ವಿಳಾಸ:
ಶ್ರೀ ಪ್ರಭುಸ್ವಾಮಿಯವರು, ವ್ಯವಸ್ಥಾಪಕರು, ಶ್ರೀ ಶಿವಾಯ ನಮಃ ಮಠ, ನಂ.639, ಶಿವರಾಂಪೇಟೆ, ಮೈಸೂರು – 570001ಮೊ. +919242941923
ಮಠದ ವಿವರ:
ಮೈಸೂರು ನಗರದ ದೇವರಾಜ ಮೊಹಲ್ಲಾದಲ್ಲಿ ಶ್ರೀ ಶಿವಾಯ ನಮಃ ಮಠವು ಸ್ಥಾಪನೆಯಾಗಿದೆ. ಪುರಾತನ ಕಾಲದಲ್ಲಿ ಶ್ರೀ ಶಿವಾಯ ನಮಃ ಸ್ವಾಮಿಗಳು ಲೋಕಸಂಚಾರ ಕೈಗೊಂಡು ಇಲ್ಲಿಗೆ ಬಂದು ನೆಲೆಸಿದ್ದು, ಮಠವನ್ನು ಸ್ಥಾಪನೆ ಮಾಡಿದ್ದರಿಂದ ಈ ಮಠಕ್ಕೆ ‘ಶ್ರೀ ಶಿವಾಯ ನಮಃ ಮಠ’ ಎಂಬ ಹೆಸರು ಬಂದಿದೆ.
ಪರಂಪರೆ:
- ಶ್ರೀ ಮ.ನಿ.ಪ್ರ. ಶಿವಾಯ ನಮಃಸ್ಥಾಮಿಗಳು
- ಶ್ರೀ ಮ.ನಿ.ಪ್ರ. ಶ್ರೀಪಾದಸ್ವಾಮಿಗಳು
- ಶ್ರೀ ಮ.ನಿ.ಪ್ರ. ಜಯದೇವಸ್ಥಾಮಿಗಳು
- ಶ್ರೀ ಮ.ನಿ.ಪ್ರ. ಪಡಕ್ಷರಿ ದೇಶಿಕೇಂದ್ರಸ್ಥಾಮಿಗಳು
ಧಾರ್ಮಿಕ ಕಾರ್ಯಗಳು:
ಮಠದಲ್ಲಿ ಒಂದು ಗದ್ದುಗೆ ಸ್ಥಾಪನೆಯಾಗಿದ್ದು ನಿತ್ಯಪೂಜೆ ನಡೆಯುತ್ತಿದೆ.
ಶೈಕ್ಷಣಿಕ ಸೇವೆ:
ಶಿಶುವಿಹಾರ, ಸಂಸ್ಕೃತ ಶಾಲೆ, ಹಿಂದಿ ಶಾಲೆ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಜೊತೆಗೆ ಮಠದ ಆವರಣದಲ್ಲಿ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿ ಬಡಮಕ್ಕಳಿಗೆ ಆಶ್ರಯ ಕಲ್ಪಿಸಲಾಗಿದೆ.