೆ ಮಠ, ಗೌರಿಘಟ್ಟದ ಬೀದಿ, ನಂಜನಗೂಡು, ಮೈಸೂರು ಜಿಲ್ಲೆ.
ಮೊ: +917022364395

ಮಠದ ವಿವರ:

ಶ್ರೀ ಹೊನ್ನಲಗೆರೆ ಮಠ, ನಂಜನಗೂಡು

ಭಾರತ ಖಂಡದ ಪುಣ್ಯ ಭೂಮಿಯಲ್ಲಿ ಶರಣ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಾ ಕಪಿಲೆಯ ಬಲದಂಡೆಯ ಮೇಲೆ ಗರಳ ಪುರಿಯ ಹಕೀಂ ನಂಜುಂಡನ ಸನ್ನಿಧಾನದಲ್ಲಿ 17ನೇ ಶತಮಾನದಲ್ಲಿ ಲಿಂಗೈಕ್ಯ ಷ.ಬ್ರ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತವಾದ ಶ್ರೀಮದ್ ರಂಭಾಪುರಿ ಶಾಖಾ ಮಠವಾದ ಶ್ರೀ ಹೊನ್ನಲಗೆರೆ ಮಠವು ಧಾರ್ಮಿಕ ಹಾಗೂ ಸಾಮಾಜಿಕ ಕೈಂಕಾರ್ಯಗಳಿಂದ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ.

ಶ್ರೀ ಮಠದ ಪರಂಪರೆಯಲ್ಲಿ ನಾಲ್ಕು ಜನ ಪೀಠಾಧಿಪತಿಗಳಾಗಿದು ನಾಲ್ಕನೇ ಪೀಠಾಧಿಪತಿಗಳಾದ ಷ.ಬ್ರ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ದಿನಾಂಕ 5.01.2001ರಲ್ಲಿ ಲಿಂಗೈಕ್ಯರಾದರು ಇದರ ತರುವಾಯ ಶ್ರೀ ಮಠಕ್ಕೆ ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಮಠದ ಉತ್ತರಾಧಿಕಾರಿಯಾಗಿ ಒಂಭತ್ತು ತಿಂಗಳ ಮಗುವಾಗಿದ್ದ ಶ್ರೀ ಶಿವಮೂರ್ತಿಯವರನ್ನು ಘೋಷಣೆ ಮಾಡಲಾಯಿತು.

ಕಾಲ ನಂತರ ಸದರಿ ವಟುವು ಶ್ರೀ ಸುತ್ತೂರು ಮಠದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಾ ದಿನಾಂಕ 17.05.2019 ರಂದು ಪಟ್ಟಾಭಿಷೇಕರಾಗಿ ಷ.ಬ್ರ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೆಂದು ನಾಮಂಕಿತರಾಗಿ ಐದನೇ ಪೀಠಾಧಿಪತಿಯಾಗಿ ಅಧಿಕಾರವನ್ನು ವಹಿಸಿಕೊಂಡು ಪ್ರಸ್ತುತ ಧಾರ್ಮಿಕ ಆಚರಣೆ, ಧರ್ಮಪ್ರಚಾರ, ಸಾಮಾಜಿಕ ಸೇವಾ ಕೈಂಕಾರಿಗಳ ಮೂಲಕ ಜನಮಾನಸದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ಪರಂಪರೆ:

  1. ಷ.ಬ್ರ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
  2. ಷ.ಬ್ರ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು
  3. ಷ.ಬ್ರ.ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು
  4. ಷ.ಬ್ರ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
  5. ಷ.ಬ್ರ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ( ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

  • ಪ್ರತಿ ವರ್ಷ ಧನುರ್ಮಾಸದಲ್ಲಿ ಶ್ರೀಮಠದ ಹಿರಿಯ ಗುರುಗಳ ಪುಣ್ಯಾರಾಧನೆ ನೆರವೇರಿಸಲಾಗುವುದು
  • ಹಿಂದೂ ಪರಂಪರೆಯ ಭಾಗವಾದ ಗೌರಿ ಗಣೇಶ ಹಬ್ಬವನ್ನು ಶ್ರೀಮಠದಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.

ಸಾಮಾಜಿಕ ಕಾರ್ಯಗಳು:

ಪ್ರಸ್ತುತ ಶ್ರೀ ಮಠದ ಶ್ರೀಗಳು ಸಂಸ್ಕೃತ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಸಂಸ್ಕೃತ ಪಾಠದ ಜೊತೆಗೆ ವೇದಾಭ್ಯಾಸಗಳ ಬೋಧನೆಯನ್ನು ಮಾಡುತ್ತಿದ್ದಾರೆ.