ಶ್ರೀ ಪಟ್ಟದ ಮಠ, ಕುರುಬೂರು

ವಿಳಾಸ:

ಶ್ರೀ ಮಲ್ಲನಾಥ ಶಿವಾಚಾರ್ಯ ಸ್ವಾಮಿಗಳವರು, ಶ್ರೀ ಪಟ್ಟದ ಮಠ, ಕುರುಬೂರು, ಮೂಗೂರು ಅಂಚೆ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ
ಮೊ. +918867195276

ಮಠದ ವಿವರ:

ಕುರುಬೂರು ಗ್ರಾಮದಲ್ಲಿ 150 ವರ್ಷಗಳಿಗೂ ಹಿಂದೆಯೇ ಶ್ರೀಮಠ ಅಸ್ತಿತ್ವದಲ್ಲಿತ್ತು ಎಂಬುದು ತಿಳಿದುಬರುತ್ತದೆ. ಇದಕ್ಕೆ ಪೂರಕವೆಂಬಂತೆ ಈಗಲೂ ಊರಿನ ಉತ್ತರ ದಿಕ್ಕಿನಲ್ಲಿರುವ ಕಾಡನ್ನು ಮಠದ ಕಾಡು ಎಂದೇ ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಕೆತ್ತನೆಯ ಕಲ್ಲುಗಳು ಹಾಗೂ ಕಟ್ಟಡದ ಅವಶೇಷಗಳು ಕಾಣಸಿಗುತ್ತವೆ. ಹಿಂದೆ ಅಸ್ತಿತ್ವದಲ್ಲಿದ್ದ ಶ್ರೀಮಠ ಕಾಲಾನಂತರದಲ್ಲಿ ಮಠಾಧಿಪತಿಗಳಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಅಸ್ತಿತ್ವದಲ್ಲಿದ್ದ ಮಠವನ್ನು ಜೀರ್ಣೋದ್ಧಾರಗೊಳಿಸಲು ಷ.ಬ್ರ. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಶ್ರಮಿಸಿದರೆಂದು ತಿಳಿದುಬರುತ್ತದೆ. ಶ್ರೀಗಳು ದೇವನೂರು ಶ್ರೀ ಗುರುಮಲ್ಲೇಶ್ವರರ ಸಮಕಾಲೀನರಾಗಿದ್ದರು. ತಮ್ಮ ತಪಶಕ್ತಿ, ಕ್ರಿಯಾಶೀಲತೆಗಳಿಂದ ಶ್ರೀಮಠವನ್ನು ಬೆಳೆಸಿದರು. ಶ್ರೀಗಳು 1904ರಲ್ಲಿ ಲಿಂಗೈಕ್ಯರಾದರು. ನಂತರ ಷ.ಬ್ರ. ಶ್ರೀ ಯಜಮಾನ ಶಿವಾಚಾರ್ಯ ಸ್ವಾಮಿಗಳು ಅಧಿಕಾರವನ್ನು ವಹಿಸಿಕೊಂಡು, ಶ್ರೀಮಠದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದರು. ಅನಂತರ ಬಂದ ಷ.ಬ್ರ. ಶ್ರೀ ಮಲ್ಲಿನಾಥ ಶಿವಾಚಾರ್ಯ ಸ್ವಾಮಿಗಳು, ವಿದ್ವಾಂಸರು ಹಾಗೂ ಕವಿಗಳಾಗಿದ್ದ ಮೈಸೂರು ಶ್ರೀ ಅರಮನೆ ಪಂಚಗವಿ ಮಠದ ನಿ.ಪ್ರ.ಸ್ವ ಶ್ರೀ ಗೌರೀಶಂಕರ ಸ್ವಾಮಿಗಳೊಂದಿಗೆ ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡರು. ಶ್ರೀಗಳು ಅನೇಕ ಜನಪರ ಕಾರ್ಯಗಳನ್ನು ಕೈಗೊಂಡರು. ನಂತರ ಷ.ಬ್ರ, ಶ್ರೀ ಸದಾಶಿವ ಸ್ವಾಮಿಗಳು 1934ರಲ್ಲಿ ವಾಟಾಳು ಷ.ಬ್ರ. ಶ್ರೀ ಇಮ್ಮಡಿ ಬಸವಲಿಂಗ ಸ್ವಾಮಿಗಳಿಂದ ಅನುಗ್ರಹ ಪಡೆದು ಪಟ್ಟಾಧಿಕಾರಕ್ಕೆ ಬಂದರು. ಚೈತನ್ಯದ ಚಿಲುಮೆಯಾಗಿ, ನಿರರ್ಗಳವಾಗಿ ಪ್ರವಚನ ನೀಡುತ್ತಿದ್ದ ಶ್ರೀಗಳು ತಮ್ಮ ಅಪಾರ ಅನುಭವದಿಂದ ಭಕ್ತರನ್ನು ಸಂಸ್ಕಾರವಂತರನ್ನಾಗಿ ಮಾಡುವಲ್ಲಿ ನಿರತರಾಗಿದ್ದರು. 26.9.2010 ರಂದು ಶ್ರೀಗಳವರು ಲಿಂಗೈಕ್ಯರಾದರು. ಶ್ರೀಮಠದ ಕಟ್ಟಡ ಶಿಥಿಲವಾಗಿದ್ದರಿಂದ ಅದನ್ನು ಜೀರ್ಣೋದ್ಧಾರ ಮಾಡಬೇಕಾಗಿದ್ದ ಕಾರಣ ಮುಂದಿನ ಉತ್ತರಾಧಿಕಾರಿಗಳನ್ನು ನೇಮಿಸಲಾಗಿರಲಿಲ್ಲ. ಸುತ್ತೂರು ಶ್ರೀಕ್ಷೇತ್ರದಲ್ಲಿ ವ್ಯಾಸಂಗ ಮಾಡಿ, ಮೈಸೂರಿನ ಶ್ರೀ ಸುತ್ತೂರು ಶಾಖಾಮಠದ ಶ್ರೀ ಶಿವರಾತ್ರೀಶ್ವರ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀ ವಿಕಾಸ್‌ರವರನ್ನು ಶ್ರೀಮಠದ ಉತ್ತರಾಧಿಕಾರಿಗಳಾಗಿ ಇದೀಗ ಆಯ್ಕೆಮಾಡಿ ಪಟ್ಟಾಧಿಕಾರ ನೆರವೇರಿಸಲಾಗುತ್ತಿದೆ. ಶ್ರೀಮಠದ ಸಂಪನ್ಮೂಲ, ದಾನಿಗಳು ಮತ್ತು ಗ್ರಾಮಸ್ಥರ ನೆರವಿನಿಂದ ಶ್ರೀಮಠದ ಕಟ್ಟಡವನ್ನು ಪುನರ್‌ನಿರ್ಮಿಸಲಾಗಿದೆ. ಅದರ ಉದ್ಘಾಟನೆಯನ್ನು ಈಗ ಮಾಡಲಾಗುತ್ತಿದೆ.

ಪರಂಪರೆ:

  1. ಷ.ಬ್ರ.ಸ್ವ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮಿಗಳು
  2. ಷ.ಬ್ರ.ಸ್ವ ಶ್ರೀ ಯಜಮಾನ ಶಿವಾಚಾರ್ಯ ಸ್ವಾಮಿಗಳು
  3. ಷ.ಬ್ರ.ಸ್ವ ಶ್ರೀ ಮಲ್ಲಿನಾಥ ಶಿವಾಚಾರ್ಯ ಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

ಸಾಮಾಜಿಕ ಕಾರ್ಯಗಳು: