ಗೋಷ್ಠಿ ಬಗ್ಗೆ

ಪ್ರಾತಃ ಸ್ಮರಣೀಯರಾದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಆಶಯದಿಂದ, ಮೈಸೂರು ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿ 1979ರಲ್ಲಿ ಸ್ಥಾಪನೆಯಾಯಿತು. 1997ರ ನಂತರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಾಗಿ ಮರುನಾಮಕರಣ ನಡೆಯಿತು.

ಗೋಷ್ಠಿಯ ಉದ್ದೇಶ: ಸಾಮರಸ್ಯ, ವಿಚಾರ ವಿನಿಮಯ, ಧಾರ್ಮಿಕ ಜಾಗೃತಿ, ಮತ್ತು ನವಚೈತನ್ಯ.

ಕಾರ್ಯವ್ಯಾಪ್ತಿ: ಧರ್ಮಪ್ರಸಾರ, ಧಾರ್ಮಿಕ ಶಿಬಿರಗಳು, ಶಿವದೀಕ್ಷೆ, ಲಿಂಗದೀಕ್ಷೆ, ಸಾಮೂಹಿಕ ವಿವಾಹ, ಪ್ರತಿಭಾ ಪುರಸ್ಕಾರ, ಗ್ರಂಥಗಳ ಪ್ರಕಟಣೆ, ಶರಣ ಸಾಹಿತ್ಯದ ಅಧ್ಯಯನ, ವಿಚಾರ ಸಂಕಿರಣ, ಸ್ವಸ್ಥ ಸಮಾಜದ ನಿರ್ಮಾಣ.