ಶ್ರೀ ಪಟ್ಟದ ಮಠ, ಗುಂಡೇಗಾಲ

ವಿಳಾಸ:

ಷ.ಬ್ರ.ಸ್ವ.ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರು, ಶ್ರೀ ಪಟ್ಟದಮಠ, ಗುಂಡೇಗಾಲ, ಪಾಳ್ಯ ಪೋಸ್ಟ್, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ
ಮೊ. +918183934949

ಮಠದ ವಿವರ:

ಗುಂಡೇಗಾಲ ಗ್ರಾಮದಲ್ಲಿ ಇರುವ ಪ್ರಮುಖ ಮಠವೆಂದರೆ ಸಾಲೂರು ಮಠದ ಶಾಖೆಯಾಗಿ ಬೆಳೆದು ಬಂದಿರುವ ಶ್ರೀ ಪಟ್ಟದಮಠ. ಈ ಮಠವನ್ನು ೨೨-೦೫-೨೦೦೩ರಂದು ಸಾಲೂರು ಶ್ರೀಗಳ ನೇತೃತ್ವದಲ್ಲಿ ಸ್ಥಾಪಿಸಲಾಯಿತು. ಮಠವು ಇದೀಗ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಭಕ್ತರನ್ನು ಸೆಳೆಯುವಂತಾಗಿ ಬೆಳೆದಿದೆ. ಇತ್ತೀಚೆಗೆ ಮಠದಲ್ಲಿ ಪ್ರಾರ್ಥನಾ ಮಂದಿರವನ್ನು ಸಹ ನಿರ್ಮಿಸಲಾಗಿದೆ.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು
  2. ಷ.ಬ್ರ.ಸ್ವ. ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

  • ಪ್ರತಿವರ್ಷ ಮೇ ೨೨ ರಂದು ಸ್ವಾಮಿಗಳ ಆರಾಧನೆ
  • ಅಮಾವಾಸ್ಯೆ ಪೂಜೆ
  • ಶಿವರಾತ್ರಿ ಪೂಜೆ
  • ಧನುರ್ಮಾಸದ ಪೂಜೆ
  • ಬಸವ ಜಯಂತಿ
  • ನಿತ್ಯ ಧಾರ್ಮಿಕ ಆಚರಣೆಗಳು

ಸಾಮಾಜಿಕ ಕಾರ್ಯಗಳು:

  • ಸಾಮೂಹಿಕ ವಿವಾಹ ಕಾರ್ಯಕ್ರಮಗಳು
  • ಸಾಮಾಜಿಕ ಸೇವಾ ಕಾರ್ಯಗಳು
  • ಊರಿನ ಸಹಕಾರದೊಂದಿಗೆ ಜನಸೇವಾ ಯೋಜನೆಗಳು