ಶ್ರೀ ಗುರುಲಿಂಗ ಜಂಗಮ ದೇವರ ಮಠ, ಗಾವಡಗೆರೆ

ವಿಳಾಸ:

ಷ.ಬ್ರ.ಸ್ವ ಶ್ರೀ ನಟರಾಜ ಸ್ವಾಮಿಗಳವರು, ಶ್ರೀ ಗುರುಲಿಂಗ ಜಂಗಮ ದೇವರ ಮಠ, ಗಾವಡಗೆರೆ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ – 571610
ಮೊ. +919448800733

ಮಠದ ವಿವರ:

ಪುಣಸೂರು ತಾಲ್ಲೂಕಿನ ಗಾವಡಗೆರೆಯು ತಾಲ್ಲೂಕು ಕೇಂದ್ರದಿಂದ ಉತ್ತರಕ್ಕೆ 8 ಕಿಮೀ ದೂರದಲ್ಲಿದೆ. ಇಲ್ಲಿ ಶ್ರೀ ಗುರುಲಿಂಗ ಜಂಗಮದೇವರ ಮಠವು ಸ್ಥಾಪನೆಯಾಗಿ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಸುಮಾರು ಎರಡು ಶತಮಾನಗಳ ಹಿಂದೆ ಅಸ್ತಿತ್ವದಲ್ಲಿದ್ದ ಮಠವು ಕಾರಣಾಂತರದಿಂದ ಶಿಥಿಲಗೊಂಡಿತ್ತು. ನಂತರ ತಪಸ್ವಿಗಳಾದ ಶ್ರೀ ನಂಜುಂಡ ಶಿವಯೋಗಿಗಳವರು ಗಾವಡಗೆರೆಯ ಪಶ್ಚಿಮ ಭಾಗದಲ್ಲಿ ಮಠವನ್ನು ಪುನರ್ ಸ್ಥಾಪಿಸಿದರು. ಈ ಮಠವು ಗುರು, ಲಿಂಗ, ಜಂಗಮ ತತ್ವಗಳನ್ನು ಒಳಗೊಂಡ ವೀರಶೈವ ಶಾಖೆಯಾಗಿ ಪರಿಣಮಿಸಿತು.

ಪರಂಪರೆ:

  1. ಷ.ಬ್ರ.ಸ್ವ ಶ್ರೀ ನಂಜುಂಡ ಶಿವಯೋಗಿಗಳು
  2. ಷ.ಬ್ರ.ಸ್ವ ಶ್ರೀ ನಟರಾಜ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

  • ಶ್ರೀ ಶಿವನಂಜುಂಡ ಶಿವಯೋಗಿಗಳ ವಾರ್ಷಿಕ ಆರಾಧನೆಯನ್ನು ಧಾರ್ಮಿಕ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತಿದೆ.
  • ಮಠದ ಹೊಲದಲ್ಲಿರುವ ಪುರಾತನ ಗದ್ದುಗೆ ಮತ್ತು ಕರ್ತೃಗುರುಗಳ ಗದ್ದುಗೆಗೆ ಪೂಜೆ ಮಾಡಲಾಗುತ್ತಿದೆ.
  • ಶ್ರಾವಣ, ಕಾರ್ತೀಕ ಮಾಸ ಮತ್ತು ಯುಗಾದಿಯಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿವೆ.
    ಪ್ರತಿದಿನ ದಾಸೋಹ ಸೇವೆ ನಡೆಯುತ್ತಿದೆ.

ಸಾಮಾಜಿಕ ಕಾರ್ಯಗಳು:

  • ಶ್ರೀ ಶಿವನಂಜುಂಡ ಶಿವಯೋಗಿಗಳ ಹೆಸರಿನಲ್ಲಿ ಉಚಿತ ವಿದ್ಯಾರ್ಥಿನಿಲಯ ಪ್ರಾರಂಭಿಸಿ ಬಡ ಮಕ್ಕಳಿಗೆ ಆಶ್ರಯ ನೀಡಲಾಗಿದೆ.
  • ಮಠದ ಆವರಣದಲ್ಲಿ ಪ್ರೌಢಶಾಲೆ ಹಾಗೂ ಸಂಸ್ಕೃತ ಪಾಠಶಾಲೆ ಆರಂಭಿಸಲಾಗಿದೆ.