ವಿಳಾಸ:
ನಿ.ಪ್ರ.ಸ್ವ. ಶ್ರೀ. ವಿದ್ವಾನ್ ಜಡೆಸ್ವಾಮಿಗಳವರು, ಶ್ರೀ ಹಳ್ಳದ ವಿರಕ್ತ ಮಠ, ಹಂಗಳ, ಗುಂಡ್ಲುಪೇಟೆ ತಾಲೂಕು,ಚಾಮರಾಜನಗರ ಜಿಲ್ಲೆ – 571126.ಮೊ. +919632952441
ಮಠದ ವಿವರ:
ಹಂಗಳದ-ಶ್ರೀ ವಿರಕ್ತ ಮಠ(ಹಳ್ಳದಮಠ)-ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ತಾಲ್ಲೂಕು ಕೇಂದ್ರದಿಂದ ದಕ್ಷಿಣಕ್ಕೆ ಎಂಟು ಕಿ.ಮೀ ದೂರದಲ್ಲಿದೆ. ಇಲ್ಲಿ ಶ್ರೀ ವಿರಕ್ತಮಠ ಸ್ಥಾಪನೆಯಾಗಿ ಧಾರ್ಮಿಕ ಚಟುವಟಿಕೆಗಳ ಕೇಂದ್ರ ಬಿಂದುವಾಗಿ ಬೆಳೆದಿವೆ. ಈ ಭಾಗದ ಪ್ರಮುಖ ಮಠವೆಂದರೆ ಶ್ರೀ ವಿರಕ್ತ ಮಠ ಅಥವಾ ಹಳ್ಳದಮಠ. ಒಂದು ನಂಬಿಕೆಯ ಪ್ರಕಾರ ಮತ್ತು ಪ್ರಸ್ತುತ ಇರುವಾ ಶ್ರೀಗಳ ಅಭಿಪ್ರಾಯದ ಪ್ರಕಾರ ಈ ಮಠವೂ ೨೫೦ -೩೦೦ ವರ್ಷಗಳ ಹಿಂದೆ ಸ್ಥಾಪಿತವಾಗಿದೆ ಎಂದೂ ತಿಳಿದು ಬರುತ್ತದೆ.
ಪರಂಪರೆ:
- ಶ್ರೀ.ಮ.ನಿ.ಪ್ರ. ನಿರಂಜನ ಶಿವಯೋಗಿಗಳು
- ಶ್ರೀ.ಮ.ನಿ.ಪ್ರ. ಮುದ್ದು ವೀರಸ್ವಾಮಿಗಳು
- ಶ್ರೀ.ಮ.ನಿ.ಪ್ರ. ಜಡೆಸ್ವಾಮಿಗಳು
- ಶ್ರೀ.ಮ.ನಿ.ಪ್ರ. ಎರಡನೆಯ ನಿರಂಜನಸ್ವಾಮಿಗಳು
- ಶ್ರೀ.ಮ.ನಿ.ಪ್ರ. ಜಡೆಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ, ಸಾಮಾಜಿಕ ಕಾರ್ಯಗಳು:
- ತ್ರಿಕಾಲ ಪೂಜೆ, ಮಹಾಶಿವರಾತ್ರಿ ವಿಶೇಷ ಪೂಜೆ.
- ಬಸವಜಯಂತಿ, ಗ್ರಾಮದೇವತೆಗಳ ಹಬ್ಬ ಹಮ್ಮಿಕೊಳ್ಳಲಾಗುವುದು.
- ಹಿರಿಯ ಗುರುಗಳ ಆರಾಧನೆ ಸಂದರ್ಭದಲ್ಲಿ ಉಪನ್ಯಾಸ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು.
- ಬಡಮಕ್ಕಳಿಗಾಗಿ ವಿದ್ಯಾರ್ಥಿನಿಲಯ ಸ್ಥಾಪನೆ.
೧೯೯೦ರಲ್ಲಿ ಸ್ಥಾಪಿತವಾದ ಶೈಕ್ಷಣಿಕ ಸಂಸ್ಥೆಗಳಲ್ಲಿ ನರ್ಸರಿ ಶಾಲೆ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಚಾಲನೆಯಲ್ಲಿವೆ. ಇವು ಗ್ರಾಮೀಣ ಮಕ್ಕಳು ಶಿಕ್ಷಣ ಪಡೆಯಲು ನೆರವಾಗುತ್ತಿದೆ. ಪ್ರಸ್ತುತ ಶ್ರೀ ಜಡೆಸ್ವಾಮಿಗಳು ಧಾರ್ಮಿಕ ಸೇವೆಯ ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.