ಶ್ರೀ ಪಡುವಲು ಮಠ, ಬಿಡಗಲು

ವಿಳಾಸ:

ನಿ.ಪ್ರ.ಸ್ವ. ಶ್ರೀ ಮಹಾದೇವಸ್ವಾಮಿಗಳವರು, ಶ್ರೀ ಪಡುವಲು ಮಠ, ಬಿಡಗಲು, ಸರಗೂರು ತಾಲ್ಲೂಕು, ಮೈಸೂರು ಜಿಲ್ಲೆ.
ಮೊ. +919481528665

ಮಠದ ವಿವರ:

ಪಡುವಲು ಶ್ರೀ ವಿರಕ್ತಮಠವು ಸರಗೂರು ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಬಿಡಗಲು ಗ್ರಾಮದ ಹೊರವಲಯದಲ್ಲಿ ಪಶ್ಚಿಮ ವಾಹಿನಿಯಾದ ಕಪಿಲಾ ನದಿ ದಡದಲ್ಲಿದೆ ಸುಮಾರು 350 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀಮಠದಲ್ಲಿ ಇಲ್ಲಿಯವರೆಗೆ ಪಂಚಪೀಠಾಧ್ಯಕ್ಷರು ತಮ್ಮ ತಪಶಕ್ತಿಯಿಂದ ಶ್ರೀಮಠದ ಪರಂಪರೆಯನ್ನು ಬೆಳೆಸಿದ್ದಾರೆ ಶ್ರೀಮಠವನ್ನು ಶ್ರೀ ವೀರ ಸ್ವಾಮಿಗಳು ಸ್ಥಾಪಿಸಿದರು ನಂತರ ಇವರು ಕಾಳಿಂಗ ಸರ್ಪವನ್ನು ಜಯಿಸಿದ ಪವಾಡದಿಂದ ಶ್ರೀ ಕಾಳಒಡೆಯಗುರುಗಳು ಎಂದು ಖ್ಯಾತಿಯಾದರು. ಪ್ರಸ್ತುತ ಇರುವ ಶ್ರೀ ಮಹಾದೇವಸ್ವಾಮಿಗಳಿಗೆ 02/ 11/ 1981 ರಲ್ಲಿ ಪಟಾಧಿಕಾರ ಆಯಿತು 28.11.2007ರಲ್ಲಿ ಹಿಂದಿನ ಎಲ್ಲಾ ಗುರುಗಳ ಗದ್ದಿಗೆಯನ್ನು ಉದ್ಘಾಟಿಸಲಾಯಿತು.ಇದೇ ದಿನದಂದು ಶ್ರೀಕ್ಷೇತ್ರದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯ ವನ್ನು ನಿರ್ಮಾಣ ಮಾಡಲಾಯಿತು

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ವೀರ ಸ್ವಾಮಿಗಳು (ಸ್ಥಾಪಕರು)
  2. ನಿ.ಪ್ರ.ಸ್ವ. ಶ್ರೀ ಕಾಳಒಡೆಯಗುರುಗಳು (ಕಾಳಿಂಗ ಸರ್ಪ ಜಯಿಸಿದ ಪವಾಡದಿಂದ ಖ್ಯಾತಿ)
  3. ನಿ.ಪ್ರ.ಸ್ವ. ಶ್ರೀ ಶಿವನಂಜೇ ಸ್ವಾಮಿಗಳು
  4. ನಿ.ಪ್ರ.ಸ್ವ. ಶ್ರೀ ಗುರುಪಾದ ಸ್ವಾಮಿಗಳು
  5. ನಿ.ಪ್ರ.ಸ್ವ. ಶ್ರೀ ಪುಟ್ಟಸ್ವಾಮಿಗಳು
  6. ನಿ.ಪ್ರ.ಸ್ವ. ಶ್ರೀ ಶಿವಪ್ಪ ಸ್ವಾಮಿಗಳು
  7. ನಿ.ಪ್ರ.ಸ್ವ. ಶ್ರೀ ಮಹಾದೇವಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಕಳೆದ 25 ವರ್ಷಗಳಿಂದ ಪ್ರತಿ ತಿಂಗಳು ಹುಣ್ಣಿಮೆ ದಿನಗಳಲ್ಲಿ ಶಿವಾನುಭವ ಸಮ್ಮೇಳನ, ವಿಶೇಷ ಪೂಜೆಗಳು, ಮತ್ತು ಭಕ್ತರಿಗೆ ಪ್ರಸಾದ ವ್ಯವಸ್ಥೆ ನಡೆಯುತ್ತಿದೆ. ಕಾರ್ತಿಕ ಮಾಸ ಮತ್ತು ಧನುರ್ಮಾಸಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.

ಸಾಮಾಜಿಕ ಕಾರ್ಯಗಳು:

ಕಳೆದ 10 ವರ್ಷಗಳಿಂದ ಶ್ರೀಮಠವು ವೀರಶೈವ ಲಿಂಗಾಯತ ವಧು-ವರರ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿದೆ. 2019–20ನೇ ಸಾಲಿನಲ್ಲಿ ಎಸ್.ಕೆ.ಜಿ. ಗುರುಕುಲ ಶಾಲೆಯನ್ನು ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಲಾಗಿದೆ.