ಶ್ರೀ ವಿರಕ್ತ ಮಠ, ಕರೋಹಟ್ಟಿ

ವಿಳಾಸ:

ಷ.ಬ್ರ.ಸ್ವ ಶ್ರೀ ಬಸವಲಿಂಗ ದೇಶಿಕೇಂದ್ರಸ್ವಾಮಿಗಳವರು, ಶ್ರೀ ವಿರಕ್ತ ಮಠ, ಕರೋಹಟ್ಟಿ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ- 571124
ಮೊ. +919448553745, +917619175242

ಮಠದ ವಿವರ:

ಟಿ. ನರಸೀಪುರ ತಾಲ್ಲೂಕಿನ ಕರೋಹಟ್ಟಿಯಲ್ಲಿರುವ ವಿರಕ್ತಮಠವು 1912ರಲ್ಲಿ ಶ್ರೀ ಸಿದ್ಧಮಲ್ಲಿಕಾರ್ಜುನ ಸ್ವಾಮಿಗಳಿಂದ ಪ್ರಾರಂಭಗೊಂಡು, ನಂತರ ಶ್ರೀ ಗುರುಲಿಂಗ ದೇಶಿಕೇಂದ್ರ ಸ್ವಾಮಿಗಳ ಕಾಲದಲ್ಲಿ ವಿರಕ್ತ ಸಂಪ್ರದಾಯದ ಮಠವಾಗಿ ಅಭಿವೃದ್ಧಿಯಾಯಿತು. ಕಾವೇರಿಪುರದಲ್ಲಿ ಸ್ಥಾಪಿತವಾದ ಶ್ರೀ ಗುರುಮಲ್ಲೇಶ್ವರ ದಾಸೋಹಮಠವು 1998ರ ಏಪ್ರಿಲ್ 29ರಂದು ದೇವನೂರು ಮಠದ ಆಶೀರ್ವಾದದಿಂದ ಸ್ಥಾಪಿತವಾಯಿತು.

ಪರಂಪರೆ:

  1. ಷ.ಬ್ರ.ಸ್ವ ಶ್ರೀ ಸಿದ್ಧಮಲ್ಲಿಕಾರ್ಜುನ ಸ್ವಾಮಿಗಳು
  2. ಷ.ಬ್ರ.ಸ್ವ ಶ್ರೀ ಗುರುಲಿಂಗ ದೇಶಿಕೇಂದ್ರ ಸ್ವಾಮಿಗಳು
  3. ಷ.ಬ್ರ.ಸ್ವ ಶ್ರೀ ಶಿವಲಿಂಗ ದೇಶಿಕೇಂದ್ರ ಸ್ವಾಮಿಗಳು
  4. ಷ.ಬ್ರ.ಸ್ವ ಶ್ರೀ ಭಕ್ತಚಾತುರ್ಯ ಸ್ವಾಮಿಗಳು
  5. ಷ.ಬ್ರ.ಸ್ವ ಶ್ರೀ ಬಸವಲಿಂಗ ದೇಶಿಕೇಂದ್ರಸ್ವಾಮಿಗಳು(ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದಲ್ಲಿ ಪ್ರತಿದಿನ ಭಜನೆ, ಕೀರ್ತನೆ, ನಿತ್ಯಪೂಜಾ, ಶಿವದೀಕ್ಷೆ ಮುಂತಾದ ಧಾರ್ಮಿಕ ಸೇವೆಗಳನ್ನು ನಡೆಸಲಾಗುತ್ತಿದೆ. ಜ್ಯೋತಿಷ್ಯ ಮತ್ತು ವೇದ ಅಧ್ಯಯನದಿಂದಾಗಿ ಧಾರ್ಮಿಕ ಪಾಠ ಮತ್ತು ಮಾರ್ಗದರ್ಶನಗಳು ನೀಡಲಾಗುತ್ತಿವೆ.

ಸಾಮಾಜಿಕ ಕಾರ್ಯಗಳು:

ದಾಸೋಹ ಸೇವೆ, ಸಾಮೂಹಿಕ ವಿವಾಹ, ನೂತನ ಕಟ್ಟಡ ನಿರ್ಮಾಣ, ಬಡವರಿಗೆ ಆಹಾರ ವಿತರಣೆಯಂತಹ ಹಲವಾರು ಸಾಮಾಜಿಕ ಸೇವೆಗಳನ್ನು ಮಠ ನಡೆಸಿ ಜನಮನ್ನಣೆಗೆ ಪಾತ್ರವಾಗಿದೆ.