ಶ್ರೀ ವಿರಕ್ತ ಮಠ, ಮೂಡುಗೂರು

ವಿಳಾಸ:

ನಿ.ಪ್ರ.ಸ್ವ. ಶ್ರೀ ಇಮ್ಮಡಿ ಉದ್ದಾನ ಸ್ವಾಮಿಗಳವರು, ಶ್ರೀ ವಿರಕ್ತ ಮಠ, ಮೂಡುಗೂರು, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ.
ಮೊ.+919980906762

ಮಠದ ವಿವರ:

ಮೂಡುಗೂರು ಗ್ರಾಮದಲ್ಲಿರುವ ಶ್ರೀ ವಿರಕ್ತ ಮಠವು ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಗತಿಪರ ಮಠಗಳಲ್ಲಿ ಒಂದಾಗಿದೆ. ಇದು ಮೂಲತಃ ಪುತ್ರವರ್ಗದ ಮಠವಾಗಿದ್ದು, ಊರಿನ ಉತ್ತರ ದಿಕ್ಕಿಗೆ ಸುಮಾರು ೧ ಕಿ.ಮೀ ದೂರದಲ್ಲಿರುವ ಶಾಂತ ಪರಿಸರದಲ್ಲಿ ಸ್ಥಾಪಿತವಾಗಿದೆ. ಈ ಮಠವನ್ನು ಉತ್ತರ ಕರ್ನಾಟಕದಿಂದ ಬಂದ ಮಹಾನ್ ಯೋಗಿ ಶ್ರೀ ಉದ್ದಾನೇಶ್ವರರು ಸುಮಾರು ೫೦೦ ವರ್ಷಗಳ ಹಿಂದೆ ಸ್ಥಾಪಿಸಿದ್ದಾರೆ ಎಂಬ ನಂಬಿಕೆ ಇದೆ. ಅವರು ದಟ್ಟ ಅಡವಿಯ ಈ ಪ್ರದೇಶದಲ್ಲಿ ಅನುಷ್ಠಾನಗೊಂಡು, ತಪಸ್ಸುಮಗ್ನರಾಗಿ ಧಾರ್ಮಿಕ ಪವಾಡಗಳ ಮೂಲಕ ಭಕ್ತರಲ್ಲಿ ನಂಬಿಕೆ ಮತ್ತು ನಿಷ್ಠೆಯನ್ನು ಬೆಳೆಸಿದರು. ತಮ್ಮ ತಪಸ್ಸಿನ ಪರಾಕಾಷ್ಠೆಯಿಂದ ಭಕ್ತರು ಮಠವನ್ನು ನಿರ್ಮಿಸಿ ನೀಡಿದರು.

ಪರಂಪರೆ:

  1. ನಿ.ಪ್ರ.ಸ್ವ.ಶ್ರೀ. ಉದ್ದಾನ ಸ್ವಾಮಿಗಳು
  2. ನಿ.ಪ್ರ.ಸ್ವ.ಶ್ರೀ. ಶಿವಲಿಂಗ ಸ್ವಾಮಿಗಳು
  3. ನಿ.ಪ್ರ.ಸ್ವ.ಶ್ರೀ. ಚನ್ನಬಸವ ಸ್ವಾಮಿಗಳು
  4. ನಿ.ಪ್ರ.ಸ್ವ.ಶ್ರೀ. ಮಹಾದೇವ ಸ್ವಾಮಿಗಳು
  5. ನಿ.ಪ್ರ.ಸ್ವ.ಶ್ರೀ. ಇಮ್ಮಡಿ ಉದ್ದಾನ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಶ್ರೀ ಉದ್ದಾನಸ್ವಾಮಿಗಳ ಗದ್ದುಗೆ ಸಹಿತ ಮಠದ ನೂತನ ಕಟ್ಟಡದಲ್ಲಿ ಮೂವರು ಗುರುಗಳ ಗದ್ದುಗೆಗಳು ನಿರ್ಮಾಣಗೊಂಡಿವೆ ಇವುಗಳಿಗೆ ನಿತ್ಯಪೂಜೆ ಹಾಗೂ ವಿಶೇಷ ಪೂಜೆಗಳು: ಶ್ರಾವಣ ಮಾಸ ಕಾರ್ತಿಕ ಮಾಸ ಧನುರ್ಮಾಸ ಆರಾಧನಾ ಮಹೋತ್ಸವಗಳು: ಶ್ರೀ ಉದ್ದಾನಸ್ವಾಮಿಗಳು ಹಾಗೂ ಹಿರಿಯ ಗುರುಗಳಿಗೆ ಭಕ್ತರಿಗೆ ಪ್ರತಿದಿನ ಉಚಿತ ದಾಸೋಹ ವ್ಯವಸ್ಥೆ