ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ, ಕಾಮಗೆರೆ

ವಿಳಾಸ:

ಷ.ಬ್ರ.ಸ್ವ. ಶ್ರೀ ಇಮ್ಮಡಿ ನಂಜುಂಡ ರಾಜೇಂದ್ರಮಹಾಸ್ವಾಮಿಗಳು, ಪಟ್ಟದಮಠ, ಕಾಮಗೆರೆ, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.

ಮಠದ ವಿವರ:

ಕಾಮಗೆರೆ-ಶ್ರೀ ಪಟ್ಟದ ಮಠ-ಕೊಳ್ಳೆಗಾಲ ಮತ್ತು ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಸಿಗುವ ಕಾಮಗೆರೆಯಲ್ಲಿ ಶ್ರೀ ಪಟ್ಟದ ಮಠ ಮತ್ತು ಶ್ರೀ ದಾಸೋಹ ಮಠ ಪ್ರಾರಂಭವಾಗಿ ಇಲ್ಲಿನ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆದಿದೆ. ಶ್ರೀ ಭೋಗನಂಜಪ್ಪ ಶಿವಾಚಾರ್ಯಸ್ವಾಮಿಗಳು ಸುಮಾರು ನೂರೈವತ್ತು ವರ್ಷಗಳ ಹಿಂದೆ ಈ ಮಠವನ್ನು ಸ್ಥಾಪಿಸಿ ಧರ್ಮ ನೆಲೆಗೊಳ್ಳುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಶ್ರೀ ಶೈಲಪೀಠದ ಶಾಖಾ ಮಠವಾಗಿ ಸ್ಥಾಪನೆಯಾಯಿತೆಂದು ತಿಳಿದು ಬರುತ್ತದೆ. ಅಂದು ಸ್ಥಾಪನೆಗೊಂಡ ಮಠ ಈ ತನಕ ಧಾರ್ಮಿಕ ಕೆಲಸಗಳನ್ನು ನಡೆಸಿಕೊಂಡು ಬಂದಿದೆ.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಭೋಗನಂಜಪ್ಪ ಶಿವಾಚಾರ್ಯಸ್ವಾಮಿಗಳು
  2. ಷ.ಬ್ರ.ಸ್ವ. ಶ್ರೀ ಚನ್ನಬಸಪ್ಪ ಶಿವಾಚಾರ್ಯಸ್ವಾಮಿಗಳು
  3. ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು
  4. ಷ.ಬ್ರ.ಸ್ವ. ಶ್ರೀ ನಂಜುಂಡ ಶಿವಾಚಾರ್ಯಸ್ವಾಮಿಗಳು
  5. ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು
  6. ಷ.ಬ್ರ.ಸ್ವ. ಶ್ರೀ ಇಮ್ಮಡಿ ನಂಜುಂಡ ರಾಜೇಂದ್ರಮಹಾಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಶ್ರೀ ಚನ್ನಬಸವ ಶಿವಾಚಾರ್ಯಸ್ವಾಮಿಗಳು ನಾಡಿನ ನಾನಾ ಭಾಗಗಳಲ್ಲಿ ಸಂಚರಿಸಿ ಜನರನ್ನು ಜಾಗೃತಗೊಳಿಸಿ ವೀರಶೈವ ಧರ್ಮದ ಆಚರಣೆಗಳನ್ನು ಪ್ರಚಾರ ಮಾಡಿದರು. ಅನೇಕರಿಗೆ ಲಿಂಗದೀಕ್ಷೆ ನೀಡಿ ಧರ್ಮ ಬೆಳೆಯುವಂತೆ ಮಾಡಿದರು.

ಸಾಮಾಜಿಕ ಕಾರ್ಯಗಳು: