ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠ

ವಿಳಾಸ:

ಷ.ಬ್ರ.ಸ್ವ. ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳವರು, ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಶ್ರೀ ಮಠ, ಮರಿಯಾಲ (ಅಂಚೆ), ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ
ಮೊ.+919901262100

ಮಠದ ವಿವರ:

ಉತ್ತರ ಕರ್ನಾಟಕದ ಕಲ್ಬುರ್ಗಿಯಿಂದ ಬಂದ ಮಹಾಶಿವ ಶರಣರು, ಕಾಯಕ ತಪಸ್ವಿಗಳು ಆದ ಶ್ರೀ ಮನ್ನಿರಂಜನ ಸದ್ಗುರು ಶ್ರೀ ಮುರುಘರಾಜೇಂದ್ರ ಸ್ವಾಮಿಗಳವರು ಮರಿಯಾಲ ಗ್ರಾಮದಲ್ಲಿ 1885 ರಲ್ಲಿ ಶ್ರೀ ಮಠವನ್ನು ಸ್ಥಾಪಿಸಿ ಗಣಿಗನೂರು, ಟಿ ನರಸೀಪುರ,ಕೊತ್ತೇಗಾಲ, ಕುರುಬೂರು, ಕುದೇರು,ಯಲಕ್ಕೂರು, ಗುರುವಿನಪುರ, ಇತ್ಯಾದಿ ಹಲವಾರು ಗ್ರಾಮಗಳಲ್ಲಿ ಸಂಚರಿಸಿ ಬಸವಾದಿ ಶರಣರ ತತ್ವಗಳನ್ನು ಬಿತ್ತಿ ಬೆಳೆದು ಭಕ್ತರನ್ನು ಉದ್ದರಿಸಿ 1916ರಲ್ಲಿ ಲಿಂಗೈಕ್ಯ ರಾದರು. ತದನಂತರ ಪೂಜ್ಯ ಶ್ರೀ ಮಹಾಂತಸ್ವಾಮಿಗಳವರು ಶ್ರೀ ಸದಾಶಿವಸ್ವಾಮಿಗಳವರು ಶ್ರೀಮಠದಲ್ಲಿ ಸೇವಾ ಕಾರ್ಯಗಳನ್ನು ಸಲ್ಲಿಸಿರುತ್ತಾರೆ. ಈ ಪರಂಪರೆಯಲ್ಲಿ ನಾಲ್ಕನೇ ಪೀಠಾಧಿಪತಿಗಳಾಗಿ ಬಂದ ಪರಮಪೂಜ್ಯ ವಿದ್ವಾನ್ ಶ್ರೀ ಇಮ್ಮಡಿ ಮಹಾಂತ ಸ್ವಾಮಿಗಳವರು ತಮ್ಮ ತ್ಯಾಗ ಹೋರಾಟ ನೇರ ನಡೆ-ನುಡಿಗಳ ಮೂಲಕ ಶ್ರೀಮಠಕ್ಕೊಂದು ಗಟ್ಟಿ ಸ್ಥಾನವನ್ನು ತಂದುಕೊಟ್ಟು ಶ್ರೀ ಮುರುಘರಾಜೇಂದ್ರ ಸ್ವಾಮಿ ವಿದ್ಯಾ ಸಂಸ್ಥೆ ಸ್ಥಾಪಿಸುವುದರ ಮೂಲಕ ಅನ್ನ ಅಕ್ಷರ ಆಶ್ರಯಗಳನ್ನಿತ್ತು ಜ್ಞಾನಾನ್ನ ದಾಸೋಹಕ್ಕೆ ಮುನ್ನುಡಿಯನ್ನು ಬರೆದು ಬಸವ ತತ್ವಗಳನ್ನು ತಮ್ಮ ಶರಣ ಜೀವನದಲ್ಲಿ ನಿಜಾಚರಣೆಗೆ ತಂದು ತಮ್ಮ ಕರಕಮಲ ಸಂಜಾತರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳವರಿಗೆ ಆಶ್ರಮಾಧಿಕಾರವನ್ನು ಕೊಟ್ಟು ಲಿಂಗೈಕ್ಯರಾದರು. ತತ್ವ ನಿಷ್ಠರಾಗಿ ತಮ್ಮ ಗುರುಗಳು ತೋರಿದ ಮಾರ್ಗದಲ್ಲಿ ನಡೆಯುತ್ತಾ ಶ್ರೀಮಠದಲ್ಲಿ ನಿತ್ಯ ದಾಸೋಹ, ನೂರಾರು ಮಕ್ಕಳಿಗೆ ಉಚಿತ ಶಿಕ್ಷಣ ವಸತಿ ಸೌಲಭ್ಯ, ಆರಾಧನಾ ಕಾರ್ಯಕ್ರಮಗಳು, ಲಿಂಗ ದೀಕ್ಷೆ ,ಸಾಮೂಹಿಕ ಲಿಂಗ ಪೂಜೆ, ಕಾರ್ತಿಕ ಮಾಸದ ಪೂಜಾನುಷ್ಠಾನ, ಅಮಾವಾಸ್ಯೆ ಪೂಜೆಗಳು ,ಪ್ರವಚನಗಳು, ಬೆಳದಿಂಗಳ ಕಾರ್ಯಕ್ರಮ, ವಚನ ಮಾಂಗಲ್ಯ ,ಬಸವ ತತ್ವದ ಪ್ರಚಾರ, ಶಿಕ್ಷಣ ಶ್ರೀಮಠದ ಜೀರ್ಣೋದ್ಧಾರ ಸಾವಯವ ಕೃಷಿ, ಆರೋಗ್ಯ ಮತ್ತು ರಕ್ತದಾನ ಶಿಬಿರಗಳು ಹೀಗೆ ಹತ್ತು ಹಲವು ಸೇವಾ ಕಾರ್ಯ ಗಳೊಂದಿಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು ಶ್ರೀಮಠವನ್ನು ಹೊಸ ರೂಪದಲ್ಲಿ ,ಹೊಸ ರೀತಿಯಲ್ಲಿ ಏಳಿಗೆಯ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.

ಪರಂಪರೆ:

    • ಷ.ಬ್ರ.ಸ್ವ. ಶ್ರೀ ಮುರುಘರಾಜೇಂದ್ರಸ್ವಾಮಿಗಳವರು
    • ಷ.ಬ್ರ.ಸ್ವ. ಶ್ರೀ ಮಹಾಂತಸ್ವಾಮಿಗಳವರು
    • ಷ.ಬ್ರ.ಸ್ವ. ಶ್ರೀ ಸದಾಶಿವಸ್ವಾಮಿಗಳವರು
    • ಷ.ಬ್ರ.ಸ್ವ. ವಿದ್ವಾನ್ ಶ್ರೀ ಇಮ್ಮಡಿ ಮಹಾಂತಸ್ವಾಮಿಗಳವರು
    • ಷ.ಬ್ರ.ಸ್ವ. ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳವರು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

  • ದೈನಂದಿನ ಪೂಜೆ ಮತ್ತು ಅನ್ನದಾನ
  • ಮಹಾ ಶಿವರಾತ್ರಿ, ಗುರು ಪೌರ್ಣಿಮಾ ಉತ್ಸವ
  • ವಚನ ಚಿಂತನ ಸಭೆಗಳು

ಸಾಮಾಜಿಕ ಕಾರ್ಯಗಳು:

  • ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ವಿದ್ಯಾಭ್ಯಾಸ
  • ರಕ್ತದಾನ ಶಿಬಿರಗಳು
  • ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳು