ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠ, ರೇಚಂಬಳ್ಳಿ

ವಿಳಾಸ:

ಷ.ಬ್ರ.ಸ್ವ.ಶ್ರೀ ಮಹಾದೇವಸ್ವಾಮಿಗಳವರು, ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠ, ರೇಚಂಬಳ್ಳಿ, ಕಾಗಲವಾಡಿ ಅಂಚೆ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ
ಮೊ.+919611850873

ಮಠದ ಇತಿಹಾಸ:

ಈ ಭಾಗದ ಪ್ರಮುಖ ಮಠವೆಂದರೆ ಸೋಮಹಳ್ಳಿ ಶಾಖಾ ಮಠವಾದ ಶ್ರೀ ಪಟ್ಟದಮಠ. ಈ ಮಠವನ್ನು ೧೯೫೬ ರಲ್ಲಿ ಸೋಮಹಳ್ಳಿ ಮಠದ ಶ್ರೀ ಗುರುಮಲ್ಲಸ್ವಾಮಿಗಳು ಸ್ಥಾಪಿಸಿದರು. ಶ್ರೀ ಮಠವು ೧೯೫೬ ರಿಂದ ೧೯೭೧ ದವರೆಗೆ ದಾಸೋಹ ಮಠವಾಗಿತ್ತು ನಂತರ ೧೯೭೧ ರಿಂದ ಪಟ್ಟದ ಮಠವಾಗಿ ಬೆಳವಣಿಗೆ ಹೊಂದಿದೆ.

ಪರಂಪರೆ:

  1. ಷ.ಬ್ರ.ಸ್ವ.ಶ್ರೀ ಗುರುಮಲ್ಲಸ್ವಾಮಿಗಳು
  2. ಷ.ಬ್ರ.ಸ್ವ.ಶ್ರೀ ರುದ್ರಮುನಿಸ್ವಾಮಿಗಳು
  3. ಷ.ಬ್ರ.ಸ್ವ.ಶ್ರೀ ಮಹಾದೇವಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

  • ಕಾರ್ತಿಕ ಪೂಜೆ
  • ಅಮಾವಾಸ್ಯೆ ಪೂಜೆ
  • ಧನುರ್ಮಾಸ ಪೂಜೆ
  • ಬಸವ ಜಯಂತಿ
  • ಭಜನೆ ಕಾರ್ಯಕ್ರಮಗಳು
  • ವಿವಾಹ ಮದುವೆ ಕಾರ್ಯಕ್ರಮಗಳು
  • ಶಾಸನ ಪಠಣ – ಶ್ರೀವ್ಯಾಸ ಮಹಾಋಷಿ ಕುರಿತ ಶಾಸನವನ್ನು ಶ್ಲಾಘಿಸಿ, ಶರಣರ ಮಹತ್ವವನ್ನು ಸಾರುತ್ತಾರೆ
  • ಪ್ರತಿ ವರ್ಷ ಅಗಸ್ಟ್‌ ನಂತರ ವಾರ್ಷಿಕ ಸಮ್ಮೇಳನ – ಸುತ್ತಮುತ್ತಲಿನ ಹರಗುರು ಚರ ಮೂರ್ತಿಗಳನ್ನು ಆಹ್ವಾನಿಸಿ ಆಯೋಜನೆ

ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳು:

  • ಭಕ್ತರಿಗೆ ಪ್ರತಿದಿನ ಪ್ರಸಾದ ವ್ಯವಸ್ಥೆ
  • ೨೦೦೬: ಚಾಮರಾಜನಗರ ಜಿಲ್ಲಾ ಮಠಾಧೀಶರ ಗೋಷ್ಠಿ ಆಯೋಜನೆ
  • ನಿರ್ಗತಿಕರಿಗಾಗಿ ಕುಟೀರ ಯೋಜನೆ
  • ಗ್ರಾಮೀಣ ಬಡ ಮಕ್ಕಳಿಗಾಗಿ ಶಿಕ್ಷಣ ನೀಡಲು ಕಾನ್ವೆಂಟ್ ಆರಂಭಿಸುವ ಯೋಜನೆ
  • ಆಧ್ಯಾತ್ಮ ಚಿಂತನೆ ಹಾಗೂ ಶರಣರ ತತ್ವಗಳ ಪ್ರಚಾರ
  • ಬೇರೆ ಬೇರೆ ಭಾಗಗಳಲ್ಲಿ ಉಪನ್ಯಾಸ ಹಾಗೂ ಧಾರ್ಮಿಕ ಪ್ರವಚನ
  • ಪ್ರತಿ ವರ್ಷ ಪೂರ್ವ ಗುರುಗಳ ಆರಾಧನೆ