ವಿಳಾಸ:
ಷ.ಬ್ರ.ಸ್ವ.ಶ್ರೀ ನಟರಾಜಸ್ವಾಮಿಗಳವರು, ಶ್ರೀ ಶಂಕರದೇವರ ಮಠ, ಕುದೇರು, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ.ಮೊ.+919845639272
ಮಠದ ವಿವರ:
ಕುದೇರು ಗ್ರಾಮದಲ್ಲಿ ಐದು ಮಠಗಳು ಇದ್ದು, ಶಂಕರದೇವರ ಮಠವು ಪ್ರಮುಖವಾದ ಮಠವಾಗಿದೆ. ಈ ಮಠವು ಸುಮಾರು ೧೦೦ ವರ್ಷಗಳ ಇತಿಹಾಸ ಹೊಂದಿದ್ದು, ಸುತ್ತೂರು ಶಿವರಾತ್ರೀಶ್ವರ ಮಠದ ಶಾಖಾಮಠವಾಗಿರುತ್ತದೆ. ಮಠವು ಪುತ್ರವರ್ಗದ ಸಂಪ್ರದಾಯದ ಪ್ರಕಾರ ತನ್ನ ಧಾರ್ಮಿಕ ಕಾರ್ಯಚಟುವಟಿಕೆಗಳನ್ನು ಮುಂದುವರೆಸುತ್ತಿದೆ. ಸ್ಥಾಪಕರಾದ ಶ್ರೀ ಶಂಕರದೇವರು ಈ ಮಠವನ್ನು ಪ್ರಾರಂಭಿಸಿದರು. ನಂತರ ಶ್ರೀ ಮಹಾಂತಸ್ವಾಮಿಗಳು ಹಾಗೂ ಶ್ರೀ ನಟರಾಜಸ್ವಾಮಿಗಳು ಮಠದ ಅಭಿವೃದ್ಧಿಗೆ ಪ್ರಮುಖವಾಗಿ ಪಾತ್ರವಹಿಸಿದ್ದಾರೆ.
ಪರಂಪರೆ:
- ಷ.ಬ್ರ.ಸ್ವ.ಶ್ರೀ ಶಂಕರದೇವರು – ಮಠದ ಸ್ಥಾಪಕರು.
- ಷ.ಬ್ರ.ಸ್ವ.ಶ್ರೀ ಶಿವಬಸಪ್ಪಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಪುಟ್ಟಬುದ್ಧಿಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಮಲ್ಲಿಕಾರ್ಜುನಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ನಟರಾಜಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಬಸವಜಯಂತಿ, ಕಾರ್ತಿಕ ಮಾಸ, ಧನೂರ್ಮಾಸ, ಶಿವರಾತ್ರಿಪೂಜೆ, ಲಿಂಗದೀಕ್ಷೆ, ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸುತ್ತಿದ್ದಾರೆ. ಶ್ರೀ ನಟರಾಜಸ್ವಾಮಿಗಳು ಸಂಸೃತ ಮತ್ತು ವೇದ ಅಧ್ಯಯನ ಮಾಡಿ, ಗುರುಪರಂಪರೆಯ ಧರ್ಮಚಾರ್ಯರಾಗಿದ್ದಾರೆ. ಮಠದಲ್ಲಿ ಗದ್ದುಗೆ ಪೂಜೆ, ದೇವರ ಆರಾಧನೆ ಸೇರಿದಂತೆ ಎಲ್ಲಾ ಆಚರಣೆಗಳನ್ನು ಆಚರಿಸಲಾಗುತ್ತಿದೆ.