ಶ್ರೀ ಕುಂದೂರು ಮಠ

ವಿಳಾಸ:

ನಿ.ಪ್ರ.ಸ್ವ ಡಾ. ಶರತ್‌ ಚಂದ್ರಸ್ವಾಮಿಗಳು, ಶ್ರೀ ಕುಂದೂರು ಮಠ, ಗುರುಕಾರ್ ದೇವಣ್ಣ ರಸ್ತೆ, ಖಿಲ್ಲೆ ಮೊಹಲ್ಲಾ, ಮೈಸೂರು – 570004
ಮೊ. +919900128882

ಮಠದ ವಿವರ:

ವಿರಕ್ತ ಸಂಪ್ರದಾಯದ ಶ್ರೀ ಕುಂದೂರು ಮಠವು ನಾಲ್ವಡಿ ಕೃಷ್ಣರಾಜ ಒಡೆಯರ (1895–1940) ಆಳ್ವಿಕೆಯ ಕಾಲಕ್ಕೂ ಮೊದಲು ಸ್ಥಾಪನೆಯಾಗಿದೆ. ಶ್ರೀ ಮಹಾಂತ ಶಿವಯೋಗಿಗಳ ಅಧೀನತೆಯಲ್ಲಿ ಮಠವು ಶಾಗೂರ ಮುಖೇನ ಉಪದೇಶ ಕಾರ್ಯಗಳಿಂದ ಪ್ರಸಿದ್ಧಿ ಹೊಂದಿತು. ಪೂಜ್ಯರು ಅರಮನೆಯ ಭಕ್ತಜನರಿಂದ ಸಹಾಯ ಪಡೆದು ಮಠದ ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಶ್ರಮವಹಿಸಿದರು. ಅರಮನೆಯ ಸಮೀಪದಲ್ಲೇ ಸ್ಥಾಪಿತವಾದ ಈ ಮಠದಲ್ಲಿ ಉಪದೇಶ ಹಾಗೂ ಅನ್ನದಾಸೋಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.

ಪರಂಪರೆ:

    • ಶ್ರೀಮ.ನಿ.ಪ್ರ. ಮಹಾಂತಸ್ವಾಮಿಗಳು
    • ಶ್ರೀಮ.ನಿ.ಪ್ರ. ಶಿವಬಸವಸ್ವಾಮಿಗಳು
    • ಶ್ರೀಮ.ನಿ.ಪ್ರ. ನಿರ್ವಾಣಸ್ವಾಮಿಗಳು
    • ಶ್ರೀಮ.ನಿ.ಪ್ರ. ಚಂದ್ರಶೇಖರಸ್ವಾಮಿಗಳು
    • ಶ್ರೀಮ.ನಿ.ಪ್ರ. ವಿದ್ವಾನ್ ಇಮ್ಮಡಿ ಡಾ. ಶಿವಬಸವಸ್ವಾಮಿಗಳು
    • ಶ್ರೀಮ.ನಿ.ಪ್ರ. ವಿದ್ವಾನ್ ಡಾ. ಶರತ್ ಚಂದ್ರಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಪರಂಪರೆಯ ಗುರುಗಳ ಗದ್ದುಗೆಗಳು ಇದ್ದು, ನಿತ್ಯಪೂಜೆ ಹಾಗೂ ಹಿರಿಯ ಗುರುಗಳ ಪುಣ್ಯಾರಾಧನೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಉಪನ್ಯಾಸ ಮತ್ತು ಅನ್ನದಾಸೋಹ ಕಾರ್ಯಕ್ರಮಗಳು ನೇರವೇರುತ್ತವೆ.

ಸಾಮಾಜಿಕ ಕಾರ್ಯಗಳು:

ಮಠದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಪ್ರಸಾದ ನಿಲಯಗಳನ್ನು ಪ್ರಾರಂಭಿಸಲಾಗಿದೆ. ಈ ಸಂದರ್ಭದಲ್ಲಿ ಉಪನ್ಯಾಸ ಮತ್ತು ಅನ್ನದಾಸೋಹ ಕಾರ್ಯಕ್ರಮಗಳು ನೇರವೇರುತ್ತವೆ.