ಶ್ರೀ ಜಂಗಮ ಮಠ, ಕರ್ಪೂರವಳ್ಳಿ

ವಿಳಾಸ:

ಷ.ಬ.ಸ್ವ ಶ್ರೀ ಚ೦ದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು, ಶ್ರೀ ಜಂಗಮ ಮಠ, ಕರ್ಪೂರವಳ್ಳಿ, ಸಾಲಿಗ್ರಾಮ ಅಂಚೆ, ಕೆ.ಆರ್‌. ನಗರ ತಾಲ್ಲೂಕು, ಮೈಸೂರು ಜಿಲ್ಲೆ.
ಮೊ. 9448311777

ಮಠದ ವಿವರ:

ಕರ್ಪೂರವಳ್ಳಿ, ಕೆ.ಆರ್.ನಗರ ತಾಲ್ಲೂಕಿನ ಒಂದು ಪುಟ್ಟ ಹಳ್ಳಿ, ತಾಲ್ಲೂಕು ಕೇಂದ್ರದಿಂದ ಪಶ್ಚಿಮಕ್ಕೆ 25 ಕಿಮೀ ದೂರದಲ್ಲಿದೆ. ಈ ಹಳ್ಳಿಯಲ್ಲಿ ಶ್ರೀ ಜಂಗಮ ಮಠವು ಪುರಾತನ ಕಾಲದಿಂದ ಅಸ್ತಿತ್ವದಲ್ಲಿದ್ದು, ಅದರ ಸ್ಥಾಪನೆಯ ನಿಖರ ಸಮಯ ತಿಳಿದಿಲ್ಲದಿದ್ದರೂ ಸುಮಾರು 400 ವರ್ಷಗಳ ಇತಿಹಾಸವಿದೆ. ಈ ಮಠವು ಗ್ರಾಮದ ಪಶ್ಚಿಮ ಹೊರಭಾಗದಲ್ಲಿ ಸ್ಥಾಪಿತವಾಗಿದೆ.

ಪರಂಪರೆ:

  1. ಷ.ಬ.ಸ್ವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳವರು
  2. ಷ.ಬ.ಸ್ವ ಶ್ರೀ ಚ೦ದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದ ಒಳಭಾಗದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳ ಗದ್ದುಗೆಗೆ ಪ್ರತಿದಿನವೂ ಪೂಜಾಕಾರ್ಯ ನಡೆಯುತ್ತದೆ. ಮಠದ ಹೊರಭಾಗದಲ್ಲಿ ಪುರಾತನ ವೀರಭದ್ರಸ್ವಾಮಿ ಮತ್ತು ಶ್ರೀ ಚೌಡೇಶ್ವರಿ ದೇವಾಲಯಗಳಿಗೆ ನೂತನ ಕಟ್ಟಡಗಳು ನಿರ್ಮಾಣವಾಗಿವೆ. 1991ರಲ್ಲಿ ರೇಣುಕಾ ಮಂದಿರವನ್ನೂ ಸ್ಥಾಪಿಸಲಾಗಿದೆ. ಪ್ರತಿ ಪೌರ್ಣಿಮೆ, ಅಮಾವಾಸ್ಯೆ, ಶ್ರಾವಣ ಹಾಗೂ ಕಾರ್ತಿಕ ಮಾಸಗಳಲ್ಲಿ ವಿಶೇಷ ಧಾರ್ಮಿಕ ಪೂಜಾಕಾರ್ಯಗಳು ಜರುಗುತ್ತವೆ.

ಸಾಮಾಜಿಕ ಕಾರ್ಯಗಳು:

ಶಿಕ್ಷಣಕ್ಕೆ ಮಹತ್ವ ನೀಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು, ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಅಭಾವವನ್ನು ಮನಗಂಡು ಮಠದ ಆವರಣದಲ್ಲಿ ಶಾಲೆಯನ್ನು ಪ್ರಾರಂಭಿಸಿ, ಗ್ರಾಮೀಣ ಮಕ್ಕಳಿಗೆ ವಿದ್ಯೆಯ ಬೆಳಕು ನೀಡಿದ್ದಾರೆ.