ಶ್ರೀ ಪಟ್ಟದ ಮಠ, ಹಂಗಳಪುರ

ವಿಳಾಸ:

ವ್ಯವಸ್ಥಾಪಕರು , ಶ್ರೀ ಪಟ್ಟದಮಠ, ಹಂಗಳಪುರ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ – 571126
ಮೊ. +919740289059 / +919844767099

ಮಠದ ವಿವರ:

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳಪುರದಲ್ಲಿ ಶ್ರೀ ಪಟ್ಟದ ಮಠವು ಸ್ಥಾಪನೆಯಾಗಿದೆ. ಹಂಗಳಪುರ ಗ್ರಾಮದ ಮಧ್ಯಭಾಗದಲ್ಲಿ ಸುತ್ತೂರು ಶಾಖಾಮಠವಾದ ಶ್ರೀ ಪಟ್ಟದಮಠವು ಸ್ಥಾಪನೆಯಾಗಿ ಇಲ್ಲಿನ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರಸ್ತುತ ಶ್ರೀಗಳು ೧೯೭೦ ರಿಂದಲೂ ಈ ಮಠದ ಕಾಯಕವನ್ನು ಮಾಡುತ್ತಿದ್ದು, 16/05/2025 ರಂದು ಲಿಂಗೈಕ್ಯರಾಗಿದ್ದಾರೆ.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಬಸವಲಿಂಗದೇವರು
  2. ಷ.ಬ್ರ.ಸ್ವ. ಶ್ರೀ ಚನ್ನಬಸವಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

  • ಶ್ರೀಮಠದಿಂದ ಭಕ್ತರಿಗೆ ಪ್ರತಿದಿನ ಉಚಿತ ಪ್ರಸಾದದ ವ್ಯವಸ್ಥೆ ಇರುತ್ತದೆ.
  • ಸಂಕ್ರಾಂತಿ, ಯುಗಾದಿ ಮುಂತಾದ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳನ್ನು ಗ್ರಾಮಸ್ಥರ ಸಹಕಾರದಿಂದ ನಡೆಸಲಾಗುತ್ತದೆ.
  • ವಿವಾಹ, ಗೃಹಪ್ರವೇಶ, ಲಿಂಗಸ್ಥಾಪನೆ, ಆರಾಧನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀಗಳು ಭಾಗವಹಿಸುತ್ತಾರೆ.
  • ಆಷಾಢ ಮಾಸದಲ್ಲಿ ಹಿರಿಯ ಶ್ರೀಗಳ ಆರಾಧನೆಯನ್ನು ಆಯೋಜಿಸಲಾಗುತ್ತದೆ.

ಸಾಮಾಜಿಕ ಕಾರ್ಯಗಳು: