ವಿಳಾಸ:
ಷ.ಬ್ರ.ಸ್ವ. ಶ್ರೀ ಮಹೇಶ್ವರ ಸ್ವಾಮಿಗಳು, ಕಾರ್ಯಸ್ವಾಮಿ ಮಠ, ರಾಮಲಿಂಗೇಶ್ವರ ಕ್ಷೇತ್ರ, ಸಂಗಮ, ಹುಲ್ಲಹಳ್ಳಿ ಹೋಬಳಿ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ. ಮೊ: +919901008597
ಮಠದ ವಿವರ:
ಕಾರ್ಯಸ್ವಾಮಿಮಠ: ನಂಜನಗೂಡು ತಾಲ್ಲೂಕಿನ ಕಾರ್ಯಗ್ರಾಮದಲ್ಲಿ ಕಾಯಕಯೋಗದಿಂದ ಪ್ರಸಿದ್ಧಿ ಪಡೆದ ಶ್ರೀ ಕಾರ್ಯ ಸ್ವಾಮಿಗಳು ಸಂಗಮ ಕ್ಷೇತ್ರದಲ್ಲಿ ನೆಲೆಸಿ, ಅನೇಕ ಪವಾಡಗಳನ್ನು ಮಾಡಿ ಐಕ್ಕಗೊಂಡಿರುತ್ತಾರೆ. ನಿರ್ವಿಕಲ್ಪ ಸಮಾಧಿಯಾಗುವ ಮುನ್ನ ಶ್ರೀ ಕಾರ್ಯ ಸ್ವಾಮಿಗಳು ಮುಂದಿನ ದಿನಗಳಲ್ಲಿ ದೇಶಸಂಚಾರ ಮಾಡುತ್ತಾ ಇದೇ ಕ್ಷೇತ್ರಕ್ಕೆ ಪುನಃ ಆಗಮಿಸಿ ಇಲ್ಲಿ ಐಕ್ಯಗೊಳ್ಳುವೆ ಎಂದು ಹೇಳಿದ್ದ ಮಾತು ಇಂದಿಗೂ ಜನಪದ ಕಥೆಯಾಗಿ ಕೇಳಿಬರುತ್ತಿದೆ. ಈ ಸ್ಥಳದಲ್ಲಿ ಕಾಯಕಯೋಗಿ ಶ್ರೀ ಕಾರ್ಯಸ್ಥಾಮಿಗಳ ಗದ್ದುಗೆ ಮತ್ತು ಸಿದ್ಧಯೋಗಿ ಶ್ರೀ ಮಹಾದೇವ ತಾತನವರು ಐಕ್ಯಗೊಂಡ ಕಾರಣ ಈ ಕ್ಷೇತ್ರ ಧಾರ್ಮಿಕ ಜಾಗೃತ ಸ್ಥಳವಾಗಿ ರೂಪುಗೊಂಡಿದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಕಾರ್ಯ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಪರಶಿವಮೂರ್ತಿ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಮಹೇಶ್ವರ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಕಾಯಕಯೋಗಿ ಶ್ರೀ ಕಾರ್ಯಸ್ವಾಮಿಗಳ ಗದ್ದುಗೆ ಮತ್ತು ಸಿದ್ಧಯೋಗಿ ಶ್ರೀ ಮಹಾದೇವ ತಾತನವರ ಗದ್ದುಗೆಗೆ ನಿತ್ಯ ಪೂಜೆ ನಡೆಸಲಾಗುತ್ತಿದೆ.
ಸಾಮಾಜಿಕ ಕಾರ್ಯಗಳು:
ನೂತನ ಕಟ್ಟಡ ನಿರ್ಮಾಣ, ದಾಸೋಹ ಸೇವೆಗಳು