ಶ್ರೀ ಮಹಾಂತೇಶ್ವರ ಪಟ್ಟದ ಮಠ

ವಿಳಾಸ:

ಷ.ಬ್ರ.ಸ್ವ ಶ್ರೀ ಪರಶಿವಮೂರ್ತಿಸ್ವಾಮಿಗಳವರು, ಶ್ರೀ ಮಹಾಂತೇಶ್ವರ ಪಟ್ಟಿದ ಮಠ, ಬರಡನಪುರ, ಜಯಪುರ ಹೋಬಳಿ, ಮೈಸೂರು ತಾಲ್ಲೂಕು – 570008
ಮೊ.+919008071430

ಮಠದ ವಿವರ:

ಮೈಸೂರು ತಾಲೂಕಿನ ಬರಡನಪುರ ಗ್ರಾಮವನ್ನು “ಬಣ್ಣದಪುರ” ಎಂದೂ ಕರೆಯಲಾಗುತ್ತದೆ. ಈ ಗ್ರಾಮವು ಮೈಸೂರಿನಿಂದ ನೈರುತ್ಯಕ್ಕೆ ಸುಮಾರು 18 ಕಿ.ಮೀ. ದೂರದಲ್ಲಿದೆ. ಬರಡನಪುರದ ಹೊರ ಭಾಗದಲ್ಲಿ, ಸುಮಾರು 70 ವರ್ಷಗಳ ಹಿಂದೆ, ಯಳಂದೂರು ತಾಲ್ಲೂಕಿನ ಮಲಾರಪಾಳ್ಯದ ಶ್ರೀ ಮಹಾಂತೇಶ್ವರಸ್ವಾಮಿಗಳಿಂದ ದಾಸೋಹ ಮಠ ಸ್ಥಾಪಿಸಲಾಯಿತು. ಈ ಮಠವು ಈಗ “ಶ್ರೀ ಪಟ್ಟದ ಮಠ” ಎಂಬ ಹೆಸರಿನಿಂದ ಖ್ಯಾತಿ ಪಡೆದಿದೆ.

ಪರಂಪರೆ:

ಧಾರ್ಮಿಕ ಕಾರ್ಯಗಳು:

ಪ್ರತಿ ಅಮಾವಾಸ್ಯೆ ದಿನ ಗುರುಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯುತ್ತದೆ. ಆಗಮಿಸುವ ಭಕ್ತರಿಗೆ ಅನ್ನದಾಸೋಹ (ದಾಸೋಹ) ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿವರ್ಷ ಹಿರಿಯ ಲಿಂಗೈಕ್ಯ ಗುರುಗಳ ಆರಾಧನೆ ಹಮ್ಮಿಕೊಳ್ಳಲಾಗುತ್ತದೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಕಕ ವಿಚಾರಗೋಷ್ಠಿಗಳ ಮೂಲಕ ಜ್ಞಾನ ಮತ್ತು ಅನ್ನ ದಾಸೋಹ ಕಾರ್ಯಕ್ರಮಗಳು ನಡೆಯುತ್ತವೆ.

ಸಾಮಾಜಿಕ ಕಾರ್ಯಗಳು:

ಬಡ ಮಕ್ಕಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಜಯಪುರಕ್ಕೆ ಬರುವ ಮಕ್ಕಳಿಗೆ ಮಠದಲ್ಲಿ ವಸತಿ ಹಾಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಠದ ವತಿಯಿಂದ ಶಾಲೆಗಳನ್ನು ನಡೆಸಲಾಗುತ್ತಿದೆ. ಮೈಸೂರಿನ ಆಲನಹಳ್ಳಿಯಲ್ಲಿ ಬಡ ಹೆಣ್ನುಮಕ್ಕಳಿಗಾಗಿ ಉಚಿತ ಮಹಿಳಾ ವಿದ್ಯಾರ್ಥಿನಿಲಯವನ್ನೂ ನಡೆಸುತ್ತಿದ್ದಾರೆ.