ಶ್ರೀ ಪಟ್ಟದ ಮಠ, ಅರಕಲವಾಡಿ

ವಿಳಾಸ:

ಷ.ಬ್ರ.ಸ್ವ.ಶ್ರೀ ಬಸವಣ್ಣಸ್ವಾಮಿಗಳವರು, ಶ್ರೀ ಪಟ್ಟದ ಮಠ, ಅರಕಲವಾಡಿ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ – 571127.
ಮೊ. +919916034877 / +917899290677

ಮಠದ ವಿವರ:

ಅರಕಲವಾಡಿಯಲ್ಲಿ ಶ್ರೀ ಸಿದ್ಧಮಲ್ಲೇಶ್ವರ ದಾಸೋಹಮಠವು ಕ್ರಿ.ಶ. ೧೯೪೦ ರಲ್ಲಿ ಸ್ಥಾಪಿತವಾಯಿತು. ಇದು ಸೋಮಹಳ್ಳಿ ಶಿಲಾಮಠದ ಶಾಖಾಮಠವಾಗಿದೆ ಮತ್ತು ಪಟ್ಟದ ಮಠವೆಂದು ಪ್ರಸಿದ್ಧವಾಗಿದೆ. ಶ್ರೀ ಸಿದ್ದಮಲ್ಲಿಕಾರ್ಜುನಸ್ವಾಮಿಗಳು ಮಠದ ಸಂಸ್ಥಾಪಕರಾಗಿದ್ದಾರೆ. ಆರಂಭದಲ್ಲಿ ಕೈಹೆಂಚಿನ ಮನೆಗಳಲ್ಲಿ ಸ್ಥಾಪಿತವಾಗಿದ್ದ ಈ ಮಠವು, ೧೯೬೫ರಲ್ಲಿ ಊರ ಹೊರಗಿರುವ ಸ್ಥಳಕ್ಕೆ ಸ್ಥಳಾಂತರಗೊಂಡು ನೂತನವಾಗಿ ನಿರ್ಮಿಸಲಾಯಿತು.

ಪರಂಪರೆ:

  1. ಷ.ಬ್ರ.ಸ್ವ.ಶ್ರೀ ರಾಚಪ್ಪಸ್ವಾಮಿಗಳು
  2. ಷ.ಬ್ರ.ಸ್ವ.ಶ್ರೀ ಬಸವಣ್ಣ ಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

ಶ್ರೀಮಠದಲ್ಲಿ ಬಸವಜಯಂತಿ, ಧನೂರ್ಮಾಸ, ಶಿವರಾತ್ರಿ, ಲಿಂಗಾಧೀಕ್ಷೆ, ಬಸವ ತತ್ವ ಪ್ರಚಾರ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಶ್ರೀಗಳ ಮುಂದಾಳುತ್ವದಲ್ಲಿ ಪೂರ್ವಗುರುಗಳ ಆರಾಧನೆ, ಹಬ್ಬ-ಹರಿದಿನಗಳ ಆಚರಣೆ ನಡೆಯುತ್ತಿದೆ.

ಸಾಮಾಜಿಕ ಕಾರ್ಯಗಳು:

ಶ್ರೀಮಠವು ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಮಂಟಪವನ್ನು ನಿರ್ಮಿಸಿದೆ. ಈ ಮಂಟಪದ ಮೂಲಕ ತಾಳವಾಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಿಗೆ ಮದುವೆ ಹಾಗೂ ಸಮಾರೋಪ ಸಮಾರಂಭಗಳ ಅನುಕೂಲ ಒದಗಿಸಿದೆ. ಜೊತೆಗೆ ಸಭಾಭವನ, ವಿದ್ಯಾರ್ಥಿನಿಲಯ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ಮಾಣದೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ.