ವಿಳಾಸ:
ಷ.ಬ್ರ.ಸ್ವ ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು, ಅರಮನೆ ಜಪದಕಟ್ಟೆ ಮಠ, ಶಂಕರಮಠದ ರಸ್ತೆ, ಮೈಸೂರು – 570004ಮೊ. +919448773220
ಮಠದ ವಿವರ:
ಮೈಸೂರು ನಗರದ ಶಂಕರಮಠದ ರಸ್ತೆಯಲ್ಲಿರುವ ಜಪದಕಟ್ಟೆಮಠವು ಶ್ರೀ ಉಜ್ಜಯಿನಿಪೀಠದ ಶಾಖಾ ಮಠವಾಗಿದೆ. ವಿಜಯನಗರದ ಅರಸರ ಅಶ್ರಯದಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಥಮವಾಗಿ ಸ್ಥಾಪಿಸಲ್ಪಟ್ಟ ಮಠವು ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿಗೆ ಸ್ಥಳಾಂತರಗೊಂಡಿದೆ ಎಂದು ಹೇಳಲಾಗುತ್ತದೆ. ಶ್ರೀ ಸೋಮಶೇಖರ ಶಿವಯೋಗಿಗಳು ಶ್ರೀರಂಗಪಟ್ಟಣದ ಕಾವೇರಿ ನದಿಯ ದಡದಲ್ಲಿ ಮಠವನ್ನು ಸ್ಥಾಪಿಸಿ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿ ಪ್ರಸಿದ್ಧಿ ಪಡೆದಿದ್ದರು. ಇವರ ತಪಸ್ಸಿಗೆ ನದಿಯ ಪ್ರವಾಹವೂ ಬಾಧೆಯಾಗದೆ ಹೋಯಿತ್ತೆಂದು ಪವಾಡ ಹೇಳಿಕೆಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರು ಈ ಪವಾಡ ಕೇಳಿ ಗುರುಗಳನ್ನು ಮೈಸೂರಿಗೆ ಕರೆಸಿಕೊಂಡು ಮಠವನ್ನು ಮೈಸೂರಿನಲ್ಲಿ ಸ್ಥಾಪಿಸಿದರು. ಈ ಮಠ ‘ಅರಮನೆ ಜಪದಕಟ್ಟೆ ಮಠ’ವೆಂದು ಪ್ರಸಿದ್ಧವಾಗಿದೆ.ಈ ಪರಂಪರೆಯ ನವಗುರುಗಳಾದ ಶ್ರೀ ಸದಾಶಿವ ಸ್ವಾಮಿಗಳ ಕಾಲದಲ್ಲಿ ಗುರುಕುಲ ಸ್ಥಾಪನೆ, ದಾಸೋಹ ವ್ಯವಸ್ಥೆ ನಡೆಯಿತು. ಇಮ್ಮಡಿ ಸದಾಶಿವ ಸ್ವಾಮಿಗಳು ಮಠವನ್ನು ಅಭಿವೃದ್ಧಿಪಡಿಸಿದರು. ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ‘ಜಗದ್ಗುರು’ ಪಟ್ಟ ಪಡೆದು ಮಠದ ಪರಂಪರೆಯನ್ನು ಮುಂದುವರಿಸಿದರು.
ಪರಂಪರೆ:
- ಷ.ಬ್ರ.ಸ್ವ ಶ್ರೀ ಸೋಮಶೇಖರ ಶಿವಯೋಗಿ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಗಂಗಾಧರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಗುರುಸಿದ್ದ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಶಿವಲಿಂಗ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಗುರುಪಾದ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಸಿದ್ಧಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಇಮ್ಮಡಿ ಗಂಗಾಧರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಸದಾಶಿವ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಗುರುಪಾದ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಮುಮ್ಮಡಿ ಗಂಗಾಧರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಗುರುಸಿದ್ದ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಮರುಳಸಿದ್ದ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಸಿದ್ದವೀರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಇಮ್ಮಡಿ ಗುರುಪಾದ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಗಂಗಾಧರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಸದಾಶಿವ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಮುಮ್ಮಡಿ ಸದಾಶಿವ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
- ಲಿಂಗಧಾರಣೆ
- ಶಿವದೀಕ್ಷೆ
- ಧಾರ್ಮಿಕ ಸಂಸ್ಕಾರ
- ವೀರಶೈವ ಧರ್ಮದ ಪ್ರಚಾರ
ಸಾಮಾಜಿಕ ಕಾರ್ಯಗಳು:
ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ‘ಸುಜ್ಞಾನಸದನ’ ಕಟ್ಟಡ ನಿರ್ಮಿಸಿ, ಶ್ರಾವಣ ಮಾಸದಲ್ಲಿ ಪೂಜಾ ಕಾರ್ಯಕ್ರಮಗಳು ಮತ್ತು ಉಪನ್ಯಾಸ ಗೋಷ್ಠಿಗಳನ್ನು ಪ್ರಾರಂಭಿಸಿದ್ದಾರೆ. ಅಮೃತಸಿಂಧು, ವಚನಬಿಂದು, ಚಾಕ್ಷುಷೋಪನಿಷತ್ ಗ್ರಂಥಗಳನ್ನು ರಚಿಸಿದ್ದಾರೆ. ಪಾಠಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸಹಾಯ ನೀಡಿದ್ದಾರೆ.