ವಿಳಾಸ:
ಷ.ಬ್ರ.ಸ್ವ. ಶ್ರೀ ಪಟ್ಟದ ನಾಗರಾಜಸ್ವಾಮಿಗಳವರು, ಶರಣಸಂಗಮ ಮಠ, ದೇವಿರಮ್ಮನಹಳ್ಳಿ ಬಡಾವಣೆ, ವಿನಾಯಕ ನಗರ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ- 571118 ಮೊ: +917259377444, +919945328314
ಮಠದ ವಿವರ:
ನಂಜನಗೂಡು ಪಟ್ಟಣದ ದಕ್ಷಿಣಕ್ಕೆ ಇರುವ ದೇವಿರಮ್ಮನಹಳ್ಳಿ ಬಡಾವಣೆ ವಿನಾಯಕ ನಗರದಲ್ಲಿ ದಿನಾಂಕ 01.04.2001ರ ಭಾನುವಾರದಂದು ಸ್ಥಾಪನೆಯಾದ ಶ್ರೀ ಮಠವೇ ಶ್ರೀ ಗುರುಮಲ್ಲೇಶ್ವರ ಶರಣ ಸಂಗಮ ಮಠ. ಶ್ರೀ ಮಠದ ಸ್ಥಾಪಕರು ಶ್ರೀ ನಾಗರಾಜಸ್ವಾಮಿಗಳು. ಇವರು 1958ನೇ ಇಸವಿಯಲ್ಲಿ ನಂಜನಗೂಡು ತಾಲ್ಲೂಕು ಹೊಸಕೋಟೆ ಗ್ರಾಮದ ಶರಣ ದಂಪತಿಗಳಾದ ಶ್ರೀಮತಿ ಮಹದೇವಮ್ಮ ಮತ್ತು ಶ್ರೀ ಮಹಾದೇವಪ್ಪ ಸ್ವಾಮಿಯವರ ಪುತ್ರರಾಗಿ ಜನಿಸಿದರು. 1970ರಲ್ಲಿ ದೇವನೂರು ಮಠದಲ್ಲಿ ಶಿವದೀಕ್ಷಾ ಸಂಸ್ಕಾರವನ್ನು ಪಡೆದವರು. ಇವರು ಅನೇಕ ಮಠಗಳಲ್ಲಿ ಕಂತೆ ಭಿಕ್ಷೆ ಕಾಯಕ ಮಾಡಿ ನಂತರ ನವಿಲೂರು ಮಠದಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂಜನಗೂಡಿಗೆ ಬಂದು ಶ್ರೀ ಗುರುಮಲ್ಲೇಶ್ವರ ಶರಣ ಸಂಗಮ ಮಠ ಸ್ಥಾಪಿಸಿದರು. ಶ್ರೀಮಠದ ಉದ್ಘಾಟನೆಯು ಶ್ರೀಮತ್ಸುತ್ತೂರು ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳವರು, ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಮಹಾಸ್ವಾಮಿಗಳು, ದೇವನೂರು ಮಠದ ಪೂಜ್ಯ ಶ್ರೀ ಮಹಾಂತಸ್ವಾಮಿಗಳು ಹಾಗೂ ಅನೇಕ ಮಠಾಧೀಶರ ಸಮ್ಮುಖದಲ್ಲಿ ನೆರವೇರಿಸಲಾಯಿತು. ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರಿಂದ 2004ನೇ ಇಸವಿಯಲ್ಲಿ ಪಟ್ಟಾಧಿಕಾರವನ್ನು ಪಡೆಯಲಾಯಿತು. ಶ್ರೀ ಮಠವು ಇಂದು ಆಸ್ತಿಕರ ಪ್ರವಾಸಿ ಸ್ಥಳವೂ ಆಗಿದೆ. ದಕ್ಷಿಣ ಕಾಶಿಯಂದೇ ಪ್ರಸಿದ್ಧವಾಗಿರುವ ಶ್ರೀ ಶ್ರೀಕಂಠೇಶ್ವರ ದರ್ಶನಕ್ಕೆ ಬರುವ ಭಕ್ತಾದಿಗಳು ಶ್ರೀಮಠಕ್ಕೆ ಬಂದು 108 ಲಿಂಗಗಳ ದರ್ಶನವನ್ನು ಪಡೆಯುತ್ತಿದ್ದಾರೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಪಟ್ಟದ ನಾಗರಾಜಸ್ವಾಮಿಗಳವರು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಶ್ರೀಮಠದಲ್ಲಿ ಹುಣ್ಣಿಮೆ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದಿನಾಂಕ 28.01.2010 ರಂದು ಶ್ರೀಮಠದಲ್ಲಿ 108 ಶಿವಲಿಂಗಗಳನ್ನು ಸಂಸ್ಥಾಪಿಸಿ ಕಾರ್ತಿಕ ಮಾಸ ಹಾಗೂ ಮಹಾಶಿವರಾತ್ರಿ ದಿನಗಳಂದು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಜ್ರಂಭಣೆಯಿಂದ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಸಾಮಾಜಿಕ ಕಾರ್ಯಗಳು:
ಶ್ರೀಮಠದಲ್ಲೇ ಸ್ಥಳಾವಕಾಶ ನೀಡಿ ಮಹಿಳೆಯರಿಗಾಗಿ ಅಕ್ಕನ ಬಳಗವನ್ನು ಸ್ಥಾಪಿಸಲಾಗಿದೆ.