ವಿಳಾಸ:
ಷ.ಬ್ರ.ಸ್ವ. ಶ್ರೀ ಇಮ್ಮಡಿ ಮುರುಘುರಾಜೇಂದ್ರಸ್ವಾಮಿಗಳವರು, ಶ್ರೀ ಮುರುಘುರಾಜೇಂದ್ರಸ್ವಾಮಿ ಮಹಾಸಂಸ್ಥಾನ ಮಠ, ಮರಿಯಾಲ (ಅಂಚೆ), ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ ಮೊ.+919901262100
ಮಠದ ವಿವರ:
ಈ ಮಠವನ್ನು 120 ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಧಾರವಾಡದಿಂದ ಬಂದ ಶ್ರೀ ಮುರುಘುರಾಜೇಂದ್ರಸ್ವಾಮಿಗಳು ಸ್ಥಾಪಿಸಿದರು. ಇವರು ಗುರುಮಲ್ಲೇಶ್ವರರ ಸಮಕಾಲೀನರಾಗಿದ್ದು, ಗಣಿಗನೂರು, ಕೊತ್ತೇಗಾಲ, ನರಸೀಪುರ ಮುಂತಾದ ಸ್ಥಳಗಳಲ್ಲಿ ಧರ್ಮಪ್ರಚಾರ ಮಾಡಿದರು. ಮರೆಯಾಲ ಗ್ರಾಮದ ಮಹದೇಶ್ವರ ದೇವಾಲಯದಲ್ಲಿ ಮಹದೇಶ್ವರರು ಪ್ರತ್ಯಕ್ಷರಾಗಿ ದೇವದೂತನಂತೆ ಶರಣತತ್ವದ ಕಾರ್ಯಕ್ಕೆ ಪ್ರೇರಣೆಯನ್ನು ನೀಡಿದರು ಮರೆಯಾಲ ಶ್ರೀ ಮುರುಘುರಾಜೇಂದ್ರಸ್ವಾಮಿಗಳ ಮಹಾಸಂಸ್ಥಾನ ಮಠವು ಶ್ರೀ ಶರಣ ಸಂಪ್ರದಾಯವನ್ನು ಮುಂದುವರಿಸುತ್ತಿರುವ ಪವಿತ್ರ ಧಾರ್ಮಿಕ ಕೇಂದ್ರವಾಗಿದೆ. ಇದು ಸಿದ್ದಾಂತ, ತಪಸ್ಸು ಮತ್ತು ಸೇವೆಯ ಪ್ರತೀಕವಾಗಿದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಮುರುಘ ರಾಜೇಂದ್ರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಮಹಾಂತ ದೇಶಿಕೇಂದ್ರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸದಾಶಿವ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಇಮ್ಮಡಿ ಮಹಾಂತಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಇಮ್ಮಡಿ ಮುರುಘುರಾಜೇಂದ್ರಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
- ದೈನಂದಿನ ಪೂಜೆ ಮತ್ತು ಅನ್ನದಾನ
- ಮಹಾ ಶಿವರಾತ್ರಿ, ಗುರು ಪೌರ್ಣಿಮಾ ಉತ್ಸವ
- ವಚನ ಚಿಂತನ ಸಭೆಗಳು
ಸಾಮಾಜಿಕ ಕಾರ್ಯಗಳು:
- ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ವಿದ್ಯಾಭ್ಯಾಸ
- ರಕ್ತದಾನ ಶಿಬಿರಗಳು
- ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳು