ಶ್ರೀ ಪಟ್ಟದ ಮಠ, ನವಿಲೂರು

ವಿಳಾಸ:

ಷ.ಬ್ರ.ಸ್ವ.ಶ್ರೀ ಚನ್ನಬಸವಸ್ವಾಮಿಗಳು, ಶ್ರೀ ಪಟ್ಟದ ಮಠ, ನವಿಲೂರು ಅಂಚೆ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
ಮೊ: +91994594612

ಮಠದ ವಿವರ:

ನವಿಲೂರು ಗ್ರಾಮವು ನಂಜನಗೂಡು ತಾಲ್ಲೂಕು ಕೇಂದ್ರದಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ. ಸುಮಾರು 48 ವರ್ಷಗಳ ಹಿಂದೆ ಶ್ರೀ ಚನ್ನಬಸವೇಶ್ವರ ಸ್ವಾಮಿಗಳು ಚುಂಚನಹಳ್ಳಿಯಿಂದ ನವಿಲೂರಿಗೆ ಬಂದು ಊರಿನ ಮಧ್ಯದಲ್ಲಿ ಮಠವನ್ನು ಸ್ಥಾಪಿಸಿದರು. ನಿತ್ಯ ಕಂತೆ ಭಿಕ್ಷೆಯಿಂದ ದಾಸೋಹವನ್ನು ನಡೆಸಿದ ನಂತರ ೧೯೬೦ರ ಆಗಸ್ಟ್ 11ರಂದು ಲಿಂಗೈಕ್ಕರಾದರು. ಇವರ ನಂತರ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಅಧಿಕಾರ ಸ್ವೀಕರಿಸಿ ಮಠವನ್ನು ನವೀಕರಿಸಿದರು ಹಾಗೂ ಹೊಸ ಕಟ್ಟಡ, ಬಾವಿ ಮತ್ತು ಕಲ್ಲಿನ ಮಂಟಪವನ್ನು ನಿರ್ಮಿಸಿದರು.

ಪರಂಪರೆ:

  1. ಷ.ಬ್ರ.ಸ್ವ.ಶ್ರೀ ಚನ್ನಬಸವೇಶ್ವರ ಸ್ವಾಮಿಗಳು
  2. ಷ.ಬ್ರ.ಸ್ವ.ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು
  3. ಷ.ಬ್ರ.ಸ್ವ.ಶ್ರೀ ಚನ್ನಬಸವಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದಲ್ಲಿ ನಿತ್ಯ ಪೂಜೆ ಹಾಗೂ ಗುರುಗಳ ಗದ್ದುಗೆ ಆರಾಧನೆ ನಡೆಯುತ್ತದೆ. ಪ್ರತಿ ಸೋಮವಾರ ಭಜನೆ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಧಾರ್ಮಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನೂ ನಿರಂತರವಾಗಿ ನಡೆಸಲಾಗುತ್ತಿದೆ.

ಸಾಮಾಜಿಕ ಕಾರ್ಯಗಳು:

ಸುಗ್ಗಿಯ ಕಾಲದಲ್ಲಿ ಸ್ವಾಮಿಗಳು ಭಿಕ್ಷೆ ಸಂಗ್ರಹಿಸಿ ದಾಸೋಹಕ್ಕಾಗಿ ಧಾನ್ಯವನ್ನು ಸಂಗ್ರಹಿಸುತ್ತಾರೆ. ತಮ್ಮ ಪರಿಶ್ರಮದಿಂದ ಬಡವರಿಗೆ ಆಹಾರ, ಆಶ್ರಯ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ.