ವಿಳಾಸ:
ಷ.ಬ್ರ.ಸ್ವ. ಶ್ರೀ ಬಾಲಷಡಕ್ಷರಿ ಸ್ವಾಮಿಗಳವರು, ಶ್ರೀ ಪಟ್ಟದಮಠ, ಚಿಕ್ಕಿಂದುವಾಡಿ, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ- 571443 ಮೊ. +919900682623, 8073632663
ಮಠದ ವಿವರ:
ಚಿಕ್ಕಿಂದುವಾಡಿ ಗ್ರಾಮದಲ್ಲಿ ಸ್ಥಾಪಿತವಾದ ಶ್ರೀ ಪಟ್ಟದಮಠವು ಶ್ರೀ ಬಿಟ್ಟಮಂಡೇಶ್ವರರಿಂದ ಸ್ಥಾಪಿತವಾಯಿತು ಎಂದು ಪರಿಗಣಿಸಲಾಗಿದೆ. ಇವರು ಈ ಮಠದ ಮೂಲ ಗುರುಗಳಾಗಿ ಪರಿಗಣಿಸಲಾಗುತ್ತಿದ್ದು, ಮಠವು ಇಂದು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವಪೂರ್ಣವಾಗಿ ಬೆಳೆಯುತ್ತಿದೆ. ಮಠದ ಆವರಣದಲ್ಲಿ ಒಂದು ಗದ್ದುಗೆ ಹಾಗೂ ಬಿಟ್ಟಮಂಡೇಶ್ವರ ದೇವಸ್ಥಾನವೂ ಇದೆ. ನೂತನ ಮಠದ ನಿರ್ಮಾಣದೊಂದಿಗೆ ಭಕ್ತರ ಸಂಖ್ಯೆಯು ದ್ವಿಗುಣಗೊಂಡಿದೆ.
ಪರಂಪರೆ:
- ಷ.ಬ್ರ.ಸ್ವ.ಶ್ರೀ ಬಿಟ್ಟಮಂಡೇಶ್ವರ
- ಷ.ಬ್ರ.ಸ್ವ.ಶ್ರೀ ಬಸಪ್ಪದೇವರು
- ಷ.ಬ್ರ.ಸ್ವ.ಶ್ರೀ ಗಂಗಾಧರ ಮಹಾಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಬಾಲಷಡಕ್ಷರಿ ಸ್ವಾಮಿಗಳು
ಧಾರ್ಮಿಕ ಕಾರ್ಯಗಳು:
- ಕಾರ್ತಿಕ ಮಾಸ ಪೂಜೆ
- ಶ್ರೀ ಗಂಗಾಧರ ಮಹಾಸ್ವಾಮಿಗಳ ಆರಾಧನೆ
- ಶಿವರಾತ್ರಿ ಪೂಜೆ
- ಅಮಾವಾಸ್ಯೆ ಪೂಜೆ
- ಬಸವಜಯಂತಿ
- ದಿನಚರ ಧಾರ್ಮಿಕ ಆಚರಣೆಗಳು
ಸಾಮಾಜಿಕ ಕಾರ್ಯಗಳು:
- ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು
- ಉಚಿತ ದಾಸೋಹ
- ಅಧ್ಯಾತ್ಮದ ಬಗ್ಗೆ ಚರ್ಚೆ, ಉಪನ್ಯಾಸ
- ಬಸವಜಯಂತಿ ಕಾರ್ಯಕ್ರಮಗಳು
- ಧಾರ್ಮಿಕ ಶಿಬಿರಗಳು
- ಭಕ್ತರಿಗೆ ಭೋಧನೆ, ಅರಿವು ಮೂಡಿಸುವ ಕಾರ್ಯಕ್ರಮಗಳು