ವಿಳಾಸ:
ಷ.ಬ್ರ.ಸ್ವ ಶ್ರೀ ಶಿವಲಿಂಗ ಸ್ವಾಮಿಗಳವರು, ಶ್ರೀ ಪಟ್ಟದ ಮಠ, ಮೇದಿನಿ, ಕಾವೇರಿಪುರ ಅಂಚೆ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ ಮೊ. +917899915080
ಮಠದ ವಿವರ:
ಟಿ. ನರಸೀಪುರ ತಾಲ್ಲೂಕಿನ ಮೇದಿನಿಯು ತಾಲ್ಲೂಕು ಕೇಂದ್ರದಿಂದ 28 ಕಿ.ಮೀ ದೂರದಲ್ಲಿದೆ, ಪಟ್ಟದಮಠ (ಮಧ್ಯದಮಠ) 1990ರ ಮೇ 9ರಂದು ಉದ್ಘಾಟನೆ ಆಗಿದ್ದು, ಪಶ್ಚಿಮದ ಹೊರಭಾಗದಲ್ಲಿ ಮಠದ ಕಟ್ಟಡ ನಿರ್ಮಾಣವಾಗಿದೆ.ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದ ಶಾಖಾಮಠವಾಗಿದೆ.
ಪರಂಪರೆ:
- ಷ.ಬ್ರ.ಸ್ವ ಶ್ರೀ ಶಿವಲಿಂಗ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಹಳೇ ಮಠದಲ್ಲಿರುವ ಎರಡು ಗದ್ದುಗೆಗಳಿಗೆ ಪೂಜಾಕಾರ್ಯ ನಡೆಯುವಂತೆ ಗುರುಗಳು ವ್ಯವಸ್ಥೆ ಮಾಡಿದ್ದಾರೆ. ಕಾರ್ತಿಕ, ಶ್ರಾವಣ ಮಾಸಗಳಲ್ಲಿ ಹಾಗೂ ಶಿವರಾತ್ರಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಭಜನೆ, ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಧರ್ಮಪ್ರಸಾರ ಕಾರ್ಯವನ್ನೂ ಮಾಡಲಾಗುತ್ತಿದೆ.
ಸಾಮಾಜಿಕ ಕಾರ್ಯಗಳು:
ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪನದ ಮೂಲಕ ಶೈಕ್ಷಣಿಕ ಅರಿವನ್ನು ಬೆಳೆಸುವ ಕೆಲಸ ಮಾಡುತ್ತಿದೆ.