ಶ್ರೀ ಮುರಘೀಸ್ವಾಮಿ ವಿರಕ್ತ ಮಠ

ವಿಳಾಸ:

ನಿ.ಪ್ರ.ಸ್ವ. ಶ್ರೀ ಇಮ್ಮಡಿ ಮುರುಫೀಸ್ವಾಮಿಗಳು, ಶ್ರೀ ಮುರಫೀಸ್ವಾಮಿ ವಿರಕ್ತಮಠ, ಶಿರಮಳ್ಳಿ, ಹುಲ್ಲಹಳ್ಳಿ ಹೋಬಳಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
ಮೊ: +918722274755

ಮಠದ ವಿವರ:

ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು, ಹುಲ್ಲಹಳ್ಳಿ ಹೋಬಳಿ, ಶಿರಮಳ್ಳಿ ಗ್ರಾಮದ ದಕ್ಷಿಣ ದಿಕ್ಕಿನಲ್ಲಿ ಹರಿಯುವ ಕಬಿನಿ ನಾಲೆಯ ಪಕ್ಕದಲ್ಲಿ ನೆಲೆಗೊಂಡಿರುವ ಶ್ರೀ ಮುರುಗೀ ಸ್ವಾಮಿ ವಿರಕ್ತ ಮಠಕ್ಕೆ ಸುಮಾರು 450 ವರ್ಷಗಳ ಇತಿಹಾಸವಿದೆ. ಶ್ರೀಮಠವು ದಾಸೋಹ ಪ್ರವಚನ ಆರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀ ಮಠದ ಮೂಲಗುರುಗಳಾಗಿದ್ದ ಶ್ರೀ ಮುರುಗೀಸ್ವಾಮಿಗಳು ತಮ್ಮ ತಪಃಶಕ್ತಿ ಆಧ್ಯಾತ್ಮಿಕ ಚಿಂತನೆ ಮತ್ತು ಶರಣ ತತ್ವಗಳ ಪಾಲನೆಯಿಂದ ಈ ಭಾಗದ ಭಕ್ತರ ಆರಾಧ್ಯದೈವರಾಗಿದ್ದರು ಇಂದಿಗೂ ಅವರ ಹೆಸರಿನಿಂದಲೇ ಶ್ರೀಮಠವು ಕರೆಯಲ್ಪಡುತ್ತಿರುವುದೇ ಅವರ ದೈವತ್ವಕ್ಕೆ ಸಾಕ್ಷಿಯಾಗಿದೆ. ವಿಶಾಲವಾದ ತೋಟದ ಮಧ್ಯ ನೆಲೆಗೊಂಡಿರುವ ಶ್ರೀಮಠದ ಆವರಣದಲ್ಲಿ ಶ್ರೀ ಮುರುಗೀಸ್ವಾಮಿಗಳ ಗದ್ದುಗೆ, ಮಠದ ಕಟ್ಟಡವಿದೆ. ಪ್ರತಿನಿತ್ಯ ಭಕ್ತರು ಶ್ರೀಮಠಕ್ಕೆ ಬಂದು ಗುದ್ದುಗೆಯ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಿದ್ದಾರೆ. ನಮ್ಮ ಹಿರಿಯ ಗುರುಗಳಾಗಿದ್ದ ಶ್ರೀ ನಿ.ಪ್ರ.ಸ್ವ. ಶ್ರೀ ಬಸವರಾಜಸ್ವಾಮಿಗಳು ಶ್ರೀಮಠದ ಏಳಿಗೆಗಾಗಿ ಮತ್ತು ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾ ಅಕ್ಕನ ಬಳಗ ಮತ್ತು ಬಸವ ಬಳಗಗಳನ್ನು ಕಟ್ಟಿಕೊಂಡು ಬಸವಾದಿ ಶರಣರ ತತ್ವಗಳನ್ನು ಪ್ರಚಾರ ಮಾಡುತ್ತಾ ಹಗಲಿರುಳು ಗಂಧದ ಕೊರಡಿನಂತೆ ತಮ್ಮನ್ನು ತಾವೇ ಸವೆಸಿಕೊಂಡು 2008 ರಲ್ಲಿ ಲಿಂಗೈಕ್ಯರಾದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀಮಠವು ನಡೆಯುತ್ತಾ ಎಲ್ಲಾ ಕೈಂಕರ್ಯಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಮತ್ತು ಹಂಬಲ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಲಿಂಗೈಕ್ಯ ಶ್ರೀಗಳ ಗದ್ದುಗೆ ನಿರ್ಮಾಣ, ಮಠದ ಪ್ರವೇಶ ದ್ವಾರದ ಸ್ವಾಗತ ಕಮಾನು ನಿರ್ಮಾಣ, ಮಠದ ಜೀರ್ಣೋದ್ಧಾರ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸಂಕಲ್ಪಿಸಿ ದಿನಾಂಕ : 02-04-2022ರ ಯುಗಾದಿ ಶುಭದಿನದಂದು ಭೂಮಿಪೂಜೆಯನ್ನು ನೆರವೇರಿಸಲಾಗಿದೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ಬಸವರಾಜಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ ಇಮ್ಮಡಿ ಮುರುಫೀಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

  • ದಾಸೋಹ
  • ಪ್ರವಚನ
  • ಆರಾಧನೆ
  • ಬಸವಾದಿ ಶರಣರ ತತ್ವಗಳನ್ನು ಪ್ರಚಾರ ಮಾಡುವುದು

ಸಾಮಾಜಿಕ ಕಾರ್ಯಗಳು:

  • ಅಕ್ಕನ ಬಳಗ
  • ಬಸವ ಬಳಗ