ವಿಳಾಸ:
ನಿ.ಪ್ರ.ಸ್ವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರು, ಶ್ರೀ ಸಿದ್ಧರ ಹಳ್ಳಿ, ಪಾರಮಾರ್ಥ ಗವಿಮಠ, ಚಿದರವಳ್ಳಿ – ಬೊಮ್ಮನಹಳ್ಳಿ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ ಮೊ. +919740231000, +919731003999
ಮಠದ ವಿವರ:
ಶ್ರೀ ಗವಿಮಠವು ಚಿದರಹಳ್ಳಿಯ ವಾಯುವ್ಯದಿಕ್ಕಿಗೆ 1 ಕಿ.ಮೀ ದೂರದಲ್ಲಿರುವ ಸಿದ್ಧರಗಿರಿಯ ಕಲ್ಲುಬೆಟ್ಟದ ತಪ್ಪಲಿನಲ್ಲಿ ಸ್ಥಾಪಿತವಾಗಿದೆ. ಬೆಟ್ಟದ ಹಿಂಬದಿಯಲ್ಲಿ ಹರಡುವ ಕಲ್ಲು ಶ್ರೇಣಿಗಳ ಮಧ್ಯೆ ಈ ಮಠವು ಪ್ರಕೃತಿದತ್ತ ರಮಣೀಯತೆಯನ್ನು ಹೊಂದಿದೆ. 1640ರಲ್ಲಿ ತಮಿಳುನಾಡಿನ ಅರುಣಾಚಲದಿಂದ ಬಂದ ಶಿವಯೋಗಿಯೊಬ್ಬರು ಈ ಪ್ರದೇಶದ ಏಕಾಂತತೆಗೆ ಆಕರ್ಷಿತರಾಗಿ ಇಲ್ಲಿ ಗವಿಯಲ್ಲಿ ಅನುಷ್ಠಾನ ಪ್ರಾರಂಭಿಸಿದರು. ಇವರ ಭಕ್ತಿಶ್ರದ್ಧೆಯಿಂದ ಪ್ರಭಾವಿತರಾದ ಸ್ಥಳೀಯರು ಗುರುಗಳ ದರ್ಶನಕ್ಕಾಗಿ ಬರಲು ಪ್ರಾರಂಭಿಸಿದರು. ಈ ಶ್ರೇಷ್ಠ ಯೋಗಿಗೆ ‘ಶ್ರೀ ಅರುಣಾಚಲಸ್ವಾಮಿ’ ಎಂದು ಹೆಸರಿಟ್ಟು ಗೌರವಿಸಲಾಯಿತು.
ಪರಂಪರೆ:
- ಶ್ರೀ ಅರುಣಾಚಲ ಸ್ವಾಮಿಗಳು
- ಶ್ರೀ ಗುರು ಶಾಂತಮೂರ್ತಿ ಸ್ವಾಮಿಗಳು
- ಶ್ರೀ ಷಡಕ್ಷರಿ ಶಿವಯೋಗಿಗಳು
- ಶ್ರೀ ಸದಾಶಿವ ದೇಶಿಕೇಂದ್ರ ಸ್ವಾಮಿಗಳು
- ಶ್ರೀ ಶಿವರುದ್ರ ದೇಶಿಕೇಂದ್ರ ಸ್ವಾಮಿಗಳು
- ಶ್ರೀ ಬಾಲ ಷಡಕ್ಷರಿ ಸ್ವಾಮಿಗಳು
- ಶ್ರೀ ಚನ್ನಸದಾಶಿವ ದೇಶಿಕೇಂದ್ರ ಸ್ವಾಮಿಗಳು
- ನಿ.ಪ್ರ.ಸ್ವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಸಾಮಾಜಿಕ ಕಾರ್ಯಗಳು: