ವಿಳಾಸ:
ನಿ.ಪ್ರ.ಸ್ವ. ಶ್ರೀ ಚಿದಾನಂದಸ್ವಾಮಿಗಳವರು, ಶ್ರೀ ಹೊಸಮಠ, ಶಂಕರಮಠದ ರಸ್ತೆ, ಮೈಸೂರು – 570004ಮೊ. +919448079448
ಮಠದ ವಿವರ:
400 ವರ್ಷಗಳ ಹಿಂದೆ ಹುಬ್ಬಳ್ಳಿಯ ಶ್ರೀ ಸಂಗನಬಸವ ಸ್ವಾಮಿಗಳು ದೇಶದ ಜಾಗೃತ ಕ್ಷೇತ್ರಗಳನ್ನು ಸುತ್ತಿ ಕುಂಭಕೋಣಂನಲ್ಲಿ ನೆಲೆಸಿ ಬಳಿಕ ಮೈಸೂರಿಗೆ ಆಗಮಿಸಿದರು. ಅವರು ದೊಡ್ಡಕೆರೆ ದೇವರಾಜಸಾಗರ ಏರಿಯ ಕೆಳಭಾಗದಲ್ಲಿ ತಪಸ್ಸು ಮಾಡುತ್ತಿದ್ದ ಸಂದರ್ಭದಲ್ಲಿ ಶಿವಶರಣೆ ಮಲ್ಲಿಗಮ್ಮ ಮೈಸೂರಿನ ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದರು. ಪ್ರತಿದಿನ ಪೂಜೆಗೆಂದು ಬಂದಾಗ ಶ್ರೀ ಸಂಗನಬಸವ ಸ್ವಾಮಿಗಳು ಆಶೀರ್ವಾದ ನೀಡಿದರು. ಮಲ್ಲಿಗಮ್ಮನವರು ಮಠವನ್ನು ಕಟ್ಟಿಸುತ್ತಾರೆ. ಆದ್ದರಿಂದ ಈ ಮಠವನ್ನು ‘ಮಲ್ಲಿಗಮ್ಮನ ಮಠ’ ಎಂದೂ ಕರೆಯಲಾಗುತ್ತಿತ್ತು.
ಪರಂಪರೆ:
- ನಿ.ಪ್ರ.ಸ್ವ. ಶ್ರೀ ಸಂಗನಬಸವಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಶಾಂತವೀರಸ್ಪಾಮಿಗಳು
- ನಿ.ಪ್ರ.ಸ್ವ. ಶ್ರೀ ಕುಮಾರ ಯತಿಗಳು ಮತ್ತು ವೀರೇಶರು
- ನಿ.ಪ್ರ.ಸ್ವ. ಶ್ರೀ ಶಿವಪೂಜಾ ಶಿವಲಿಂಗ ಶಿವಯೋಗೀಂದ್ರರು
- ನಿ.ಪ್ರ.ಸ್ವ. ಶ್ರೀ ಬಸವಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ರಾಚೋಟಿದೇವರು
- ನಿ.ಪ್ರ.ಸ್ವ. ಶ್ರೀ ಚಿಕ್ಕಬಸವಲಿಂಗಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಪರ್ವತ ದೇಶಿಕರು
- ನಿ.ಪ್ರ.ಸ್ವ. ಶ್ರೀ ರುದ್ರಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಸಿದ್ಧಲಿಂಗಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಸಿದ್ಧಬಸವ ಶಿವಯೋಗಿಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಗುರುಶಾಂತದೇಶಿಕರು
- ನಿ.ಪ್ರ.ಸ್ವ. ಶ್ರೀ ಗುರುನಂಜಸ್ವಾಮಿಗಳು ಮತ್ತು ಶ್ರೀ ಗುರುಪಾದಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಶಿವಲಿಂಗಸ್ಟಾಮಿಗಳು
- ನಿ.ಪ್ರ.ಸ್ವ. ಶ್ರೀ ಗುರುಮಲ್ಲಸ್ಟಾಮಿಗಳು
- ನಿ.ಪ್ರ.ಸ್ವ. ಶ್ರೀ ಪರದೇಶಿಸ್ಟಾಮಿಗಳು
- ನಿ.ಪ್ರ.ಸ್ವ. ಶ್ರೀ ಸಿದ್ಧಬಸವರಾಜಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಬಸವಲಿಂಗಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಗುರುಶಾಂತಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಚಿದಾನಂದಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
- ಶ್ರೀಮಠದಲ್ಲಿ ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ಪೂಜೆಗಳು ಮತ್ತು ಲಿಂಗಾರ್ಚನೆ ನಡೆಯುತ್ತವೆ.
- ಪ್ರತಿವಾರ ಭಾನುವಾರ ಹಾಗೂ ಸೋಮವಾರ ವಿಶೇಷ ಪೂಜೆ ಹಾಗೂ ಭಕ್ತರಿಗೆ ಪ್ರವಚನದ ವ್ಯವಸ್ಥೆ.
- ಮಹಾಶಿವರಾತ್ರಿ, ಬಸವ ಜಯಂತಿ, ಕಾರ್ತಿಕ ಮಾಸ ಪೂಜೆ, ಶ್ರಾವಣ ಮಾಸ ಮುಂತಾದ ಪವಿತ್ರ ಸನ್ನಿವೇಶದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು.
- ಶ್ರಾವಣ ಮಾಸದಲ್ಲಿ ಪ್ರತಿದಿನ ಭಜನೆ, ಪೂಜೆ ಮತ್ತು ಲಿಂಗಾರ್ಚನೆ
- ಸಾರ್ವಜನಿಕವಾಗಿ ಲಿಂಗಧಾರಣಾ ಸಂಸ್ಕಾರ, ಉಪನಯನ, ವಿವಾಹ ಮುಂತಾದ ಧಾರ್ಮಿಕ ವಿಧಿಗಳ ನೆರವಿನ ವ್ಯವಸ್ಥೆ.
- ದೈನಂದಿನ ಅನ್ನದಾನ ವ್ಯವಸ್ಥೆ
ಸಾಮಾಜಿಕ ಕಾರ್ಯಗಳು:
- ವಿದ್ಯಾರ್ಥಿ ನಿಲಯದ ಸ್ಥಾಪನೆ (1962): ಶ್ರೀ ಗುರುಶಾಂತ ಸ್ವಾಮಿಗಳ ಕಾಲದಲ್ಲಿ ವಿದ್ಯಾರ್ಥಿಗಳಿಗೆ ವಾಸದ ವ್ಯವಸ್ಥೆಯಾಗಿ ನಿಲಯ ಕಟ್ಟಡ ನಿರ್ಮಾಣ.
- ನಟರಾಜ ಪ್ರತಿಷ್ಠಾನ (1986): ನಿಕಟವರ್ಗದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನಂಬಿಕಾಸ್ಪದ ಸಂಸ್ಥೆಯಾಗಿ ದಾಖಲಾಗಿದ್ದು, ಹಲವಾರು ಚಟುವಟಿಕೆಗಳನ್ನು ಆಯೋಜಿಸುತ್ತಿದೆ.
- ಶ್ರೀ ನಟರಾಜ ಶಿಶು ಸಂರಕ್ಷಣಾ ಕೇಂದ್ರ, ಮೈಸೂರು: ಶಿಶು ಪರಿರಕ್ಷಾ ಕೇಂದ್ರ.
- ಶ್ರೀ ನಟರಾಜ ಕಾನ್ವೆಂಟ್ (JC ನಗರ, ಮೈಸೂರು): ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿಸಲಾದ ಪ್ರಾಥಮಿಕ ಶಾಲೆ
- ಹಿರಿಯರ ಸೇವೆ,ಯೋಗ ಶಿಬಿರಗಳು, ಪ್ರವಚನಗಳು, ಧಾರ್ಮಿಕ ಉತ್ಸವಗಳು ನಡೆಯುತ್ತಿವೆ.
- ಗ್ರಂಥ ಪ್ರಕಾಶನ ಕಾರ್ಯ: ಶ್ರೀ ಬಸವಲಿಂಗ ಸ್ವಾಮಿಗಳ ಕಾಲದಲ್ಲಿ ಹಲವು ವೀರಶೈವ ಧರ್ಮದ ಗ್ರಂಥಗಳು ಸಂಪಾದನೆ ಹಾಗೂ ಪ್ರಕಾಶನಗೊಂಡಿವೆ.