ಶ್ರೀ ವಿರಕ್ತ ಮಠ, ಮುಡಿಗುಡಂ

ವಿಳಾಸ:

ನಿ.ಪ್ರ.ಸ್ವ. ಶ್ರೀ ಶ್ರೀಕಂಠಸ್ವಾಮಿಗಳವರು, ಶ್ರೀ ವಿರಕ್ತಮಠ, ಮುಡಿಗುಡಂ, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ – 571110
ದೂರವಾಣಿ : 08224 320321 ಮೊ. +9880017457,

ಮಠದ ವಿವರ:

ಕೊಳ್ಳೆಗಾಲ ಪಟ್ಟಣದ ಸಮೀಪದಲ್ಲಿರುವ ಮುಡಿಗುಡಂ ಗ್ರಾಮದ ಶ್ರೀ ವಿರಕ್ತಮಠವು ಸುಮಾರು ೧೯೨೯ ರಲ್ಲಿ ಸ್ಥಾಪಿತವಾಗಿದ್ದು, ಇದು ಸ್ವಾತಂತ್ರ್ಯ ಮಠವಾಗಿದೆ. ಮಠವು ಶ್ರೀ ನಿರಂಜನಸ್ವಾಮಿಗಳಿಂದ ಪ್ರಾರಂಭವಾಗಿದ್ದು, ವೀರಶೈವ ಧರ್ಮದ ಬೆಳವಣಿಗೆಗೆ ಪ್ರಾಮುಖ್ಯತೆಯೊಂದಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದೆ.

ಪರಂಪರೆ:

  1. ನಿ.ಪ್ರ.ಸ್ವ. ಶ್ರೀ ನಿರಂಜನಸ್ವಾಮಿಗಳು
  2. ನಿ.ಪ್ರ.ಸ್ವ. ಶ್ರೀ ಶಿವರುದ್ರಸ್ವಾಮಿಗಳು
  3. ನಿ.ಪ್ರ.ಸ್ವ. ಶ್ರೀ ಶ್ರೀಕಂಠಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದಲ್ಲಿ ಬಸವಜಯಂತಿ, ಶಿವರಾತ್ರಿಪೂಜೆ, ಕಾರ್ತಿಕ ಪೂಜೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಗುರುಗಳು ಶರಣತತ್ತ್ವದ ಅಧ್ಯಯನದ ಜೊತೆಗೆ ಎಲ್ಲಾ ಧರ್ಮಗಳ ಗ್ರಂಥಗಳನ್ನು ಅಭ್ಯಾಸ ಮಾಡುವ ಮೂಲಕ ಜ್ಞಾನವನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಕಾರ್ಯಗಳು:

ಶ್ರೀ ಶ್ರೀಕಂಠಸ್ವಾಮಿಗಳು ಸಾವಯವ ಕೃಷಿಗೆ ಒಲವು ಹೊಂದಿದ್ದು ತಮ್ಮ ಬಿಡುವಿನ ವೇಳೆಯಲ್ಲಿ ಕೃಷಿಯಲ್ಲೂ ತೊಡಗಿದ್ದಾರೆ. ಮಠದ ಪರಿಸರದ ಸ್ವಚ್ಛತೆಗಾಗಿ ಹೂಗಿಡಗಳನ್ನು ಬೆಳೆಸಿದ್ದಾರೆ. ಮಠದ ಕಟ್ಟಡ ವಿಸ್ತರಣೆಯೊಂದಿಗೆ ಶ್ರೀ ಶಿವರುದ್ರಸ್ವಾಮಿಗಳ ಗದ್ದುಗೆಗೆ ಮಂಟಪ ನಿರ್ಮಾಣ ಮಾಡಲಾಗಿದೆ. ಸುಮಾರು ಏಳು ಎಕರೆ ಜಮೀನನ್ನು ಅಭಿವೃದ್ಧಿ ಪಡಿಸಿ ಮಠವನ್ನು ಶ್ರೇಷ್ಟವಾಗಿ ರೂಪಿಸಿದ್ದಾರೆ.