ವಿಳಾಸ:
ಷ.ಬ್ರ.ಸ್ವ. ಶ್ರೀ ಮಹಾ೦ತಸ್ವಾಮಿಗಳವರು, ಶ್ರೀ ಗುರುಮಲ್ಲೇಶ್ಮರ ಮಹಾಸ೦ಸ್ಥಾನ ದಾಸೋಹ ಮಠ, ದೇವನೂರು , ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ – 571219 ಮೊ: +919972726282
ಮಠದ ವಿವರ:
ನಂಜನಗೂಡು ತಾಲ್ಲೂಕಿನ ದೇವನೂರು ಶಾಲ್ಲೂಕು ಕೇಂದ್ರದಿಂದ ಪೂರ್ವಕ್ಕೆ ಹನ್ನೆರಡು ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಸುಮಾರು ೧೫೦ ವರ್ಷಗಳ ಹಿಂದೆ ಶ್ರೀ ಗುರುಮಲ್ಲೇಶ್ವರ ದಾಸೋಹ ಸಂಸ್ಥಾನ ಮಠವು ಸ್ಥಾಪನೆಯಾಗಿ, ದೇವನೂರಿನ ಹೆಸರನ್ನು ದಶದಿಕ್ಕಿಗೆ ಹರಡುವಂತೆ ಮಾಡಿದೆ.ಹನ್ನೆರಡನೆಯ ಶತಮಾನದಲ್ಲಿ ಶರಣರ ಕ್ರಾಂತಿಯಿಂದ ವೀರಶೈವ ಧರ್ಮ ಜಾಗೃತಗೊಂಡಿತು. ನಂತರ ಶರಣರ ಸಂದೇಶಗಳ ಪ್ರಚಾರ ಹದಿನೈದನೆಯ ಶತಮಾನದಲ್ಲಿ ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರ ಕಾಲದಲ್ಲಿ ನೂರೊಂದು ವಿರಕ್ತರು ಧರ್ಮವನ್ನು ಬೆಳಗಿಸಿದರು.ಅವರಲ್ಲೊಬ್ಬರಾದ ಶ್ರೀ ಗುರುಮಲ್ಲಯ್ಯನವರು ಶಿವಮೊಗ್ಗ ಜಿಲ್ಲೆಯ ಸವಳಂಗ ಗ್ರಾಮದವರು. ತಂದೆ ತಾಯಿಗಳು ದಾಸೋಹ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಖ್ಯಾತರಾಗಿದ್ದರು. ಇವರ ಕುಟುಂಬವನ್ನು ಮೈಸೂರು ಅರಸರು ಗೌರವಿಸಿದರು.ಮೈಸೂರಿನಲ್ಲಿ ಸಾಧನೆಗೈದ ನಂತರ ಶ್ರೀ ಗುರುಮಲ್ಲೇಶ್ವರರು ದೇವನೂರಿಗೆ ಪಾದಾರ್ಪಣೆ ಮಾಡಿದರು. ಪಟೇಲ್ ಸುಬ್ಬೇಗೌಡರ ಮನೆಯಲ್ಲಿ ಬೃಹತ್ ಬ್ರಹ್ಮಪಿಶಾಚಿಯ ಪೀಡಿತನವನ್ನು ನಿವಾರಣೆ ಮಾಡಿದ ನಂತರ, ಜನರ ಭಕ್ತಿ ಹೆಚ್ಚಿತು ಮತ್ತು ಮಠದ ಚಟುವಟಿಕೆಗಳು ವಿಸ್ತರಿಸಿದವು.ದೇವನೂರಿನಲ್ಲಿ ಸ್ಥಾಪಿಸಿದ ಮಠವನ್ನು ದಾಸೋಹ, ಧರ್ಮಪ್ರಸಾರ ಮತ್ತು ಸಮಾಜಸೇವೆಗಾಗಿ ಉಪಯೋಗಿಸಿದ ಶ್ರೀ ಗುರುಮಲ್ಲೇಶ್ವರರು, ಅನೇಕ ಶಿಷ್ಯರನ್ನು ನೇಮಿಸಿ ಜವಾಬ್ದಾರಿಗಳನ್ನು ಹಂಚಿದರು. ಈ ಮೂಲಕ ದೇವನೂರು, ಮಹಾದಾಸೋಹದ ಕೇಂದ್ರಬಿಂದುವಾಯಿತು.ದೇವನೂರು ದಾಸೋಹ ಮಹಾಸಂಸ್ಥಾನ ಮಠವು ಹಲವಾರು ದಶಕಗಳಿಂದ ಲಿಂಗಾಯತ ಪರಂಪರೆ ಹಾಗೂ ದಾಸೋಹ ಸಂಸ್ಕೃತಿಯನ್ನು ಪೋಷಿಸುತ್ತಿದ್ದು, ನಾಡಿನ ಬಡ ಮತ್ತು ಹಿಂದುಳಿದ ಸಮುದಾಯಗಳಿಗೆ ಆಹಾರ, ಆಶ್ರಯ ಹಾಗೂ ವಿದ್ಯಾಭ್ಯಾಸದ ಅವಕಾಶವನ್ನು ಕಲ್ಪಿಸುತ್ತಿದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಗುರುಶಾಂತೇಶ್ವರ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವಾನಂದಪುರಿ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಬಸವಪ್ರಭು ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವಪ್ರಭು ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಮಹಾ೦ತಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಪ್ರತಿದಿನ ಪೂಜೆ, ದಾಸೋಹ ಸೇವೆ, ಮಾಸಿಕ ಭಜನೆ ಕಾರ್ಯಕ್ರಮಗಳು, ಶಿವರಾತ್ರಿ, ಬಸವ ಜಯಂತಿ ಮುಂತಾದ ಧಾರ್ಮಿಕ ಆಚರಣೆಗಳು ಇಲ್ಲಿ ವಿಜೃಂಭಣೆಯಿಂದ ನಡೆಯುತ್ತವೆ.
ಸಾಮಾಜಿಕ ಕಾರ್ಯಗಳು:
ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ನಿತ್ಯದಾಸೋಹ ಮತ್ತು ವಿದ್ಯಾಭ್ಯಾಸಕ್ಕೆ ಬೆಂಬಲ, ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು ಮುಂತಾದವುಗಳನ್ನು ನಿರಂತರವಾಗಿ ನಡೆಸಲಾಗುತ್ತದೆ.